ಸ್ವಿಗ್ಗಿ ಸಂಸ್ಥೆಯಿಂದ ಸ್ವಿಗ್ಗಿ ಗೋ ಎಂಬ ಪಿಕಪ್ ಮತ್ತು ಡ್ರಾಪ್ ಸೇವೆ
ಬೆಂಗಳೂರು, ಸೆ. 04: ವರ್ಷದ ಆರಂಭದಲ್ಲಿ ಸ್ವಿಗ್ಗಿ ಸ್ಟೋರ್ ಗಳನ್ನು ಆರಂಭಿಸಿದ ಬಳಿಕ ಭಾರತದ ಮುಂಚೂಣಿಯಲ್ಲಿರುವ ಬೇಡಿಕೆ ಆಧಾರಿತ ಡೆಲಿವರಿ ಪ್ಲಾಟ್‍ಫಾರಂ ಆಗಿರುವ ಸ್ವಿಗ್ಗಿ ಇದೀಗ, 'ಸ್ವಿಗ್ಗಿ ಗೋ' ಎಂಬ ಹೊಸ ಸೌಲಭ್ಯವನ್ನು ಆರಂಭಿಸುವ ಮೂಲಕ ಗ್ರಾಹಕರಿಗೆ ಹೋಲಿಕೆಗೂ ನಿಲುಕದ ಆರಾಮದಾಯಕತೆಯನ್ನು ಒದಗಿಸುವ ತನ್ನ ಧ್ಯೇಯದಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ.
ಬೆಂಗಳೂರಿನಾದ್ಯಂತ ಈ ಸೇವೆ ಆರಂಭವಾಗಿದ್ದು, ಸ್ವಿಗ್ಗಿ ಗೋ ಎಂಬುದು ನಗರದ ಯಾವುದೇ ಮೂಲೆಗೂ ಪ್ಯಾಕೇಜ್‍ಗಳನ್ನು ತಲುಪಿಸುವಂಥ ತತ್‍ಕ್ಷಣದ ಪಿಕಪ್ ಮತ್ತು ಡ್ರಾಪ್ ಸೇವೆ ಆಗಿದೆ. ಸ್ವಿಗ್ಗಿ ಸ್ಟೋರ್ ಗಳಂತೆಯೇ ಸ್ವಿಗ್ಗಿ ಗೋ ಎನ್ನುವುದು ಕೂಡ ಸ್ವಿಗ್ಗಿ ಅಪ್ಲಿಕೇಷನ್‍ನ ಭಾಗವೇ ಆಗಿದೆ.
Recommended Video
ನಗರದಲ್ಲಿರುವ ಪ್ರತಿಯೊಬ್ಬ ಗ್ರಾಹಕನಿಗೂ ಡೆಲಿವರಿಯನ್ನು ಸುಲಭವಾಗಿಸುವ ಭರವಸೆಯ ಮೂಲಕ, ಸ್ವಿಗ್ಗಿ ಗೋ ಸೇವೆಯನ್ನು ಲಾಂಡ್ರಿಯನ್ನು ಒಯ್ಯಲು, ರವಾನಿಸಲು, ಮರೆತುಹೋಗಿರುವ ಕೀಲಿಕೈಗಳನ್ನು ಸೂಕ್ತ ಮಾಲೀಕನಿಗೆ ತಲುಪಿಸಲು, ಮನೆಯಿಂದ ಕಚೇರಿಗೆ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗಲು ಅಥವಾ ಕ್ಲೈಂಟ್‍ಗಳಿಗೆ ಕಡತಗಳು ಅಥವಾ ಪಾರ್ಸೆಲ್‍ಗಳನ್ನು ತಲುಪಿಸಲು ಹೀಗೆ ನಾನಾ ಉದ್ದೇಶಗಳಿಗಾಗಿ ಬಳಸಬಹುದಾಗಿದೆ. ಗ್ರಾಹಕರಿಗೆ ಆರಾಮದಾಯಕತೆ ಒದಗಿಸಲು ಮತ್ತು ಅವರ ಸಮಯವನ್ನು ಉಳಿಸುವತ್ತ ಸ್ವಿಗ್ಗಿ ಗಮನ ನೆಟ್ಟಿದೆ, ಬಲಿಷ್ಠವಾದ ಇನ್-ಹೌಸ್ ತಂತ್ರಜ್ಞಾನ ಮತ್ತು ದೇಶದ ಅತಿದೊಡ್ಡ ಸಕ್ರಿಯ ಡೆಲಿವರಿ ಸಂಸ್ಥೆಯಾದ ಸ್ವಿಗ್ಗಿ ಸಹಜವಾಗಿಯೇ ಅತ್ಯಂತ ಅಗ್ಗದ ದರದಲ್ಲಿ ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸುತ್ತಿದೆ.
