ಮಲ್ಯರಿಗೆ ಸ್ಕಾಚ್ ವ್ಹಿಸ್ಕಿ ಗಿಫ್ಟ್ ಆಗಿ ಕೊಟ್ಬಿಡಿ!

Posted By:
Subscribe to Oneindia Kannada

ಬೆಂಗಳೂರು, ಫೆ.26: ಪ್ರತಿ ಸಮಾರಂಭದಲ್ಲೂ ವಿಭಿನ್ನ, ವಿಶಿಷ್ಟ ಉಡುಗೊರೆಗಳನ್ನು ನೀಡುವ ಅಭ್ಯಾಸ ಇಟ್ಟುಕೊಂಡವರಿಗೆ ಹೊಸ ಐಡಿಯಾ ಇಲ್ಲಿದೆ. ಸಿಎಂ ಸಿದ್ದರಾಮಯ್ಯ ಅವರಿಗಾದರೆ ದುಬಾರಿ ವಾಚ್, ಲಂಡನ್ ಗೆ ಹಾರುತ್ತಿರುವ ಮಲ್ಯಗೆ #ScotchAsAGift ಅದು ಕೂಡಾ ಯುನೈಟೆಡ್ ಸ್ಪಿರಿಟ್ಸ್ ಸಂಸ್ಥೆಯದ್ದು ಆಗಬೇಕು.

ನಿಮ್ಮ ನಿಮ್ಮ ಅಂತಸ್ತು, ಕಾಸಿನ ಚೀಲದ ತೂಕದ ತಕ್ಕಂತೆ ವಿಶಿಷ್ಟ ಶೈಲಿ, ವೈಯಕ್ತಿಕವಾಗಿರುವಂಥ ಕೊಡುಗೆಗಳನ್ನು ನೀಡಬಹುದು. ಗುರುವಾರ ರಾತ್ರಿ ವಿಜಯ್ ಮಲ್ಯ ಅವರು ಯುನೈಟೆಡ್ ಸ್ಪಿರಿಟ್ಸ್ ಗೆ ಗುಡ್ ಬೈ ಹೇಳುವುದಕ್ಕೂ ಕೆಲ ಗಂಟೆಗಳ ಮುಂಚೆ ಬೆಂಗಳೂರಿನಲ್ಲಿ ಸ್ಕಾಚ್ ಗಿಫ್ಟ್ ನೀಡುವ ಐಡಿಯಾ ಬಹಿರಂಗ ಪಡಿಸಲಾಗಿತ್ತು. ['ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ!']

ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಮಲ್ಯ ಅವರು ರಾಜೀನಾಮೆ ನೀಡಿದ ಸುದ್ದಿ ಟ್ವೀಟ್ ಮೂಲಕ ತಿಳಿಯಿತು. ಇದನ್ನು ಓದಿಕೊಂಡವರೊಬ್ಬರು #ScotchAsAGift ಮೊದಲಿಗೆ ಮಲ್ಯರಿಗೆ ಕೊಟ್ಟರೆ ಹೇಗೆ? ಎಂದು ಜೋಕ್ ಕಟ್ ಮಾಡಿದರು.

ಶುಕ್ರವಾರ ಟ್ವಿಟ್ಟರ್ ನಲ್ಲಿ ಮಲ್ಯ ಅವರು ಲಂಡನ್ನಿಗೆ ಹಾರುತ್ತಿರುವುದರ ಬಗ್ಗೆ ತರಾವರಿ ಜೋಕ್ಸ್ ಬಂದಿದೆ ಕೂಡಾ. ಅದನ್ನು ಇಲ್ಲಿ ಓದಿಕೊಳ್ಳಿ. ಮಿಕ್ಕಂತೆ ಸ್ಕಾಚ್ ವ್ಹಿಸ್ಕಿ ಹಾಗೂ ಅದರ ಪ್ರಚಾರಕ್ಕೆ ನಿಂತಿರುವ ಬೆಡಗಿಯರ ಬಗ್ಗೆ ವರದಿ, ವಿಡಿಯೋ ಇಲ್ಲಿದೆ. [ವಿಸ್ಕಿ ಕುಡಿದರೆ ಕೆಮ್ಮು ಹೋಗಲೇ ಬೇಕು..!]

