ಎಚ್ 1ಬಿ ವೀಸಾದಾರರ ಬಾಳಸಂಗಾತಿಗಳಿಗೆ ಅಮೆರಿಕದಲ್ಲಿ ಉದ್ಯೋಗ ಕಷ್ಟ

Posted By:
Subscribe to Oneindia Kannada

ಬರಾಕ್ ಒಬಾಮ ಆಡಳಿತಾವಧಿಯಲ್ಲಿ ಅಮೆರಿಕದಲ್ಲಿ ವೀಸಾ ನಿಯಮವೊಂದಿತ್ತು. ಎಚ್ 1ಬಿ ವೀಸಾ ಹೊಂದಿರುವವರ ಬಾಳ ಸಂಗಾತಿಗೆ ಕೂಡ ಕೆಲಸ ಮಾಡಲು ಅವಕಾಶ ಇತ್ತು. ಇದೀಗ ಆ ನಿಯಮವನ್ನು ಮಾರ್ಪಾಡು ಮಾಡಲು ಟ್ರಂಪ್ ಆಡಳಿತದಲ್ಲಿ ಚಿಂತನೆ ನಡೆಯುತ್ತಿದೆ.

ಚೆನ್ನೈಗೆ ಹೋಗಬೇಕಿಲ್ಲ, ಬೆಂಗಳೂರಲ್ಲೇ ಬ್ರಿಟನ್‌ ವೀಸಾ ಕೇಂದ್ರ ಆರಂಭ

2015ರಿಂದ ಈಚೆಗೆ ಎಚ್ 1ಬಿ ವೀಸಾ ಹೊಂದಿರುವವರ ಬಾಳ ಸಂಗಾತಿ ಅಥವಾ ಉನ್ನತ ಕೌಶಲ ಇರುವವರು, ಗ್ರೀನ್ ಕಾರ್ಡ್ ಗಾಗಿ ಕಾಯುತ್ತಿರುವ ವೀಸಾ ಇರುವಂಥವರು ಎಚ್ -4 ಅವಲಂಬಿತ ವೀಸಾದ ಅಡಿಯಲ್ಲಿ ಅಮೆರಿಕದಲ್ಲಿ ಉದ್ಯೋಗ ಮಾಡಬಹುದಿತ್ತು. ಒಬಾಮ ಆಡಳಿತಾವಧಿಯಲ್ಲಿ ಈ ನಿಯಮ ಪರಿಚಯಿಸಲಾಗಿತ್ತು.

Trump government may stop spouses of H1B visa holders from working in the US

2016ರಲ್ಲಿ 41 ಸಾವಿರಕ್ಕೂ ಹೆಚ್ಚು ಮಂದಿಗೆ ಎಚ್ -4 ವೀಸಾ ಇರುವವರಿಗೆ ಉದ್ಯೋಗ ಮಾಡಲು ಒಪ್ಪಿಗೆ ಸಿಕ್ಕಿತ್ತು. ಈ ವರ್ಷದ ಜೂನ್ ವರೆಗೆ 36 ಸಾವಿರಕ್ಕೂ ಹೆಚ್ಚು ಮಂದಿಗೆ ಎಚ್ -4 ವೀಸಾ ಇರುವವರಿಗೆ ಉದ್ಯೋಗ ಮಾಡಲು ಅವಕಾಶ ದೊರೆತಿದೆ.

ವಿದೇಶದಲ್ಲಿನ ಕೌಶಲ ಇರುವ ಉದ್ಯೋಗಿಗಳನ್ನು ಅಮೆರಿಕದತ್ತ ಎಚ್ 1ಬಿ ವೀಸಾ ಸೆಳೆಯುತ್ತಿತ್ತು. ಆ ಪೈಕಿ ಬಹುತೇಕರು ಭಾರತ ಹಾಗೂ ಚೀನಾದಿಂದ ಅಮೆರಿಕಕ್ಕೆ ತೆರಳಿದವರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಅಮೆರಿಕನ್ನರನ್ನೇ ನೇಮಿಸಿಕೊಳ್ಳಿ, ಅಮೆರಿಕ ವಸ್ತುಗಳನ್ನೇ ಕೊಳ್ಳಿ ಎಂಬ ಕಳೆದ ವರ್ಷದ ಘೋಷಣೆಯ ಅನ್ವಯವಾಗಿಯೇ ಈ ನಿಯಮವನ್ನು ತರುತ್ತಿರುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಎಚ್ 1ಬಿ ವೀಸಾ ಹೊಂದಿರುವ ಎಲ್ಲರಿಗೂ ಇದರ ಪರಿಣಾಮ ಏನೂ ಆಗಲ್ಲ. ಆದರೆ ಉನ್ನತ ಕೌಶಲ ಹೊಂದಿರುವ, ಅಮೆರಿಕದಲ್ಲಿ ನೆಲೆಸಿರುವ ಎಚ್ 1ಬಿ ವೀಸಾ ಹೊಂದಿರುವ ಬಾಳಸಂಗಾತಿಗಳು ಅಮೆರಿಕದಲ್ಲಿ ಕೆಲಸ ಹುಡುಕುವುದು ಕಷ್ಟವಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Trump administration is considering revoking an Obama-era rule that extends work authorisation in USA to the spouses of H1B visa holders, a move that could affect thousands of Indian workers and their families.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