ನಿಮ್ಮ ಮೊಬೈಲಿಗೆ ನಿಮ್ಮಿಷ್ಟದ ಸಂಖ್ಯೆ ಆಯ್ಕೆ ಮಾಡ್ಕೊಳಿ!

ನವದೆಹಲಿ, ಡಿ.22: ಗ್ರಾಹಕರನ್ನು ಸೆಳೆಯಲು ಟೆಲಿಕಾಂ ಕಂಪನಿಗಳು ಒಂದಲ್ಲ ಒಂದು ರೀತಿ ಸಾಹಸ ಮಾಡುತ್ತಲೇ ಇರುತ್ತವೆ. ದರ ಸಮರದ ಜೊತೆಗೆ ಹೊಸ ಹೊಸ ಕೊಡುಗೆಗಳು ಆಗಾಗ ಗ್ರಾಹಕರಿಗೆ ಸಿಗುತ್ತಿರುತ್ತದೆ.

ಎಂಎನ್ ಪಿ ನಂತರ ಈಗ ನಿಮ್ಮ ಮೊಬೈಲ್ ಫೋನಿಗೆ ನಿಮ್ಮಿಷ್ಟದ ಸಂಖ್ಯೆ ಆಯ್ದುಕೊಳ್ಳುವ ಅವಕಾಶವನ್ನು ಟಾಟಾ ಡೊಕೊಮೊ ಸಂಸ್ಥೆ ಪ್ರಪ್ರಥಮ ಬಾರಿಗೆ ಸೋಮವಾರದಿಂದ ಪರಿಚಯಿಸುತ್ತಿದೆ.

ಟಾಟಾ ಟೆಲಿ ಸರ್ವಿಸ್ ನ ಟಾಟಾ ಡೊಕೊಮೊ ಸಂಸ್ಥೆಯ ಗ್ರಾಹಕರು ಇನ್ಮುಂದೆ ತಮ್ಮ ನೆಚ್ಚಿನ ಸಂಖ್ಯೆ(ಹುಟ್ಟಿದ ದಿನಾಂಕ, ವಾರ್ಷಿಕೋತ್ಸವ..ಇತ್ಯಾದಿ) ಗಳನ್ನು ಆಯ್ಕೆ ಮಾಡಿ ಮೊಬೈಲ್ ಫೋನ್ ಸಂಖ್ಯೆ ಮಾಡಿಕೊಳ್ಳಬಹುದಾಗಿದೆ. [ಮಿಸ್ಡ್ ಕಾಲ್ ಕೊಟ್ಟು ಬ್ಯಾಂಕ್ ಬ್ಯಾಲೆನ್ಸ್ ಪಡೆಯಿರಿ]

Tata Docomo customers can create their own mobile number

ಈ ಹೊಸ ಸೌಲಭ್ಯವನ್ನು ಗ್ರಾಹಕರು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನಮಗೂ ಇದೆ. ಹಾಲಿ ಗ್ರಾಹಕರು ಹಾಗೂ ಹೊಸ ಗ್ರಾಹಕರಿಗೂ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಟಾಟಾ ಟೆಲಿ ಸರ್ವಿಸಸ್ ನ ಮುಖ್ಯಸ್ಥ ಸಂದೀಪ್ ಸಿಂಘಾಲ್ ಹೇಳಿದ್ದಾರೆ.

ಕ್ರೇಜಿ ನಂಬರ್ ಹೊಂದುವುದು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ಸೌಲಭ್ಯಕ್ಕೆ ಟಾಟಾ ಕಂಪನಿ ಮುಂದಾಗಿದೆ. ಮುಕ್ಕಾಲು ಪಾಲು ಟಾಟಾ ಸಂಸ್ಥೆ ಗ್ರಾಹಕರು ತಮ್ಮ ನೆಚ್ಚಿನ ಸಂಖ್ಯೆ ಆಯ್ದುಕೊಳ್ಳಲು ಇಚ್ಛೆ ವ್ಯಕ್ತಪಡಿಸಿದ್ದಾರಂತೆ. ಹೀಗಾಗಿ ಇನ್ನಷ್ಟು ಗ್ರಾಹಕ ಸ್ನೇಹಿಯಾಗಲು ಟಾಟಾ ಡೊಕೊಮೊ ಮುಂದಾಗಿದೆ.

ಕಳೆದ ವಾರ 2,899 ರು ಬೆಲೆಯ ಫೋಟಾನ್ ಮ್ಯಾಕ್ಸ್ ವೈ ಫೈ ಡಿಯೂ ಡಾಂಗಲ್ (4400mAh ಸಾಮರ್ಥ್ಯದ ಬ್ಯಾಟರಿ ಸಹಿತ) ಬಿಡುಗಡೆ ಮಾಡಲಾಗಿತ್ತು. ಮೈಕ್ರೋ ಎಸ್ ಡಿ 32 ಜಿಬಿ ಕಾರ್ಡ್ ಕೂಡಾ ಹೊಂದಿರುವ ಪವರ್ ಬ್ಯಾಂಕ್ ರೀತಿ ಕೂಡಾ ಕಾರ್ಯ ನಿರ್ವಹಿಸುವ ಈ ಡಾಂಗಲ್ ಜನಪ್ರಿಯತೆ ಗಳಿಸುತ್ತಿದೆ. ದೆಹಲಿ ಹಾಗೂ ಮುಂಬೈನಲ್ಲಿ ಲಭ್ಯವಿರುವ ಈ ಸಾಧನ ಮುಂಬರುವ ದಿನಗಳಲ್ಲಿ ಭಾರತದ ಇತರೆ ನಗರಗಳಲ್ಲಿ ಲಭ್ಯವಾಗಲಿದೆ ಎಂದು ಸಂಸ್ಥೆ ಹೇಳಿದೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+