ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 1 ರಿಂದ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಬೆಲೆ ಶೇ. 2.5 ರಷ್ಟು ಹೆಚ್ಚಳ

|
Google Oneindia Kannada News

ಜನವರಿ 1ರಿಂದ ವಾಣಿಜ್ಯ ವಾಹನಗಳ ಬೆಲೆಯನ್ನು ಶೇಕಡ 2.5 ರಷ್ಟು ಅಧಿಕ ಮಾಡಲಾಗುವುದು ಎಂದು ಸ್ವದೇಶಿ ವಾಹನ ತಯಾರಿಕೆ ಕಂಪೆನಿಯಾದ ಟಾಟಾ ಮೋಟಾರ್ಸ್ ಸೋಮವಾರ ಹೇಳಿದೆ. ಸರಕು ಹಾಗೂ ಕಚ್ಚಾ ವಸ್ತುಗಳ ಬೆಲೆಯು ಅಧಿಕವಾದ ಕಾರಣದಿಂದಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕೂಡಾ ಉಲ್ಲೇಖ ಮಾಡಿದೆ.

ಟಾಟಾ ಮೋಟಾರ್ಸ್ ನಿಯಂತ್ರಕರು ಈ ಬಗ್ಗೆ ಮಾಹಿತಿ ನೀಡಿದ್ದು, "ಮಧ್ಯಮ ಹಾಗೂ ಭಾರೀ ವಾಣಿಜ್ಯ ವಾಹನಗಳು (M&HCV), ಮಧ್ಯಮ ಹಾಗೂ ಲಘು ವಾಣಿಜ್ಯ ವಾಹನಗಳು (I&LCV), ಸಣ್ಣ ವಾಣಿಜ್ಯ ವಾಹನಗಳು (SCV) ಮತ್ತು ಬಸ್‌ಗಳ ಪ್ರತ್ಯೇಕ ಮಾದರಿ ಮತ್ತು ವಾಹನದ ವೇರಿಯಂಟ್ ಆಧರಿಸಿ ಬೆಲೆ ಏರಿಕೆ ಆಗಲಿದೆ ಎಂದು ಮಾಹಿತಿ ನೀಡಿದೆ.

 ಟಾಟಾ ಮೋಟಾರ್ಸ್ ಷೇರುಗಳ ಭರ್ಜರಿ ಏರಿಕೆ: ಶೇಕಡಾ 9ರಷ್ಟು ಹೆಚ್ಚಳ ಟಾಟಾ ಮೋಟಾರ್ಸ್ ಷೇರುಗಳ ಭರ್ಜರಿ ಏರಿಕೆ: ಶೇಕಡಾ 9ರಷ್ಟು ಹೆಚ್ಚಳ

ಕಳೆದ ತಿಂಗಳಷ್ಟೇ ಮಾರುತಿ ಸುಜುಕಿಯು ಬೆಲೆಯನ್ನು ಏರಿಕೆ ಮಾಡಿದೆ. ಅದಕ್ಕಾಗಿ ಮಾರುತಿ ಸುಜುಕಿ ಕಚ್ಚಾ ವಸ್ತುಗಳ, ಸರಕಿನ ಬೆಲೆ ಏರಿಕೆ ಆಗಿದೆ ಎಂಬ ಕಾರಣವನ್ನು ನೀಡಿದೆ. ಈಗ ಇದೇ ಕಾರಣವನ್ನು ನೀಡಿ ಟಾಟಾ ಮೋಟಾರ್ಸ್ ವಾಣಿಜ್ಯ ವಾಹನಗಳ ಬೆಲೆಯನ್ನು ಏರಿಕೆ ಮಾಡಿದೆ

Tata Motors to hike prices by 2.5% from January 1, 2022

ಉಕ್ಕು, ಅಲ್ಯೂಮಿನಿಯಂ ಹಾಗೂ ಇತರೆ ಬೆಲೆಬಾಳುವ ಲೋಹಗಳಂತಹ ಸರಕುಗಳ ಬೆಲೆಯು ಹೆಚ್ಚಳವಾಗಿದೆ. ಹಾಗೆಯೇ ಇತರೆ ಕಚ್ಚಾ ವಸ್ತುಗಳ ಬೆಲೆಯು ಕೂಡಾ ಅಧಿಕವಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ವಾಹನಗಳ ಬೆಲೆಯನ್ನು ಏರಿಕೆ ಮಾಡಬೇಕಾದಂತಹ ಪರಿಸ್ಥಿತಿಯು ಉಂಟಾಗಿದೆ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿದ್ದ ಟಾಟಾ ಮೋಟಾರ್ಸ್ ಅಧ್ಯಕ್ಷ ಶೈಲೇಶ್ ಚಂದ್ರ, "ಸರಕುಗಳ ಬೆಲೆಗಳು, ಕಚ್ಚಾ ವಸ್ತುಗಳು ಮತ್ತು ಇತರ ಇನ್‌ಪುಟ್ ವೆಚ್ಚಗಳು ಏರಿಕೆಯಾಗುತ್ತಲೇ ಇವೆ. ಈ ವೆಚ್ಚದಲ್ಲಿನ ಹೆಚ್ಚಳವನ್ನು ಕನಿಷ್ಠ ಭಾಗಶಃ ಸರಿದೂಗಿಸಲು ಸೂಕ್ತವಾದ ಬೆಲೆ ಏರಿಕೆಯು ಅಲ್ಪಾವಧಿಗೆ ಅನಿವಾರ್ಯವಾಗಿದೆ," ಎಂದು ತಿಳಿಸಿದ್ದರು.

