'ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ!'

Posted By:
Subscribe to Oneindia Kannada

ಬೆಂಗಳೂರು, ಫೆ. 26: ಉದ್ಯಮಿ ವಿಜಯ್ ಮಲ್ಯ ಬಗ್ಗೆ 'ಅರುವತ್ತಕ್ಕೆ ಅರಳು ಮರಳು' ಎಂದು ಹೇಳುವಂತಿಲ್ಲ. ಉದ್ದೇಶಪೂರ್ವಕ ಸುಸ್ತಿದಾರನಾಗಿ ಬ್ಯಾಂಕ್ ಗಳಿಗೆ ಸುಸ್ತು ಮಾಡಿರುವ ಬಂಡ ಅಲ್ಲ ಬಹದ್ದೂರ್. ಯುನೈಟೆಡ್ ಸ್ಪಿರೀಟ್ ಕಳೆದುಕೊಂಡ ಮಲ್ಯರನ್ನು ಈಗ ಟ್ವಿಟ್ಟರ್ ನಲ್ಲಿ 'ಅಡ್ವಾಣಿಯಂತಾದ ಮಲ್ಯ' ಎಂದು ಕರೆಯಲಾಗುತ್ತಿದೆ.

ಏನಾದರೂ ಮಲ್ಯ ಯಾವತ್ತಿಗೂ 'ಕಿಂಗ್ ಆಫ್ ಗುಡ್ ಟೈಮ್' ಇನ್ನು ಕೆಲವರು ಹೊಗಳುತ್ತಿದ್ದಾರೆ. ಕುಡುಕರ ಪಾಲಿನ ಪರ್ಮನೆಂಟ್ 'ಡಾಕ್ಟರ್' ಮಲ್ಯರಿಗೆ ಶುಭಹಾರೈಕೆಗಳು ಹರಿದು ಬರುತ್ತಿವೆ. [ಖಾಲಿ ಕೈಯ ಕುಬೇರ ಮಲ್ಯ, ಈಗಲೂ ಯುಬಿ ಅಧಿಪತಿ]

ರಾಜೀನಾಮೆ ನೀಡಿದ್ದೇಕೆ?: ಯುಬಿ ಗ್ರೂಪ್‌ನ ಅಂಗಸಂಸ್ಥೆಗಳು ಮತ್ತು ವಿಮಾನ ಯಾನ ಸಂಸ್ಥೆ ಕಿಂಗ್‌ಫಿಷರ್‌ ಏರ್‌ಲೈನ್ಸ್‌ಗೆ ಯುನೈಟೆಡ್‌ ಸ್ಪಿರಿಟ್‌ನ ನಿಧಿಗಳನ್ನು ವರ್ಗಾವಣೆ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಹುದ್ದೆ ತೊರೆಯಲು ಡಿಯಾಜಿಯೊ ಕಳೆದ ವರ್ಷವೇ ಮಲ್ಯ ಅವರನ್ನು ಕೇಳಿಕೊಂಡಿತ್ತು.

ಈ ಬೇಡಿಕೆಯನ್ನು ಮಲ್ಯ ಅವರು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು. ಆದರೆ, ಸಂಸ್ಥೆ ತೊರೆದರೆ ಮುಂದಿನ ಐದು ವರ್ಷಕ್ಕೆ 75 ಮಿಲಿಯನ್ ಡಾಲರ್ ನೀಡುವುದಾಗಿ ಆಫರ್ ಬಂದ ಮೇಲೆ ಮಲ್ಯ ತಾವೂ ಇಂಗ್ಲೆಂಡಿಗೆ ಹಾರುವುದಾಗಿ ಘೋಷಿಸಿದ್ದಾರೆ.[ಯುಎಸ್‌ಎಲ್‌ಗೆ ಬೈ ಹೇಳಿ ಇಂಗ್ಲೆಂಡ್ ವಿಮಾನ ಏರಿದ ಮಲ್ಯ]

ಇತ್ತೀಚೆಗಷ್ಟೇ 60ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ ಮಲ್ಯ ಅವರ ಮುಂದಿನ ನಡೆ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಸದ್ಯಕ್ಕೆ ಅಧಿಕಾರವಿಲ್ಲದ ಸ್ಥಾಪಕನಾಗಿ ಮಲ್ಯ ಅವರಿರುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎಫ್ 1 ವಾಹನ ಓಡಿಸಿಕೊಂಡು ಸ್ಕಾಚ್ ಹಿರುವುದು ಸದ್ಯದ ಯೋಜನೆ.

ಬ್ಯಾಂಕ್ ಸಾಲದ ಗತಿ ಏನು?

ಬ್ಯಾಂಕ್ ಸಾಲದ ಗತಿ ಏನು?