ಸ್ವಿಗ್ಗಿ ಗೋ ಸೇವೆಗೆ ಚಾಲನೆ ಮತ್ತು ಸ್ವಿಗ್ಗಿ ಸ್ಟೋರ್‍ಗಳ ವಿಸ್ತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಿಗ್ಗಿ ಸಿಇಒ ಶ್ರೀಹರ್ಷ ಮೆಜೆಟಿ, ನಗರದ ಗ್ರಾಹಕರಿಗೆ ಅತ್ಯುತ್ತಮವಾದ ಆರಾಮದಾಯಕತೆಯನ್ನು ಒದಗಿಸುವ ಮೂಲಕ ಅವರ ಜೀವನ ಗುಣಮಟ್ಟವನ್ನು ಎತ್ತರಕ್ಕೇರಿಸುವುದೇ ಸ್ವಿಗ್ಗಿಯ ಧ್ಯೇಯವಾಗಿದೆ. ಕಳೆದ ಐದು ವರ್ಷಗಳಿಂದ ಆಹಾರದ ಪೂರೈಕೆಯ ಮೂಲಕ ಮತ್ತು ನಗರದಾದ್ಯಂತ ಮಳಿಗೆಗಳನ್ನು ತೆರೆಯುವ ಮೂಲಕ ಈ ಧ್ಯೇಯವನ್ನು ಸಾಧಿಸಿರುವ ಸಂಸ್ಥೆ, ಈಗ ಸ್ವಿಗ್ಗಿ ಗೋ ಮೂಲಕ ನಗರದ ಎಲ್ಲ ಗ್ರಾಹಕರಿಗೂ ಸ್ವಿಗ್ಗಿ ಡೆಲಿವರಿ ಸೂಪರ್‍ಪವರ್ ಅನ್ನು ವಿಸ್ತರಿಸಲಿದೆ '' ಎಂದು ಹೇಳಿದರು.

ಸ್ವಿಗ್ಗಿಯ ಸೇವೆಗೆ ಸಾಕ್ಷಿಯಾದ ಮೊದಲ ನಗರ ಬೆಂಗಳೂರು
"ಕೇವಲ ಆಹಾರ ಮಾತ್ರವಲ್ಲದೆ, ಇತರೆ ವಸ್ತುಗಳನ್ನೂ ತಲುಪಬೇಕಾದವರಿಗೆ ತಲುಪಿಸುವಂಥ ಸ್ವಿಗ್ಗಿಯ ಸೇವೆಗೆ ಸಾಕ್ಷಿಯಾದ ದೇಶದ ಮೊದಲ ನಗರವೆಂದರೆ ಅದು ಬೆಂಗಳೂರು. 2020ರೊಳಗಾಗಿ ನಾವು ಸ್ವಿಗ್ಗಿ ಗೋ ಸೇವೆಯನ್ನು ಸುಮಾರು 300 ನಗರಗಳಿಗೆ ವಿಸ್ತರಿಸುತ್ತಿದ್ದು, ಸ್ವಿಗ್ಗಿ ಸ್ಟೋರ್‍ಗಳನ್ನು ಎಲ್ಲ ಪ್ರಮುಖ ಮೆಟ್ರೋಗಳಲ್ಲಿ ವಿಸ್ತರಿಸಲು ನಿರ್ಧರಿಸಿದ್ದೇವೆ. ಈ ಮೂಲಕ ಭಾರತದಾದ್ಯಂತದ ಗ್ರಾಹಕರಿಗೆ ಆರಾಮದಾಯಕತೆಯ ಹೊಸ ಯುಗವನ್ನು ಸೃಷ್ಟಿಸಲಿದ್ದೇವೆ,'' ಎಂದು ಸಿಇಒ ಶ್ರೀಹರ್ಷ ಹೇಳಿದರು.
