ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಮೇಲೆ ಜಿಎಸ್‌ಟಿ ಇಳಿಕೆ?

ನವದೆಹಲಿ ಜೂನ್ 9: ಕೇಂದ್ರ ಸರ್ಕಾರ ಪರಿಸರ ಸ್ನೇಹಿ ವಿದ್ಯುತ್‌ ಚಾಲಿತ ವಾಹನಗಳ ಲಿಥಿಯಂ ಮತ್ತು ಐಯಾನ್ ಬ್ಯಾಟರಿಗಳ ಮೇಲಿನ ಸರಕು ಸೇವಾ ತೆರಿಗೆ (ಜಿಎಸ್‌ಟಿ) ಇನ್ನಷ್ಟು ಕಡಿತಗೊಳಿಸುವ ಚಿಂತನೆಯಲ್ಲಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವಾಲಯ ವ್ಯಾಪ್ತಿಯಲ್ಲಿ ಚರ್ಚೆಗಳು ನಡೆದಿವೆ ಎಂಬ ಸುದ್ದಿ ಹಬ್ಬಿದೆ. ದೇಶದಲ್ಲಿ ಹಸಿರು ಸಂಚಾರ ಯೋಜನೆಗೆ (ಗ್ರೀನ್‌ ಮೊಬಿಲಿಟಿ ಪ್ಲಾನ್) ಕೇಂದ್ರ ಸರ್ಕಾರ ಆದ್ಯತೆ ನೀಡುತ್ತಿದೆ.

ಇದರ ಮುಂದುವರಿದ ಭಾಗವಾಗಿ ಲಿಥಿಯಂ ಮತ್ತು ಐಯಾನ್ ಬ್ಯಾಟರಿಗಳ ಮೇಲಿನ ಜಿಎಸ್‌ಟಿ ತೆರಿಗೆ ಕಡಿತಗೊಳಿಸಿದರೆ ಎಲೆಕ್ಟ್ರಿಕ್ ವೆಹಿಕಲ್ ಬಳಕೆ ಹೆಚ್ಚಾಗಬಹುದೆಂದು ಯೋಜಿಸಿದೆ. ಈ ಮೂಲಕ ಭವಿಷ್ಯದಲ್ಲಿ ಭಾರತವನ್ನು ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಗುರಿಸರ್ಕಾರ ಹೊಂದಿದೆ.

ಈ ಹಿನ್ನೆಲೆಯಲ್ಲಿ ಸ್ಟೇಕ್ ಹೋಲ್ಡರ್ಸ್ (ಮಧ್ಯಸ್ಥಗಾರರು) ಜತೆಗೆ ಸರ್ಕಾರದ ಮುಖ್ಯಸ್ಥರು ಈಗಾಗಲೇ ಚರ್ಚೆ ನಡೆಸಿದ್ದಾರೆ. ಕೆಲವು ತಿಂಗಳಲ್ಲೇ ಈ ಬಗ್ಗೆ ಅಂತಿಮ ನೀತಿ ರೂಪಿಸುವ ಸಾಧ್ಯತೆ ಇದೆ. ಪ್ರಸ್ತುತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಗಳು ಶೇ.5ರಷ್ಟು ಹಾಗೂ ಲಿಥಿಯಂ ಮತ್ತು ಐಯಾನ್ ಬ್ಯಾಟರಿ ಕಂಪನಿಗಳು ಶೇ. 18ರಷ್ಟು ಜಿಎಸ್‌ಟಿ ಪಾವತಿಸುತ್ತಿವೆ. ಈ ಬ್ಯಾಟರಿಗಳ ಮೇಲಿನ ತೆರಿಗೆ ಇನಷ್ಟು ಇಳಿಕೆಯಾದರೆ ಎಲೆಕ್ಟ್ರಿಕ್ ವಾಹನಗಳ ದರವು ಕಡಿಮೆಯಾಗಿ ಬಳಕೆ ಹೆಚ್ಚುತ್ತದೆ. ಸದ್ಯ ಇಂಧನ ಚಾಲಿತ ವಾಹನಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಬೆಲೆ ತುಸು ದುಬಾರಿ ಎನ್ನಬಹುದು.

