ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯಮಿ ಬಿ.ಆರ್ ಶೆಟ್ಟಿ ಸಂಸ್ಥೆ ಕಪ್ಪು ಪಟ್ಟಿಗೆ, ಬ್ಯಾಂಕ್ ಖಾತೆ ಸ್ಥಗಿತ

|
Google Oneindia Kannada News

ದುಬೈ, ಏಪ್ರಿಲ್ 28: ಅನಿವಾಸಿ ಭಾರತೀಯ ಉದ್ಯಮಿ ಬಿ. ರಘುರಾಮ್ ಶೆಟ್ಟಿ ಅವರು ತಾವೇ ಸ್ಥಾಪಿಸಿದ ಸಂಸ್ಥೆಯಿಂದ ಹೊರನಡೆದಿದ್ದಂತೆ ಸಂಕಷ್ಟಗಳು ಮುಂದುವರೆದಿವೆ. ಬಿಲಿಯನೇರ್ ಬಿಆರ್ ಶೆಟ್ಟಿ ಅವರ ಎನ್ಎಂಸಿ ಸೇರಿದಂತೆ ಹಲವು ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ, ಸಂಬಂಧಪಟ್ಟ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಎಇ ಸರ್ಕಾರ ಪ್ರಕಟಿಸಿದೆ.

ಗಲ್ಫ್ ನ್ಯೂಸ್ ಪ್ರಕಟಣೆಯಂತೆ ಯುಎಇಯ ಸೆಂಟ್ರಲ್ ಬ್ಯಾಂಕ್(ಸಿಬಿ ಯುಎಇ) ಈ ಕುರಿತಂತೆ ಎಲ್ಲಾ ಬ್ಯಾಂಕ್, ಆರ್ಥಿಕ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದು, ಶೆಟ್ಟಿ ಅವರ ಖಾತೆಗೆ ಹಣ ರವಾನೆ, ಹಣ ಜಮೆ ಆಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಶೆಟ್ಟಿ ಹಾಗೂ ಕುಟುಂಬಸ್ಥರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸೂಚಿಸುವಂತೆ ಅಟರ್ನಿ ಜನರಲ್ ಕೋರಿಕೊಂಡಿದ್ದರು.

ಎನ್ಎಂಸಿ ಹೆಲ್ತ್ ಸ್ಥಾಪಕ ಎನ್ನಾರೈ ಉದ್ಯಮಿ ಬಿ. ಆರ್ ಶೆಟ್ಟಿ ರಾಜೀನಾಮೆ ಎನ್ಎಂಸಿ ಹೆಲ್ತ್ ಸ್ಥಾಪಕ ಎನ್ನಾರೈ ಉದ್ಯಮಿ ಬಿ. ಆರ್ ಶೆಟ್ಟಿ ರಾಜೀನಾಮೆ

ಎನ್ಎಂಸಿ ಬೋರ್ಡ್ ನಿಂದ ಹನಿ ಬುತ್ತಿಖಿ, ಅಬ್ದುರ್ ರೆಹ್ಮಾನ್ ಬಸದ್ದಿಕ್ ಸೇರಿದಂತೆ ನಾಲ್ವರು ರಾಜೀನಾಮೆ ಸಲ್ಲಿಸಿದ್ದಾರೆ. ಸಂಸ್ಥೆಯ ಷೇರುಗಳ ಗಾತ್ರ, ಮೌಲ್ಯದ ಬಗ್ಗೆ ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಶೆಟ್ಟಿ ಅವರನ್ನು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಬೋರ್ಡ್ ಸದಸ್ಯರು ಆಗ್ರಹಿಸಿದ್ದರು. ಒತ್ತಡಕ್ಕೆ ಮಣಿದು, ತಮ್ಮ ಸ್ಥಾನಕ್ಕೆ ಶೆಟ್ಟಿ ರಾಜೀನಾಮೆ ಸಲ್ಲಿಸಿದ್ದರು.

UAE blacklists BR Shetty firms and freezes all bank accounts

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಅತಿದೊಡ್ಡ ಮೆಡಿಕಲ್ ಜಾಲ ಹೊಂದಿರುವ ಎನ್ಎಂಸಿ, 2012ರಲ್ಲಿ ಲಂಡನ್ ಷೇರುಪೇಟೆಯಲ್ಲಿ ಲಿಸ್ಟಿಂಗ್ ಪಡೆದ ಮೊದಲ ಅಬುಧಾಬಿ ಕಂಪನಿ ಎನಿಸಿಕೊಂಡಿತ್ತು.77 ವರ್ಷ ವಯಸ್ಸಿನ ಶೆಟ್ಟಿ ಅವರು 1970ರಲ್ಲಿ ಎನ್ಎಂಸಿ ಸ್ಥಾಪಿಸಿದ್ದು, ಶೆಟ್ಟಿ ಅವರ ಪತ್ನಿ, ಅಳಿಯ ಕೂಡಾ ಸಂಸ್ಥೆಯಲ್ಲಿ ಷೇರು ಹೊಂದಿದ್ದಾರೆ.

English summary
UAE has ordered to freeze all bank accounts of Indian billionaire BR Shetty and his family and has also blacklisted several firms associated with him along with their entire senior management.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X