ಇನ್ಫೋಸಿಸ್ Q1 ವರದಿ, ಅಚ್ಚರಿಯ ಬೋನಸ್ ಘೋಷಣೆ ಲಾಭ!

ಬೆಂಗಳೂರು, ಜುಲೈ 13: ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ ತನ್ನ ಏಪ್ರಿಲ್ -ಜೂನ್ ತ್ರೈಮಾಸಿಕ (Q1) ವರದಿಯನ್ನು ಶುಕ್ರವಾರದಂದು ಪ್ರಕಟಿಸಿದೆ. ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಗೆ ತಕ್ಕಂತೆ ಸಂಸ್ಥೆಯು ಫಲಿತಾಂಶ ಹೊರಹಾಕಲು ಸಾಧ್ಯವಾಗದಿದ್ದರೂ, ಬೋನಸ್ ಘೋಷಿಸಿ, ಅಚ್ಚರಿ ಮೂಡಿಸಿದೆ.

ಜೂನ್ 30ಕ್ಕೆ ಮುಕ್ತಾಯವಾದ ತ್ರೈಮಾಸಿಕ ವರದಿಯಲ್ಲಿ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ 270 ಕೋಟಿ ರು ನಷ್ಟವಾಗಿದೆ. ಪ್ರತಿ ಈಕ್ವಟಿ ಷೇರಿನ ಮೇಲಿನ ಮೂಲ ಆದಾಯ ಕೂಡಾ 1.24 ರು ನಷ್ಟು ಈ ತ್ರೈಮಾಸಿಕದಲ್ಲಿ ಇಳಿಕೆಯಾಗಿದೆ.

ಆದರೆ, ವರ್ಷದಿಂದ ವರ್ಷಕ್ಕೆ(YoY) ಲೆಕ್ಕಾಚಾರದಂತೆ ಶೇ 3.70ರಷ್ಟು ಲಾಭ ಏರಿಕೆಯಾಗಿದ್ದು, 3,612 ಕೋಟಿ ರು ಗಳಿಕೆಯಾಗಿದೆ. ಆದರೆ, ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆ 3,711.80 ಕೋಟಿ ರು ನಷ್ಟಿತ್ತು.

Takeaways from Infosys’ Q1 earnings: A surprise bonus

ಮೊದಲ ತ್ರೈಮಾಸಿಕ ವರದಿಯ ಮುಖ್ಯಾಂಶಗಳು

* ಸಂಸ್ಥೆಯ ಆದಾಯದಲ್ಲಿ ಶೇ 6ರಷ್ಟು ಏರಿಕೆಯಾಗಿದ್ದು, 19,130 ಕೋಟಿ ರುಗೇರಿದೆ.
* ಡಾಲರ್ ಲೆಕ್ಕಾಚಾರದಂತೆ ಆದಾಯ ಶೇ 0.9ರಷ್ಟು ಏರಿಕೆಯಾಗಿದ್ದು, 2,831 ಮಿಲಿಯನ್ ಡಾಲರ್ ನಷ್ಟಾಗಿದೆ.
* ನಿರ್ವಹಣಾ ಲಾಭ ಶೇ 2 ರಷ್ಟು ಇಳಿಕೆಯಾಗಿ, 4,267 ಕೋಟಿ ರುಗೆ ಬಂದಿದೆ.
* 2018-19ಕ್ಕೆ ಮಾರಾಟ ಪ್ರಗತಿ ಮಾರ್ಗದರ್ಶಿ ಶೇ 6 ರಿಂದ 8ರಷ್ಟು ಮಟ್ಟದಲ್ಲಿದೆ.
* 2019ರ ಆರ್ಥಿಕ ವರ್ಷಕ್ಕೆ ಆದಾಯ ಮಾರ್ಗದರ್ಶಿ ಅಂತರ ಶೇ 22 ರಿಂದ 24ರಷ್ಟು ಇರಿಸಿಕೊಳ್ಳಲಾಗಿದೆ.
* ಉತ್ತರ ಅಮೆರಿಕದಲ್ಲಿ ಆದಾಯ ಶೇ 2ರಷ್ಟು, ಯುರೋಪಿನಲ್ಲಿ ಶೇ 21ರಷ್ಟಿದೆ.
* ಈ ತ್ರೈಮಾಸಿಕದಲ್ಲಿ 70 ಹೊಸ ಗ್ರಾಹಕರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಒಟ್ಟಾರೆ, 5,798 ಹೊಸ ಉದ್ಯೋಗಿಗಳು ಸೇರಿಕೊಂಡಿದ್ದಾರೆ. ಒಟ್ಟಾರೆ, 2,09,905 ಉದ್ಯೋಗಿಗಳಿದ್ದಾರೆ.
* ಇನ್ಫೋಸಿಸ್ ಬೋರ್ಡ್ 1:1 ಅನುಪಾತದ ಬೋನಸ್ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+