Thinking of a GST Tax on Lithium and Ion Batteries for EVs.

ತಜ್ಞರ ಸಲಹೆ; ಸರ್ಕಾರದ ಗ್ರೀನ್‌ ಮೊಬಿಲಿಟಿ ಪ್ಲಾನ್ ಕುರಿತು ಈ ಹಿಂದೆಯೆ ಪ್ರತಿಕ್ರಿಯಿಸಿದ್ದ ತಜ್ಞರು, ಲಿಥಿಯಂ ಹಾಗೂ ಐಯಾನ್ ಬ್ಯಾಟರಿಗಳ ಮೇಲಿನ ತೆರಿಗೆಯನ್ನು ತರ್ಕಬದ್ಧಗೊಳಿಸದ ಹೊರತು ಭಾರತ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಕೇಂದ್ರ ಕುರಿತು ಹಾಕಿಕೊಂಡಿರುವ ಭವಿಷ್ಯದ ಕನಸು ಈಡೇರುವುದು ಹಾಗೂ ಉದ್ದೇಶಿತ ಮಹಾತ್ವಾಕಾಂಕ್ಷೆ ಸಾಕಾರವಾಗುವುದು ಕಷ್ಟ ಸಾಧ್ಯ ಎಂದು ಹೇಳಿದ್ದರು.
ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಟು ಜಿಎಸ್‌ಟಿ ಕೌನ್ಸಿಲ್‌ 2018ರಲ್ಲಿ ಲಿಥಿಯಂ ಹಾಗೂ ಐಯಾನ್ ಬ್ಯಾಟರಿಗಳ ಮೇಲಿದ್ದ ಶೇ.28 ಜಿಎಸ್‌ಟಿ ತೆರಿಗೆಯನ್ನು ಶೇ.18ಕ್ಕೆ ಇಳಿಕೆ ಮಾಡಿತ್ತು. ಏಪ್ರಿಲ್‌ನಲ್ಲಿ ದೇಶದಲ್ಲಿ ಸುಮಾರು 14,179 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿದ್ದವು.

ಆಟೋ ಮೊಬೈಲ್ ಫೆಡರೇಷನ್ ಡೀಲರ್‌ಗಳ ಮಾಹಿತಿಯಂತೆ ಏಪ್ರಿಲ್ 2021 ರಿಂದ ಮಾರ್ಚ್ 2022ರ ತನಕ 4,29,217 ವಿದ್ಯುತ್ ಚಾಲಿತ ವಾಹನಗಳು ಮಾರಾಟವಾಗಿವೆ. 2019 ಏಪ್ರಿಲ್‌ನಿಂದ ಮಾರ್ಚ್ 2020ರ ತನಕ 1,68,300 ವಾಹನ ಮಾರಾಟ ವಾಗಿದ್ದವು.

ಪ್ರಸ್ತುತ ವರ್ಷದಲ್ಲಿ ಮಾರ್ಚ್‌ನಲ್ಲಿ ಒಟ್ಟು ಸುಮಾರು 77,243 ವಾಹನ ಮಾರಾಟವಾಗಿದೆ. ಕಳೆದ ಎರಡು ತಿಂಗಳಲ್ಲಿ ರಸ್ತೆಗಿಳಿದ ಯೂನಿಟ್‌ಗಳ ಮಧ್ಯೆ ಏರಿಳಿತ ಕಾಣಬಹುದು ಆದರೆ, ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್ ವಾಹನ ಬಳಸುವವರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

Thinking of a GST Tax on Lithium and Ion Batteries for EVs.

ವಿದ್ಯುತ್‌ ಚಾಲಿತ ವಾಹನಗಳ ಬಳಕೆ ಇನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇದೀಗ ಬ್ಯಾಟರಿಗಳ ಜಿಎಸ್‌ಟಿ ಪ್ರಮಾಣ (ಶೇ.18) ಇನಷ್ಟುಕಡಿಮೆ ಮಾಡುವ ಚಿಂತನೆಯಲ್ಲಿ ತೊಡಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+