ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ನ್ಯಾಯಮಂಡಳಿಯಲ್ಲಿ ಭಾರತದ ವಿರುದ್ಧ ತೆರಿಗೆ ವಿವಾದದ ಕೇಸ್ ಗೆದ್ದ ವೊಡಾಫೋನ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 25: ಭಾರತ ಸರ್ಕಾರ ವಿರುದ್ಧದ ಸುಮಾರು 14,200 ಕೋಟಿ ರೂ. ಮೊತ್ತದ ಹಳೆಯ ತೆರಿಗೆ ವಿವಾದವನ್ನು ವೊಡಾಫೋನ್ ಸಮೂಹ ಪಿಎಲ್‌ಸಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಗೆದ್ದುಕೊಂಡಿದೆ.

ನೆದರ್‌ಲೆಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಮಂಡಳಿಯು ಭಾರತದೊಂದಿಗಿನ ವೊಡಾಫೋನ್ ಗ್ರೂಪ್ ಪಿಎಲ್‌ಸಿಯ ತೆರಿಗೆ ವಿವಾದದ ತೀರ್ಪು ಪ್ರಕಟಿಸಿದೆ. ವೊಡಾಫೋನ್ ಮೇಲೆ ಭಾರತ ಹೇರಿರುವ ತೆರಿಗೆ ಭಾದ್ಯತೆಯ ಜತೆಗೆ ಬಡ್ಡಿ ಮತ್ತು ದಂಡವನ್ನು ವಿಢಿಸಿತ್ತು. ಆದರೆ ಇದು ಭಾರತ ಹಾಗೂ ನೆದರ್‌ಲೆಂಡ್ ನಡುವಿನ ಹೂಡಿಕೆ ಒಪ್ಪಂದದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಮಂಡಳಿತೀರ್ಪು ನೀಡಿದೆ.

 ಜೂನ್‌ ತಿಂಗಳಲ್ಲಿ 48ಲಕ್ಷ ಬಳಕೆದಾರರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ ಜೂನ್‌ ತಿಂಗಳಲ್ಲಿ 48ಲಕ್ಷ ಬಳಕೆದಾರರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ

ಬ್ರಿಟಿಷ್ ಮೂಲದ ದೂರಸಂಪರ್ಕ ಕಂಪೆನಿ ವೊಡಾಫೋನ್, ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ 2016ರಲ್ಲಿ ಮೊರೆಹೋಗಿತ್ತು. ವೊಡಾಫೋನ್‌ನಿಂದ ಬಾಕಿ ವಸೂಲಿ ಮಾಡುವುದನ್ನು ತಡೆಯಬೇಕು ಎಂದು ಭಾರತಕ್ಕೆ ಸೂಚಿಸಿರುವ ನ್ಯಾಯಮಂಡಳಿ, ವೊಡಾಫೋನ್‌ನ ಕಾನೂನು ಹೋರಾಟದ ವೆಚ್ಚವಾಗಿ 5.47 ಮಿಲಿಯನ್ ಡಾಲರ್ ಹಣವನ್ನು ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದೆ.

Tax Dispute Case: Vodafone Wins International Arbitration Against India In Rs 14,299 Crore

2007ರಲ್ಲಿ ಹಚಿಸನ್ ವಾಂಪೊವಾದಿಂದ ಭಾರತದ ಮೊಬೈಲ್ ಸಂಪತ್ತನ್ನು ವೊಡಾಫೋನ್ ಖರೀದಿಸಿತ್ತು. ಈ ಸ್ವಾಧೀನದ ಮೇಲೆ ವೊಡಾಫೋನ್ ತೆರಿಗೆ ನೀಡಬೇಕು ಎಂದು ಸರ್ಕಾರ ಹೇಳಿತ್ತು. ಇದರ ವಿರುದ್ಧ ವೊಡಾಫೋನ್ ಕಾನೂನು ಹೋರಾಟ ಆರಂಭಿಸಿತ್ತು.

English summary
Vodafone Group has won International arbitration case against Indian government in $2 billion tax dispute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X