ಸ್ವಿಗ್ಗಿ ಸಂಸ್ಥೆಯು ತನ್ನ ಬೇಡಿಕೆ-ಆಧರಿತ ಡೆಲಿವರಿ ಸೇವೆಯಾದ ಸ್ವಿಗ್ಗಿ ಸ್ಟೋರ್‍ಗಳನ್ನು ಬೆಂಗಳೂರು ಮತ್ತು ಹೈದರಾಬಾದ್‍ಗೂ ವಿಸ್ತರಿಸಿದ್ದು, ಈ ನಗರಗಳಲ್ಲಿ ಗ್ರಾಹಕರು ಪ್ರತಿಯೊಂದು ಮಳಿಗೆಯಿಂದಲೂ ಆರ್ಡರ್ ಗಳನ್ನು ಮಾಡಬಹುದಾಗಿದೆ.

ಗುರುಗ್ರಾಮದಲ್ಲಿ ಆರಂಭಗೊಂಡ ಸೇವೆ
ಗುರುಗ್ರಾಮದಲ್ಲಿ ಆರಂಭಗೊಂಡ ಕೇವಲ ಆರು ತಿಂಗಳುಗಳಲ್ಲಿ, ಸ್ವಿಗ್ಗಿ ಸ್ಟೋರ್ ಗಳು ಈಗಾಗಲೇ ಗಣನೀಯ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸ್ವಿಗ್ಗಿಯ ಆಹಾರ ಡೆಲಿವರಿಯ ಪ್ರಮಾಣಕ್ಕೆ ಹೋಲಿಸಿದರೆ, ಸ್ಟೋರ್ ಗಳೇ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವ ಮೂಲಕ ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಪ್ರತಿ ದಿನವೂ ಹೊಸ ಹೊಸ ಸ್ಟೋರ್ ಗಳು ಆರಂಭವಾಗುತ್ತಿದ್ದು, ತನ್ನ ಪಾಲುದಾರರ ಆದಾಯದ ಹರಿವನ್ನೂ ಸ್ವಿಗ್ಗಿ ಹೆಚ್ಚಿಸುತ್ತಿದೆ. ಸ್ವಿಗ್ಗಿ ಸ್ಟೋರ್ ಗಳಿಂದಾಗಿ ಅಭಿವೃದ್ಧಿ ಕಾಣುತ್ತಿರುವ ಅನೇಕರು ತಮ್ಮ ತಮ್ಮ ಉದ್ದಿಮೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ.
ಗುರುಗ್ರಾಮದಲ್ಲಿ ಅಭೂತಪೂರ್ವ ಯಶಸ್ಸು ಕಂಡ ಸ್ವಿಗ್ಗಿ ಸ್ಟೋರ್ ಗಳು ಈಗ ಹತ್ತು ವಿಭಾಗಗಳಲ್ಲಿ ತನ್ನ ಮಳಿಗೆಗಳಿಂದ ಡೆಲಿವರಿ ಮಾಡಲಿದೆ. ಬೆಂಗಳೂರು ಮತ್ತು ಹೈದರಾಬಾದ್‍ನಲ್ಲಿ ಹಣ್ಣುಗಳು ಮತ್ತು ತರಕಾರಿಗಳು, ಕಿರಾಣಿಗಳು ಮತ್ತು ಸೂಪರ್ ಮಾರ್ಕೆಟ್‍ಗಳು, ಮಾಂಸದ ಅಂಗಡಿಗಳು ಮತ್ತು ಫಾರ್ಮಸಿಗಳು ಹೀಗೆ ಹತ್ತು ಕೆಟಗರಿಗಳಲ್ಲಿ ಡೆಲಿವರಿ ಕೈಗೊಳ್ಳಲಿದೆ.