ಈಗಾಗಲೆ ಮಾರುತಿ ಸುಜುಕಿ, ಮರ್ಸಿಡಿಸ್-ಬೆಂಜ್​, ಔಡಿ ಬೆಲೆ ಹೆಚ್ಚಳ

ಇನ್‌ಪುಟ್‌ ವೆಚ್ಚದಲ್ಲಿ ಒಟ್ಟಾರೆಯಾಗಿ ತೀವ್ರ ಏರಿಕೆ ಆಗಿದೆ. ಕನಿಷ್ಟ ಬೆಲೆ ಏರಿಕೆಯ ಮೂಲಕ ಕೆಲವು ಈಗ ಸರಿದೂಗಿಸುವುದು ಅತ್ಯಂತ ಅವಶ್ಯಕ ಆಗಿದೆ. ಇನ್‌ಪುಟ್‌, ಫೀಚರ್‌ಗಳ ವರ್ಧನೆಯ ವೆಚ್ಚಗಳ ಉಲ್ಲೇಖವನ್ನು ಕೂಡಾ ಟಾಟಾ ಮೋಟಾರ್ಸ್ ಮಾಡಿದೆ. ಈಗಾಗಲೇ ಮಾರುತಿ ಸುಜುಕಿ ಇಂಡಿಯಾ, ಐಷಾರಾಮಿ ಕಾರು ತಯಾರಕರಾದ ಮರ್ಸಿಡಿಸ್-ಬೆಂಜ್​ ಮತ್ತು ಔಡಿ(Audi) ಮುಂದಿನ ತಿಂಗಳಿನಿಂದ ಬೆಲೆ ಏರಿಕೆಯನ್ನು ಘೋಷಣೆ ಮಾಡಿದೆ. ಇನ್ನು ಹೋಂಡಾ ಹಾಗೂ ರೆನೊ ಕಂಪನಿಗಳು ಕೂಡಾ ಜನವರಿಯಿಂದ ತಮ್ಮ ವಾಹನಗಳ ಬೆಲೆ ಏರಿಕೆಯನ್ನು ಮಾಡಲು ಮುಂದಾಗಿದೆ. ಈ ಎಲ್ಲಾ ಕಂಪನಿಗಳು ತಯಾರಿಕಾ ವೆಚ್ಚದಲ್ಲಿ ಏರಿಕೆ ಆಗುತ್ತಿರುವ ಹಿನ್ನೆಲೆಯಿಂದಾಗಿ ವಾಹನಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯ ಎಂದು ಹೇಳಿಕೊಂಡಿದೆ.

ಉತ್ಪಾದನಾ ವೆಚ್ಚ ಅಧಿಕ, ಮಾರುತಿ ಸುಜುಕಿ ವಾಹನ ಬೆಲೆ ಏರಿಕೆ ಉತ್ಪಾದನಾ ವೆಚ್ಚ ಅಧಿಕ, ಮಾರುತಿ ಸುಜುಕಿ ವಾಹನ ಬೆಲೆ ಏರಿಕೆ

ಟಾಟಾ ಮೋಟಾರ್ಸ್ ವಾಹನ ಮಾರಾಟವೂ ಹೆಚ್ಚಳ

ಟಾಟಾ ಮೋಟಾರ್ಸ್ ವಾಹನ ಮಾರಾಟದಲ್ಲಿಯೂ ಕೂಡಾ ಹೆಚ್ಚಳ ಕಂಡು ಬಂದಿದೆ. ನವೆಂಬರ್‌ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ವಾಹನ ಮಾರಾಟದಲ್ಲಿ ಶೇಕಡ 25 ರಷ್ಟು ಏರಿಕೆ ಆಗಿದೆ. 2020 ರ ನವೆಂಬರ್‌ನಲ್ಲಿ ಟಾಟಾ ಮೋಟಾರ್ಸ್ ವಿವಿಧ ವರ್ಗದ ಒಟ್ಟು 49,650 ವಾಹನಗಳನ್ನು ಮಾರಾಟ ಮಾಡಿದ್ದವು, ಆದರೆ ಈ ವರ್ಷ ಅದು ಏರಿಕೆ ಆಗಿದೆ. ಈ ವರ್ಷದ ನವೆಂಬರ್‌ನಲ್ಲಿ ಟಾಟಾ ಮೋಟಾರ್ಸ್ 62,192 ವಾಹನಗಳನ್ನು ಮಾರಾಟ ಮಾಡಿದೆ. ಈ ಮೂಲಕ ಟಾಟಾ ಮೋಟಾರ್ಸ್ ವಾಹನಗಳ ಮಾರಾಟವು ಶೇಕಡ 25 ರಷ್ಟು ಏರಿಕೆ ಆಗಿದೆ. ಇನ್ನು ಕಳೆದ ವರ್ಷ 47,859 ಪ್ರಯಾಣಿಕ ವಾಹನಗಳು ಮಾರಾಟ ಆಗಿದೆ, ಆದರೆ ಈ ಬಾರಿ 58,073 ಪ್ರಯಾಣಿಕ ವಾಹನಗಳು ಮಾರಾಟ ಆಗಿದೆ. ಈ ಮೂಲಕ ಶೇಕಡ 21 ರಷ್ಟು ಏರಿಕೆ ಕಂಡು ಬಂದಿದೆ. ವಾಣಿಜ್ಯ ವಾಹನದಲ್ಲಿ ಶೇಕಡ 15 ಏರಿಕೆ ಕಂಡು ಬಂದಿದೆ.

English summary
Tata Motors to hike prices by 2.5% from January 1, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X