1,00,00,000 ರೂಪಾಯಿ ಪರಿಹಾರ ಘೋಷಣೆ ಮಾಡಿದ ಟಾಟಾ ಸಂಸ್ಥೆ, ವಿಮಾನ ದುರಂತದಲ್ಲಿ ಸತ್ತವರ ಕುಟುಂಬಕ್ಕೆ... Ahmedabad Plane Cras
ಭಾರತೀಯರಿಗೆ ಇಂದು ನೋವಿನ ಪರಿಸ್ಥಿತಿ ಎದುರಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ 146 ಕೋಟಿ ಭಾರತೀಯರು. ಅತ್ತ ಗುಜರಾತ್‌ನ ಅಹ್ಮದಾಬಾದ್ ನಗರದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿ, 242 ಜನ ಪ್ರಯಾಣ ಮಾಡುತ್ತಿದ್ದ ಲಂಡನ್ ಮಹಾನಗರಕ್ಕೆ ತೆರಳುತ್ತಿದ್ದ ವಿಮಾನ ಕೆಳಗೆ ಬಿದ್ದು ಛಿದ್ರವಾಗಿ ಹೋಗಿದೆ. ಇತ್ತ ಈ ಸುದ್ದಿ ಕೇಳಿ 146 ಕೋಟಿ ಭಾರತೀಯರು ಭಾವುಕರಾಗಿದ್ದು, 242 ಜನರಲ್ಲಿ ಕೇವಲ ಒಬ್ಬ ವ್ಯಕ್ತಿ ಬದುಕಿ ಉಳಿದಿದ್ದಾನೆ. ಇಂತಹ ಸಮಯದಲ್ಲೇ ಏರ್ ಇಂಡಿಯಾ ವಿಮಾನ ಸಂಸ್ಥೆಯ ಮಾಲೀಕರಾಗಿರುವ ಟಾಟಾ ಸಂಸ್ಥೆ ಮಹತ್ವದ ಘೋಷಣೆ ಹೊರಡಿಸಿದೆ.
ಭಾರತೀಯರು ಇಂತಹ ವಿಮಾನ ಅಪಘಾತವನ್ನು ಹಿಂದೆ ಎಂದೂ ಕಂಡೇ ಇರಲಿಲ್ಲ ಎನ್ನಬಹುದು ಅಂತಿದ್ದಾರೆ ತಜ್ಞರು. ಹೌದು, ಭಾರತದಲ್ಲಿ ಸಂಭವಿಸಿದ ಅತಿ ಘೋರ ವಿಮಾನ ದುರಂತಗಳ ಸಾಲಿಗೆ ಇಂದು ಮತ್ತೊಂದು ದುರಂತ ಸೇರ್ಪಡೆ ಆಗಿದೆ. ಲಂಡನ್ ಕಡೆಗೆ ಪ್ರಯಾಣ ಬೆಳೆಸುವ ವಿಮಾನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇಂಧನ ಅಗತ್ಯತೆ ಇರುತ್ತದೆ, ಹೀಗಾಗಿ ಸುಮಾರು 58,000 ಲೀಟರ್ ಪೆಟ್ರೋಲ್ ತುಂಬಿಸಲಾಗಿತ್ತು. ಆದರೆ ಇಷ್ಟೊಂದು ಭಾರಿ ಪ್ರಮಾಣದಲ್ಲಿ ವೈಟ್ ಪೆಟ್ರೋಲ್ ಅಥವಾ ಶ್ವೇತ ಇಂಧನ ತುಂಬಿಸಿದ್ದ ಏರ್ ಇಂಡಿಯಾದ ಲಂಡನ್ ವಿಮಾನ ಕೆಳಗೆ ಬಿದ್ದು ಬ್ಲಾಸ್ಟ್ ಆಗಿದೆ. ಹೀಗಿದ್ದಾಗಲೇ, 1,00,00,000 ರೂಪಾಯಿ ಪರಿಹಾರ ಘೋಷಣೆ ಮಾಡಿದೆ ಟಾಟಾ ಸಂಸ್ಥೆ...

1,00,00,000 ರೂಪಾಯಿ ಪರಿಹಾರ ಘೋಷಣೆ...
242 ಜನರನ್ನು ಹೊತ್ತು ಏರ್ ಇಂಡಿಯಾ ವಿಮಾನ ಗುಜರಾತ್ ರಾಜ್ಯದ ಅಹಮದಾಬಾದ್ ನಗರದ ಏರ್ಪೋರ್ಟ್ ಮೂಲಕ ಲಂಡನ್ ಕಡೆಗೆ ಪ್ರಯಾಣ ಬೆಳೆಸಿತ್ತು. ಹೀಗೆ 232 ಪ್ರಯಾಣಿಕರು & 10 ಸಿಬ್ಬಂದಿ ಸೇರಿ ಒಟ್ಟು 242 ಜನ ತಮ್ಮ ಗುರಿ ತಲುಪುವ ನಿರೀಕ್ಷೆಯಲ್ಲಿ ಇದ್ದರು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ನಿಯಂತ್ರಣ ಕಳೆದುಕೊಂಡಿದ್ದ ಏರ್ ಇಂಡಿಯಾದ ವಿಮಾನ ಗಾಳಿಯಲ್ಲಿ ತೇಲುತ್ತಾ ಅಲ್ಲಾಡಿ ಹೋಗಿದೆ. ಹೀಗೆ, ನೋಡ ನೋಡುತ್ತಲೇ ವಿಮಾನ ಎಮೆರ್ಜೆನ್ಸಿ ಲ್ಯಾಂಡಿಂಗ್ ಮಾಡಲು ಪೈಲೆಟ್ ಪರದಾಡಿದ್ದು... ಕೊನೆಗೆ ನೇರವಾಗಿ ಹೋಗಿ ಮೆಡಿಕಲ್ ಕಾಲೇಜಿಗೆ ಅಪ್ಪಳಿಸಿದೆ. ಆಗಲೇ ನೋಡಿ ಈ ವಿಮಾನ ದಿಢೀರ್ ಸ್ಫೋಟಗೊಂಡಿದೆ. ಹೀಗೆ ದುರಂತದಲ್ಲಿ ಮೃತಪಟ್ಟ 241 ಜನರ ಕುಟುಂಬಗಳಿಗೆ 1,00,00,000 ರೂಪಾಯಿ ಪರಿಹಾರ ಘೋಷಣೆ ಮಾಡಿದೆ ಟಾಟಾ ಸಂಸ್ಥೆ...












Click it and Unblock the Notifications