300ಕ್ಕೂ ಅಧಿಕ ಪಾಲುದಾರ ಸಂಸ್ಥೆಗಳು
ಬೆಂಗಳೂರಿನಲ್ಲಿ, ಸ್ವಿಗ್ಗಿ ಸಂಸ್ಥೆಗೆ ಗೋದ್ರೇಜ್ ನೇಚರ್ಸ್ ಬಾಸ್ಕೆಟ್, ನೀಲಗಿರೀಸ್, ಆರ್ಗಾನಿಕ್ ವರ್ಲ್ಡ್, ಹೆಡ್ ಅಪ್ ಫಾರ್ ಟೈಲ್ಸ್, ನಂದೂಸ್ ಚಿಕನ್ ಸೇರಿದಂತೆ 300 ಕ್ಕೂ ಅಧಿಕ ವ್ಯಾಪಾರಿ ಪಾಲುದಾರರಿದ್ದು, ಈ ಪೈಕಿ ಯಾವುದೇ ಮಳಿಗೆಯಿಂದಲಾದರೂ ಸ್ವಿಗ್ಗಿ ಡೆಲಿವರಿ ಮಾಡಲಿದೆ. ಹೈದರಾಬಾದ್‍ನಲ್ಲಿ ಇದು ಮುಂದಿನ ಎರಡು ವಾರಗಳಲ್ಲೇ ಆರಂಭವಾಗಲಿದೆ. ಆದರೂ, ಸ್ವಿಗ್ಗಿಯು ರತ್ನದೀಪ್, ಘನಶ್ಯಾಮ್, ಸ್ನೇಹಾ ಚಿಕನ್, ಯೆಲ್ಲೋ ಆಂಡ್ ಗ್ರೀನ್ಸ್, 24 ಆರ್ಗ್ಯಾನಿಕ್ ಮಂತ್ರ ಸೇರಿದಂತೆ ಸುಮಾರು 200ರಷ್ಟು ವ್ಯಾಪಾರಿ ಪಾಲುದಾರರ ಜತೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ನಗರದಲ್ಲಿ ಗ್ರಾಹಕನು ಆಯ್ಕೆ ಮಾಡುವ ಯಾವುದೇ ಮಳಿಗೆಯಿಂದಾದಲೂ ಡೆಲಿವರಿ ಸೇವೆ ಕೈಗೊಳ್ಳಲಿದೆ.

ಫ್ರೆಶ್ ಟು ಹೋಮ್‍ಗಳಿಂದ ಡೆಲಿವರಿ
ಎರಡೂ ನಗರಗಳಲ್ಲಿ ರಾಷ್ಟ್ರೀಯ ಪಾಲುದಾರರಾದ ಈಸಿಡೇ, ಹೆರಿಟೇಜ್ ಫ್ರೆಷ್, ಸ್ಪಾರ್, ಅಪೊಲೋ ಫಾರ್ಮಸಿ, ಹೆಲ್ತ್ ಕಾರ್ಟ್, ಫೆರ್ನ್ಸ್ ಎನ್ ಪೆಟಲ್ಸ್, ಲಿಷಿಯಸ್ ಮತ್ತು ಫ್ರೆಶ್ ಟು ಹೋಮ್‍ಗಳಿಂದ ಡೆಲಿವರಿ ಮಾಡಲಾಗುತ್ತದೆ.
ಸ್ವಿಗ್ಗಿ ಗೋ ಮತ್ತು ಸ್ಟೋರ್‍ಗಳಿಗೆ ಎಲ್ಲ ಡೆಲಿವರಿಗಳನ್ನೂ ಸ್ವಿಗ್ಗಿಯ ಬದ್ಧತೆಯುಳ್ಳ ಫ್ಲೀಟ್ ಮೂಲಕವೇ ನಡೆಸಲಾಗುತ್ತದೆ. ಇದರಿಂದಾಗಿ ಸ್ವಿಗ್ಗಿಯ ಡೆಲಿವರಿ ಪಾಲುದಾರರಿಗೆ ಹೆಚ್ಚುವರಿ ಆದಾಯವೂ ಲಭ್ಯವಾಗಲಿದೆ. ಎಲ್ಲ ಡೆಲಿವರಿ ಪಾಲುದಾರರೂ ತತ್ವಾಧಾರಿತವಾಗಿ ಸ್ವಿಗ್ಗಿಯೊಂದಿಗೆ ಸಂಬಂಧ ಹೊಂದಿದ್ದು, ಜೀವವಿಮೆ, ವೈದ್ಯಕೀಯ ಮತ್ತು ಅಪಘಾತದ ಕವರೇಜ್ ಅನ್ನೂ ಪಡೆಯುತ್ತಾರೆ. ಸೂಚನೆ: ಫಾರ್ಮಸಿ ಡೆಲಿವರಿಗಳು ಕೇವಲ ಓವರ್ ದಿ ಕೌಂಟರ್(ವೈದ್ಯರ ಲಿಖಿತ ಟಿಪ್ಪಣಿಯಿಲ್ಲದೇ ನೇರವಾಗಿ ಗ್ರಾಹಕರಿಗೆ ನೀಡುವಂಥ ಔಷಧಗಳು) ಔಷಧಗಳನ್ನು ಮಾತ್ರವೇ ಪೂರೈಸುತ್ತದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ












Click it and Unblock the Notifications