ಆದಾಯ ಹೆಚ್ಚಳ, ಅತಿ ಆಕಾಂಕ್ಷೆ ಹಾಗೂ ಜಾಗತಿಕ ಅಲೆಗೆ ತೆರೆದುಕೊಂಡಿರುವ ಪರಿಣಾಮ ಭಾರತದ ಕೊಡುಗೆಗಳ ಮಾರುಕಟ್ಟೆ ಕಳೆದ ಒಂದು ದಶಕದಲ್ಲಿ ವ್ಯಾಪಕವಾಗಿ ಬೆಳೆದಿದೆ. ಇಂದು ಕೊಡುಗೆಗಳನ್ನು ವೈಯಕ್ತಿಕ ಕೊಡುಗೆ, ಹಬ್ಬದ ಕೊಡುಗೆ ಮತ್ತು ಕಾರ್ಪೊರೇಟ್ ಕೊಡುಗೆ ಎಂದು ವರ್ಗೀಕರಿಸಬಹುದಾಗಿದೆ. ಸ್ಕಾಚ್ ವ್ಹಿಸ್ಕಿ ಬಗ್ಗೆ ಸೆಲೆಬ್ರಿಟಿಗಳು ನಮ್ಮ ಪ್ರತಿನಿಧಿ ಜೊತೆ ಏನು ಮಾತನಾಡಿದ್ದಾರೆ ಮುಂದೆ ಓದಿ...

ಸೆಲಿಬ್ರಿಟಿಗಳ ಕೈಲಿ ಸ್ಕಾಚ್ ವ್ಹಿಸ್ಕಿ

ಸೆಲಿಬ್ರಿಟಿಗಳ ಕೈಲಿ ಸ್ಕಾಚ್ ವ್ಹಿಸ್ಕಿ

ನಟಿ ಲಿಸಾ ಹೇಡನ್, ಚಿತ್ರಾಂಗದ ಸಿಂಗ್, ಶಿಬಾನಿ ದಂಡೇಕರ್ ಮತ್ತು ಯುನೈಟೆಡ್ ಸ್ಪಿರಿಟ್ಸ್ ಪ್ರೀಮಿಯಂ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿತೇಶ್ ಛಾಪ್ರು ಉಪಸ್ಥಿತರಿದ್ದರು. ಪುರುಷರಿಗೆ ಕೊಡಬಹುದಾದ ಅತ್ಯದ್ಭುತವಾದ ಕೊಡುಗೆಗಳ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್‍ನ ಸ್ಕಾಚ್ ವಿಸ್ಕಿ ಸಂಗ್ರಹವನ್ನು ಅನಾವರಣಗೊಳಿಸಲಾಯಿತು. ಉಡುಗೊರೆ ಪ್ಯಾಕ್ ನಲ್ಲಿ ಉತ್ಕೃಷ್ಟ ಸ್ಕಾಚ್ ವಿಸ್ಕಿಗಳಾದ ಬ್ಲ್ಯಾಕ್ ಡಾಗ್, ವ್ಯಾಟ್ 69, ಬ್ಲ್ಯಾಕ್ ಅಂಡ್ ವೈಟ್‍ಗಳು ಇವೆ.