8 ಸಾವಿರ ಕೋಟಿ ರುಗೂ ಅಧಿಕ ಸಾಲ ಮರುಪಾವತಿ ಮಾಡದ ಮದ್ಯದ ದೊರೆ ವಿಜಯ್ ಮಲ್ಯಗೆ ಈಗ ಆಸ್ತಿ ಹರಾಜಿನ ಸಂಕಷ್ಟ ಎದುರಾಗಿದ್ದು ವಿವಿಧ ಬ್ಯಾಂಕ್ ಗಳು ಅವರನ್ನು ‘ಉದ್ದೇಶ ಪೂರ್ವಕ ಸುಸ್ತಿದಾರ' ಎಂದು ಘೋಷಣೆ ಮಾಡಿವೆ. ಆದರೆ, ಮಲ್ಯ ಅವರು ಕಾನೂನು ಪ್ರಕಾರವಾಗಿ ನಡೆದುಕೊಳ್ಳುತ್ತಿದ್ದು, ಆಸ್ತಿ ಹರಾಜು ಹಾಕಿದರೂ ಬ್ಯಾಂಕ್ ಗಳಿಗೆ ಅಸಲು ಕೂಡಾ ಸಿಗದಂತೆ ಮಾಡಿಬಿಟ್ಟಿದ್ದಾರೆ.

ಸ್ಟೀವ್ ಜಾಬ್ಸ್ ರೀತಿ ಮತ್ತೆ ಮೇಲಕ್ಕೆ ಏರಲಿ

ಉದ್ಯಮಿ ಸ್ಟೀವ್ ಜಾಬ್ಸ್ ರೀತಿ ಮತ್ತೆ ಮೇಲಕ್ಕೆ ಏರಲಿ, ಮಲ್ಯ ಅವರು ಪಕ್ಕಾ ವ್ಯಾಪರಸ್ಥ ಒಳ್ಳೆಯದಾಗಲಿ ಎಂದು ಶುಭಹಾರೈಕೆ.

Founder Emeritus ಆದ ಮಲ್ಯ

Founder Emeritus ಆದ ಮಲ್ಯ. ಏನು ಅರ್ಥವಾಗಲಿಲ್ವ. ರಾಜಕೀಯದಲ್ಲಿ ಬಿಜೆಪಿಯಲ್ಲಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರಿಗಿರುವ ಮರ್ಯಾದೆ ಅಷ್ಟೇ ವಿಜಯ್ ಮಲ್ಯರಿಗೆ ಈಗ ಸಿಗುತ್ತದೆ.

ಮಲ್ಯ, ಇಂಗ್ಲೆಂಡಿಗೆ ಹೋಗುವುದು ಸೂಪರ್ ಐಡಿಯಾ

ಮಲ್ಯ ಇಂಗ್ಲೆಂಡಿಗೆ ಹೋಗುವುದು ಸೂಪರ್ ಐಡಿಯಾ. ಬ್ರಿಟಿಷರನ್ನು ಹಾಳು ಮಾಡಲು ಎಲ್ಲಾ ರಿಟೈರ್ ಆದವರು ಅಲ್ಲಿ ಹೋಗಿ ನೆಲೆಸಿದರೆ ಸಾಕು.

ಮಲ್ಯ ರಾಜೀನಾಮೆ ನೀಡಿದ ರಹಸ್ಯ ಬಯಲು

ಮಲ್ಯ ರಾಜೀನಾಮೆ ನೀಡಿದ ರಹಸ್ಯ ಬಯಲು. ತಮ್ಮ ಕಂಪನಿಯ ವ್ಹಿಸ್ಕಿ ಎರಡು ಗುಟುಕು ಹೀರಿದ ಮೇಲೆ ತಲೆ ಕೆಟ್ಟು ಮಲ್ಯ ರಾಜೀನಾಮೆ ಕೊಟ್ಟರಂತೆ!

ಸಾಲ ಮಾಡಿ ತುಪ್ಪ ತಿಂದು ಜೀರ್ಣಿಸಿಕೊಳ್ಳುವ ಕಲೆ

ಸಾಲ ಮಾಡಿ ತುಪ್ಪ ತಿಂದು ಜೀರ್ಣಿಸಿಕೊಳ್ಳುವ ಕಲೆ ಮಲ್ಯರಿಂದ ಕಲಿಯಬೇಕು. ನಿಮ್ಮ ಲೈಫ್ ಎಂಜಾಯ್ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Twitter reaction after Liquor baron Vijay Mallya resigned from United Spirtis. He is compared with BJP senior leader LK Advani, since he has no authority, responsibilities, rights or benefits from the company.
Please Wait while comments are loading...