Union Budget 2025: ಆರ್ಥಿಕ ಸಮೀಕ್ಷೆ ಮಂಡನೆ: ಶೇಕಡ 6.3ರಿಂದ 6.8 ರವರೆಗೆ ಜಿಡಿಪಿ ಹೆಚ್ಚಳ ನಿರೀಕ್ಷೆ
Budget Session: ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅಧಿವೇಶನ ಇಂದು (ಜನವರಿ 31) ಆರಂಭವಾಗಿದೆ. ರಾಷ್ಟ್ರಪತಿಗಳ ಭಾಷಣ ಬಳಿಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನ ಉಭಯ ಸದನಗಳಲ್ಲಿ 2024-25ರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದು, ಈ ಸಮೀಕ್ಷೆಯು 2025-26ರ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6.3 ಮತ್ತು ಶೇಕಡಾ 6.8ರ ನಡುವೆ ಇರಬಹುದೆಂದು ಅಂದಾಜಿಸಲಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ಅಂದರೆ 2025ರ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ಮಂಡನೆಗೆ ಇನ್ನೂ ಕೆಲವೇ ಕ್ಷಣಗಳು ಮಾತ್ರ ಬಾಕಿಯಿವೆ. ಇದು ನಿರ್ಮಲಾ ಸೀತಾರನ್ ಅವರು ಮಂಡಿಸುವ 8ನೇ ಬಜೆಟ್ ಆಗಲಿದೆ. ಅಲ್ಲದೆ, ಈ ಮೂಲಕ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಪಾತ್ರರಾಗಲಿದ್ದಾರೆ.

ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಹಣಕಾಸು ಸಚಿವಾಲಯ ಸಿದ್ಧಪಡಿಸಿದ ವಾರ್ಷಿಕ ವರದಿಯಾದ ಈ ಸಮೀಕ್ಷೆಯ ಪ್ರಸಕ್ತ ವರ್ಷದ ಭಾರತದ ಆರ್ಥಿಕತೆಯ ಒಳನೋಟ ನೀಡುತ್ತದೆ ಮತ್ತು ಕೇಂದ್ರ ಬಜೆಟ್‌ಗೆ ಮುಂಚಿತವಾಗಿ ನೀತಿ ನಿರೂಪಕರಿಗೆ ಒಂದು ದಿಕ್ಸೂಚಿ ನೀಡುತ್ತದೆ.
ನಿಧಾನಗತಿಯ ಜಿಡಿಪಿ ಬೆಳವಣಿಗೆ, ದುರ್ಬಲ ಬಳಕೆ ಮತ್ತು ಖಾಸಗಿ ಹೂಡಿಕೆ ಮತ್ತು ಎಐ ಮತ್ತು ಆಟೋಮೇಶನ್ ಏರಿಕೆಯ ನಡುವೆ ಉದ್ಯೋಗ ಸೃಷ್ಟಿಯಲ್ಲಿನ ತೊಂದರೆಗಳು ಸೇರಿದಂತೆ ಇತ್ಯಾದಿ ಆರ್ಥಿಕತೆ ಸವಾಲುಗಳನ್ನು ಎದುರಿಸುತ್ತಿಸಲಾಗುತ್ತಿದೆ. ಈ ಹಿನ್ನೆಲೆ ಆರ್ಥಿಕ ಸಮೀಕ್ಷೆಯು ಈ ಕೆಲವು ಸಮಸ್ಯೆಗಳನ್ನು ಪರಿಹರಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.
ಹಣಕಾಸು ಸಚಿವಾಲಯ ಮತ್ತು ಅದರ ಅಧಿಕಾರಿಗಳು ಆರ್ಥಿಕ ಸಮೀಕ್ಷೆಯನ್ನು ಸ್ವತಂತ್ರವಾಗಿ ತಯಾರಿಸುತ್ತಾರೆ. ಅದು ಬಜೆಟ್ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ಹೇಳಿಕೊಂಡರೂ, ಮುಂಬರುವ ಸಂಭಾವ್ಯ ಬೆಳವಣಿಗೆಗಳ ಬಗ್ಗೆ ಒಳನೋಟಗಳನ್ನು ನೀಡುತ್ತದೆ. ಕಳೆದ ವರ್ಷ, ಆರ್ಥಿಕ ಸಮೀಕ್ಷೆಯು ಶೇಕಡಾ 6.5ರಿಂದ ಶೇಕಡಾ 7ರಷ್ಟು ಕಡಿಮೆ ಬೆಳವಣಿಗೆಯ ದರವನ್ನು ಮುನ್ಸೂಚಿಸಿತ್ತು.
ಇದು ಆರ್‌ಬಿಐ ಯೋಜಿಸಿದ ಶೇಕಡಾ 7.2ಕ್ಕಿಂತ ಕಡಿಮೆ ಆಗಿದೆ. ಸಮೀಕ್ಷೆಯ ವಿಷಯ ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು 2024ರ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ನೀತಿಗಳಿಗೆ ಅನ್ವಯಿಸಿತ್ತು.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನವದೆಹಲಿಯಲ್ಲಿ ಮುಂಬರುವ 2025-26ರ ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ಪಾಲುದಾರರು ಮತ್ತು ಕಾರ್ಮಿಕ ಸಂಘಗಳ ಪ್ರತಿನಿಧಿಗಳೊಂದಿಗೆ 8ನೇ ಬಜೆಟ್ ಪೂರ್ವ ಸಮಾಲೋಚನೆಯ ಅಧ್ಯಕ್ಷತೆ ವಹಿಸಿದ್ದಾರೆ.
-
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ಬೆಂಗಳೂರಿನಲ್ಲಿ ಇಂದು ಶ್ರೀ ಎಂ ಅವರ "ಉಪನಿಷತ್ತುಗಳು ಮತ್ತು ಜೆ.ಕೃಷ್ಣಮೂರ್ತಿ" ಹೊಸ ಕೃತಿ ಬಿಡುಗಡೆ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ











Click it and Unblock the Notifications