ಪುರುಷ ಸ್ನೇಹಿತರಿಗೆ ಉಡುಗೊರೆ ನೀಡಲು ಆಯ್ಕೆ

ಪುರುಷ ಸ್ನೇಹಿತರಿಗೆ ಉಡುಗೊರೆ ನೀಡಲು ಆಯ್ಕೆ

ಅನುರಾಧಾ ಮೆನನ್ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮ ಪ್ರೇಕ್ಷಕರನ್ನು ಅತಿಯಾಗಿ ರಂಜಿಸಿತು. ಸೆಲೆಬ್ರಿಟಿಗಳಾದ ಲಿಸಾ ಹೇಡನ್, ಚಿತ್ರಾಂಗದ ಸಿಂಗ್ ಮತ್ತು ಶಿಬಾನಿ ದಂಡೇಕರ್ ಅವರು ತಾವು ಸ್ವೀಕರಿಸಿದ ಹಾಗೂ ಹಂಚಿಕೊಂಡ ವೈಯಕ್ತಿಕ ಕೊಡುಗೆಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. ಅಲ್ಲದೆ ಸ್ಕಾಚ್ ವಿಸ್ಕಿ ಸಂಗ್ರಹ ತಮ್ಮ ಪುರುಷ ಸ್ನೇಹಿತರಿಗೆ ಉಡುಗೊರೆ ನೀಡಲು ಆಯ್ಕೆ ಸರಳವಾಗಿದೆ ಎಂದು ಅವರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಬಾನಿ ದಂಡೇಕರ್ ಮಾತನಾಡಿ

ಶಿಬಾನಿ ದಂಡೇಕರ್ ಮಾತನಾಡಿ

ಶಿಬಾನಿ ದಂಡೇಕರ್: ನನ್ನ ಆತ್ಮೀಯರ ಬೇಕು ಬೇಡಗಳನ್ನು ಅರಿತಿರುವ ನಾನು ಅವರಿಗೆ ಉಡುಗೊರೆಗಳನ್ನು ಕೊಳ್ಳುವುದನ್ನು ಬಹಳ ಇಷ್ಟಪಡುತ್ತೇನೆ. ಗೆಳೆಯರ ಮನೆಗೆ ಆಹ್ವಾನಿಸಿದಾಗ ನಾನು ಯಾವಾಗಲೂ ಒಂದು ಬಾಟಲ್ ಬ್ಲ್ಯಾಕ್ ಅಂಡ್ ವೈಟ್‍ಅನ್ನು ಉಡುಗೊರೆಯಾಗಿ ನೀಡುತ್ತೇನೆ. ಏಕೆಂದರೆ ಅದು ಈಗಿನ ಅತ್ಯಂತ ಸ್ವಾದವುಳ್ಳ ಸ್ಕಾಚ್ ವಿಸ್ಕಿ, ,ಅದರ ರುಚಿಯೇ ಬೇರೆ. ಯಾರಾದರೂ ಪ್ರಶಸ್ತಿ ಪುರಸ್ಕೃತರಾಗಿದ್ದರೆ ಅಥವಾ ಬಡ್ತಿ ಹೊಂದಿದ್ದರೆ ಅವರಿಗೊಂದು ಬಾಟಲ್ ಬ್ಲ್ಯಾಕ್ ಅಂಡ್ ವೈಟ್‍ ಅನ್ನು ಕೊಟ್ಟು ಅವರ ಸಾಧನೆಯನ್ನು ಸಂಭ್ರಮಿಸಲು ನೆರವಾಗುತ್ತೇನೆ

ಚಿತ್ರಾಂಗದ ಸಿಂಗ್ ಮಾತನಾಡಿ

ಚಿತ್ರಾಂಗದ ಸಿಂಗ್ ಮಾತನಾಡಿ

ಚಿತ್ರಾಂಗದ ಸಿಂಗ್ : ಯಾರಾದರೂ ನಿಮ್ಮ ಉಡುಗೊರೆಯನ್ನು ಮೆಚ್ಚಿದರೆ ಅದೊಂದು ಅದ್ಭುತ ಅನುಭವ. ಅಂಥ ಪ್ರಶಂಸಾರ್ಹ ಅಭಿವ್ಯಕ್ತಿಯೇ ಸೂಕ್ತ ಉಡುಗೊರೆಯನ್ನು ಆಯ್ಕೆ ಮಾಡುವಾಗಿನ ಪ್ರತಿಕ್ಷಣಗಳನ್ನು ಎಣಿಸುವಂತೆ ಮಾಡುತ್ತದೆ. ನನ್ನ ತಂದೆ ಉತ್ತಮ ಚಾರಿತ್ರ್ಯ ಹಾಗೂ ಸದೃಢತೆಯ ಪರಿಪೂರ್ಣತೆಗೆ ಹಾತೊರೆಯುವ ವ್ಯಕ್ತಿ. ಅವರು ಸ್ಕಾಚ್ ವಿಸ್ಕಿ ಇಷ್ಟ ಪಡುತ್ತಾರೆ. ಹಾಗಾಗಿ ಒಂದು ಬಾಟಲ್ ವ್ಯಾಟ್ 69 ಅವರಿಗೆ ತಕ್ಕ ಉಡುಗೊರೆ ಎಂದರು.

