ಟಿಕ್ ಟಾಕ್ ಹೋಯ್ತು ಸ್ನ್ಯಾಪ್ ಶಾಟ್ ಬಂತು: ಕನ್ನಡಿಗರ ದೇಸಿ ವೇದಿಕೆ
ಬೆಂಗಳೂರು, ಆಗಸ್ಟ್ 27: ಅಂಗೈಯಲ್ಲಿ ಇಡೀ ಪ್ರಪಂಚವನ್ನು ಹಿಡಿದಿಡುವ ಈ ಕಾಲದಲ್ಲಿ ಡಿಜಿಟಲ್ ಮಾಧ್ಯಮ ಹೆಚ್ಚು ಆಕರ್ಷಕ ಮತ್ತು ವೇಗವಾಗಿ ಜನರನ್ನು ತಲುಪುವ ಸುಲಭ ವಿಧಾನವಾಗಿದೆ. ಈ ನಿಟ್ಟಿನಲ್ಲಿ ಹಲವಾರು ಆಪ್ ಗಳು ಬಂದಿವೆ ಮತ್ತು ಬರುತ್ತಿವೆ. ಜನರನ್ನು ಆಧುನಿಕ ತಂತ್ರಜ್ಞಾನ ಬಳಸಿ ಆಪ್ ಗಳ ಮೂಲಕ ಮನರಂಜಿಸಿವುದು ವಿಭಿನ್ನತೆಗಳಲ್ಲಿ ಒಂದಾಗಿದೆ. ಹೀಗೆ ಅನೇಕ ವಿಭಿನ್ನ ಮತ್ತು ವಿಶೇಷಗಳನ್ನು ಹೊತ್ತು ಕೊಂಡು ಅಪ್ಪಟ ಕನ್ನಡಿಗರ ತಂಡವೊಂದು " ಸ್ನ್ಯಾಪ್ ಶಾಟ್ " ಎಂಬ ಮನರಂಜನೆಯ ಆಪ್ ತಯಾರಿಸಿದ್ದು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.
Recommended Video
ಡ್ಯಾನ್ಸ್ ,ಹಾಡುಗಾರಿಕೆ ,ಸಿನಿಮಾ ಪ್ರಚಾರ ಹೀಗೆ ನಾನಾ ವಿಧವಾದ ಪ್ರತಿಭೆ , ಕ್ರಿಯಾಶೀಲತೆಗೆ ಸರಳ , ಸುಂದರ ಮತ್ತು ಸುಲಭವಾಗಿ ಜನರಿಗೆ ಪರಿಚಯಿಸಲು ಈ ಆಪ್ ಸಹಕಾರಿಯಾಗಲಿದ್ದು ಒಂದು ಉತ್ತಮ ವೇದಿಕೆಯಾಗಲಿದೆ. ತಮ್ಮ ಪ್ರತಿಭಾ ಪ್ರದರ್ಶನಕ್ಕೆ ವಿದೇಶಿ ಆಪ್ ಗಳ ಮೊರೆಹೋಗುತ್ತಿದ್ದ ಅದೆಷ್ಟು ಮಂದಿಗೆ ಈ ವಿಶೇಷ ರೀತಿಯಲ್ಲಿ ಮೂಡಿಬಂದಿರುವ ಈ ದೇಸಿ ಆಪ್ ಹೆಚ್ಚು ಉಪಯೋಗಕಾರಿಯಾಗಲಿದೆ.

ಇನ್ನೂ ಇದು ತಾಂತ್ರಿಕ ವಿಭಾಗದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿಕೊಂಡಿದ್ದು ಗೂಗಲ್ ಸಂಸ್ಥೆಯಿಂದಲೂ ಮಾನ್ಯತೆ ಪಡೆದಿದ್ದು, ಅಲ್ಲದೆ ಬಿಡುಗಡೆಗೆ ಕೂಡ ಸಜ್ಜಾಗಿದೆ. ಇದೀಗ ಕನ್ನಡ ಚಿತ್ರರಂಗದ ಅನೇಕ ನಟ - ನಟಿಯರು ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದು ತಮ್ಮ ಶುಭಹಾರೈಕೆಗಳನ್ನು ತಿಳಿಸುತ್ತಿದ್ದಾರೆ . ತಂಡದ ಪ್ರಕಾರ ಈ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳ ಮೊದಲ ವಾರದಲ್ಲಿ ಸ್ನ್ಯಾಪ್ ಶಾಟ್ ನಿಮಗೆ ಲಭ್ಯವಿರಲಿದೆ.

ಪ್ರಧಾನಿ ಮೋದಿ ಅವರ ಆತ್ಮನಿರ್ಭರ ಯೋಜನೆಗೆ ಪೂರಕವೆಂಬಂತೆ ಈ ತಂಡ ಕಾರ್ಯ ನಿರ್ವಹಿಸುತ್ತಿದ್ದು ವಿದೇಶಿ ಆಪ್ ಗೆ ಸಡ್ಡು ಹೊಡೆಯುವ ಉತ್ಸಾಹದಲ್ಲಿದ್ದಾರೆ. ಕನ್ನಡಿಗರ ಈ ಆಪ್ ಗೆ ನಿಮ್ಮ ಸಹಕಾರವೂ ಇರಲಿ ಎಂದು ಸ್ನ್ಯಾಪ್ ಶಾಟ್ ತಂಡ ಕೇಳಿಕೊಂಡಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications