• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಹಕರಿಂದ ಶೇ. 5 ಜಿಎಸ್‌ಟಿ ಸಂಗ್ರಹಿಸಲಿದೆ ಸ್ವಿಗ್ಗಿ, ಜೋಮ್ಯಾಟೋ: ಇನ್ನು ಫುಡ್‌ ಡೆಲವರಿ ದುಬಾರಿ ಆಗುತ್ತಾ?

|
Google Oneindia Kannada News

ನವದೆಹಲಿ, ಡಿಸೆಂಬರ್‌ 21: ಭಾರತದಲ್ಲಿ ಸ್ವಿಗ್ಗಿ ಮತ್ತು ಜೋಮ್ಯಾಟೋ ರೀತಿಯ ಆಹಾರ ಪೂರೈಕೆ ಅಪ್ಲಿಕೇಷನ್ (food delivery application) ಕಂಪನಿಗಳು ರೆಸ್ಟೋರೆಂಟ್ ಬದಲಿಗೆ ಗ್ರಾಹಕರಿಂದಲೇ ನೇರವಾಗಿ ಶೇ.5ರಷ್ಟು ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆಯನ್ನು ಸಂಗ್ರಹ ಮಾಡಲಿದೆ. ಈ ಹೊಸ ತೆರಿಗೆ ನೀತಿಯು ಹೊಸ ವರ್ಷದ ಆರಂಭ ಅಂದರೆ ಜನವರಿ ಒಂದರಿಂದಲೇ ಜಾರಿಗೆ ಬರಲಿದೆ.

ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರದ 45ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಭಾರತದಲ್ಲಿ ಸ್ವಿಗ್ಗಿ ಮತ್ತು ಜೋಮ್ಯಾಟೋ ರೀತಿಯ ಕಂಪನಿಗಳು ರೆಸ್ಟೋರೆಂಟ್ ಬದಲಿಗೆ ಗ್ರಾಹಕರಿಂದಲೇ ನೇರವಾಗಿ ಶೇ.5ರಷ್ಟು ಜಿಎಸ್‌ಟಿ ಅಥವಾ ಸರಕು ಮತ್ತು ಸೇವಾ ತೆರಿಗೆಯನ್ನು ಸಂಗ್ರಹಿಸಬೇಕು," ಎಂದು ಹೇಳಿದ್ದರು. ಈ ಪ್ರಸ್ತಾಪವನೆಗೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ದೊರೆತಿತ್ತು.

ಈ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಹಾರ ಪೂರೈಕೆ ಸಂಸ್ಥೆಗಳ ಮೇಲೆ ಶೇಕಡ ಐದರಷ್ಟು ಜಿಎಸ್‌ಟಿಯನ್ನು ವಿಧಿಸಲಾಗಿತ್ತು. ಆದರೆ ಈಗ ಈ ಸಂಸ್ಥೆಗಳ ಮೇಲಿನ ಮೇಲಿನ ತೆರಿಗೆ ನೀತಿ ಬದಲಾವಣೆ ಆಗಿದ್ದು, ಈ ಫುಡ್ ಡೆಲಿವರಿ ಅಪ್ಲಿಕೇಷನ್ ಗಳು ಗ್ರಾಹಕರಿಂದ ಶೇ.5ರಷ್ಟು ಜಿಎಸ್‌ಟಿ ಸಂಗ್ರಹಿಸಿ ಸರ್ಕಾರಕ್ಕೆ ನೀಡಬೇಕಿದೆ.

ಗ್ರಾಹಕರ ಮೇಲೆ ಹೇಗೆ ಪರಿಣಾಮ ಬೀರಲಿದೆ?

ಈ ಜಿಎಸ್‌ಟಿ ನೋಂದಾಯಿತ ರೆಸ್ಟೋರೆಂಟ್‌ಗಳಿಂದ ಊಟವನ್ನು ಆರ್ಡರ್ ಮಾಡುವ ಗ್ರಾಹಕರ ಮೇಲೆ ನಿಯಮ ಬದಲಾವಣೆಯು ಹೆಚ್ಚುವರಿ ತೆರಿಗೆ ಹೊರೆಯನ್ನು ಹಾಕಲಾರದು. ಬದಲಿಗೆ ಈ ಕ್ರಮವು ನೋಂದಾಯಿಸದ ರೆಸ್ಟೋರೆಂಟ್‌ಗಳನ್ನು ತೆರಿಗೆ ನೀತಿಯಡಿಗೆ ತರಲಿದೆ. ಆದ್ದರಿಂದ, ಆಹಾರ ವಿತರಣೆಯು ದುಬಾರಿಯಾಗುವ ಸಾಧ್ಯತೆಯಿಲ್ಲ. ಆದರೆ ಒಂದು ವೇಳೆ ಈ ಅಪ್ಲಿಕೇಶನ್‌ಗಳು ಗ್ರಾಹಕರಿಗೆ ತೆರಿಗೆ ಹೊರೆಯನ್ನು ರವಾನಿಸಲು ಮುಂದಾದರೆ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಹಾಗೆಯೇ ಆಹಾರ ವಿತರಣೆಯು ದುಬಾರಿಯಾಗುವ ಸಾಧ್ಯತೆಯಿಲ್ಲ.

ಇನ್ನು ಹಣಕಾಸು ಸಚಿವಾಲಯವು ಪ್ರಸ್ತಾಪಿಸಿದಂತೆ, ನಿಯಮ ಬದಲಾವಣೆಯನ್ನು ಜಾರಿಗೊಳಿಸಿದ ನಂತರ ಗ್ರಾಹಕರು ಫುಡ್‌ ಡೆಲವರಿಗೆ ತೆರಿಗೆ ಸಂಗ್ರಹ ಮಾಡುವ ಮೂಲವಾಗುತ್ತಾರೆ. ಸ್ವಿಗ್ಗಿ ಮತ್ತು ಜೋಮ್ಯಾಟೋ ಅಪ್ಲಿಕೇಷನ್ ಕಂಪನಿಗಳು ತೆರಿಗೆ ಸಂಗ್ರಹಣೆ ಕೇಂದ್ರಗಳಿಂದ ಜಿಎಸ್‌ಟಿ ಪಡೆದುಕೊಳ್ಳುತ್ತಿದ್ದವು, ಆ ಬಳಿಕ ರೆಸ್ಟೋರೆಂಟ್‌ಗಳಿಗೆ ಜಿಎಸ್‌ಟಿ ವಿಧಿಸಲಾಯಿತು. ಈಗ, ತೆರಿಗೆಯನ್ನು ಗ್ರಾಹಕರಿಂದ ಸಂಗ್ರಹಿಸಲಾಗುತ್ತದೆ. ಅಧಿಕಾರಿಗಳಿಗೆ ಅಪ್ಲಿಕೇಶನ್‌ಗಳ ಮೂಲಕ ಪಾವತಿಸಲಾಗುತ್ತದೆ. ಇಲ್ಲಿಯವರೆಗೆ ರೆಸ್ಟೋರೆಂಟ್ ಮಾಲೀಕರು ತೆರಿಗೆಯನ್ನು ಪಾವತಿಸುತ್ತಿದ್ದರು. ಆದರೆ ಈಗ ಆಪ್‌ಗಳು ಕೂಡಾ ತೆರಿಗೆಯನ್ನು ಪಾವತಿ ಮಾಡಬೇಕಾಗಿದೆ. ಇದು 2022 ರಿಂದ ಜಾರಿಗೆ ಬರಲಿದೆ.

ಪ್ರಸ್ತುತ ಗ್ರಾಹಕ ಸ್ವಿಗ್ಗಿ ಅಥವಾ ಜೋಮ್ಯಾಟೋ ಆಪ್‌ ಮೂಲಕ ರೆಸ್ಟೋರೆಂಟ್‌ನಿಂದ ಆಹಾರವನ್ನು ಆರ್ಡರ್‌ ಮಾಡಿದರೆ, ಆತನಿಗೆ ಆಹಾರದ ಮೇಲೆ ಶೇ.5ರಷ್ಟು ತೆರಿಗೆಗಳನ್ನು ಈ ಸಂಸ್ಥೆಗಳೇ ಸಂಗ್ರಹಿಸಿ ರೆಸ್ಟೋರೆಂಟ್‌ಗಳಿಗೆ ನೀಡುತ್ತಿದ್ದವು. ಆದರೆ ಕೆಲವು ರೆಸ್ಟೋರೆಂಟ್‌ಗಳು ಈ ಹಣವನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿರಲಿಲ್ಲ. ಈ ನಿಟ್ಟಿನಲ್ಲಿ ಫುಡ್ ಡೆಲಿವರಿ ಆಪ್ಲಿಕೇಷನ್‌ಗಳೇ ಜನವರಿ ಒಂದರಿಂದ ಗ್ರಾಹಕರಿಂದ ತೆರಿಗೆ ಸಂಗ್ರಹ ಮಾಡಿ ಅದನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಬೇಕಾಗಿದೆ. ಇದರಿಂದಾಗಿ ರೆಸ್ಟೋರೆಂಟ್‌ಗಳು ತಮ್ಮ ಆನ್‌ಲೈನ್‌ ವ್ಯವಹಾರದ ಮಾಹಿತಿ ಮುಚ್ಚಿಡಲು ಸಾಧ್ಯವಾಗಲಾರದು.

ಗ್ರಾಹಕರ ಮೇಲೆ ಪರಿಣಾಮ ಬೀರಲ್ಲ ಎಂದಿರುವ ಸರ್ಕಾರ

ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರದ 45ನೇ ಜಿಎಸ್‌ಟಿ ಕೌನ್ಸಿಲ್ ಸಭೆಯ ನಂತರ ಮಾಧ್ಯಮದೊಂದಿಗೆ ಮಾತನಾಡಿದ್ದ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್, "ಹೆಚ್ಚುವರಿಯಾಗಿ ಯಾವುದೇ ಹೊಸ ತೆರಿಗೆಗಳನ್ನು ಘೋಷಿಸಿಲ್ಲ. ಕೇವಲ ಜಿಎಸ್‌ಟಿ ಸಂಗ್ರಹಣಾ ಕೇಂದ್ರವನ್ನು ವರ್ಗಾಯಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ. "ನೀವು ಸಂಗ್ರಾಹಕರಿಂದ ಆಹಾರವನ್ನು ಆರ್ಡರ್ ಮಾಡಿದ್ದೀರಿ ಎಂದು ತಿಳಿದುಕೊಳ್ಳೋಣ. ಪ್ರಸ್ತುತದಲ್ಲಿ ರೆಸ್ಟೋರೆಂಟ್ ತೆರಿಗೆ ಪಾವತಿಸುತ್ತಿದೆ. ಆದರೆ ಕೆಲವು ರೆಸ್ಟೋರೆಂಟ್‌ಗಳು ತೆರಿಗೆ ಪಾವತಿಸುತ್ತಿರಲಿಲ್ಲ ಎಂದು ನಾವು ಕಂಡುಕೊಂಡಿದ್ದೇವೆ. ಈಗ ನೀವು ಸಂಗ್ರಹಾಕಾರರಿಗೆ ಆರ್ಡರ್ ಮಾಡಿದರೆ, ಗ್ರಾಹಕರಿಂದ ಸಂಗ್ರಹಿಸಿ ನೇರವಾಗಿ ಅಧಿಕಾರಿಗಳಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ. ಈ ಮೊದಲು ರೆಸ್ಟೋರೆಂಟ್ ಈ ಕಾರ್ಯವನ್ನು ಮಾಡುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿ ಹೆಚ್ಚುವರಿ ತೆರಿಗೆ ಹೇರುವುದಿಲ್ಲ," ಎಂದು ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Swiggy, Zomato to collect 5% GST from customers from January 1. Know How it effect on food delivery cost.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X