ನಟಿ ಲಿಸಾ ಹೇಡನ್ ಅವರ ಅಭಿಪ್ರಾಯ

ನಟಿ ಲಿಸಾ ಹೇಡನ್ ಅವರ ಅಭಿಪ್ರಾಯ

ಲಿಸಾ ಹೇಡನ್ ಅವರು ತಮ್ಮ ಅತ್ಯಾಪ್ತ ಕೊಡುಗೆಯ ಕ್ಷಣಗಳ ಬಗ್ಗೆ ಮಾತನಾಡುತ್ತ, ಪುರುಷರಿಗೆ ಉಡುಗೊರೆ ನೀಡಲು ಇದ್ದ ಗೊಂದಲ ಈಗ ಪರಿಹಾರವಾಗಿದೆ ಎಂದು ನಾನು ನಂಬಿದ್ದೇನೆ. ಮೊದಲು ಒಂದು ಸಮಾರಂಭಕ್ಕೆ ಸೂಕ್ತವಾದ ಉಡುಗೊರೆ ಆಯ್ಕೆ ಮಾಡುವುದು ಕಷ್ಟದ ಕೆಲಸವಾಗಿತ್ತು. ಆದರೆ ಈಗ ಸ್ಕಾಚ್ ವಿಸ್ಕಿ ಸಂಗ್ರಹ ಎಲ್ಲ ಸಮಾರಂಭಗಳಿಗೂ ಹೇಳಿ ಮಾಡಿಸಿದ ಉಡುಗೊರೆ ಎಂದರು. ಎಲ್ಲ ಪುರುಷರೂ ಸ್ಕಾಚ್ ವಿಸ್ಕಿ ಬಗ್ಗೆ ಮೆಚ್ಚುತ್ತಾರೆ ಮಾತ್ರವಲ್ಲ ಅದರ ಉಡುಗೊರೆಯನ್ನು ಇಷ್ಟಪಡುತ್ತಾರೆ ಎಂದರು.

ನಟಿ ಚಿತ್ರಾಂಗದಾ ಸಿಂಗ್ ಜತೆ ವಿಡಿಯೋ ಚಾಟ್

ನಟಿ ಚಿತ್ರಾಂಗದಾ ಸಿಂಗ್ ಒನ್ ಇಂಡಿಯಾ ಸಂಸ್ಥೆ ಬೋಲ್ಡ್ ಸ್ಕೈ ಪ್ರತಿನಿಧಿ ಜೊತೆ ಮಾತನಾಡಿದ್ದು ಹೀಗೆ...

ನಟಿ ಲೀಸಾ ಹೇಡನ್ ಜತೆ ವಿಡಿಯೋ ಚಾಟ್

ನಟಿ ಲೀಸಾ ಹೇಡನ್ ತಮ್ಮ ಅಭಿಪ್ರಾಯ ಹಂಚಿಕೊಂಡ ವಿಡಿಯೋ ನೋಡಿ...

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Scotch Whisky Collection entails a premium range of Scotch whiskies such as Black Dog, Vat 69 and Black & White as an ideal gift for men, Celebrities Lisa Haydon, Chitrangada Singh and Shibani Dandekar Shared their thoughts on the Scotch Whisky Collection as the Ideal Gift for Men .So go ahead and get #ScotchAsAGift.
Please Wait while comments are loading...