ಮಲ್ಯರ ಕಾರು ಖರೀದಿಗೆ ನೀವು ಬಿಡ್ ಸಲ್ಲಿಸಬಹುದು!

Subscribe to Oneindia Kannada

ನವದೆಹಲಿ,ಜುಲೈ 26 : ವಿದೇಶದಲ್ಲಿ ಕುಳಿತಿರುವ ವಿಜಯ್ ಮಲ್ಯಗೆ ಭಾರತದಲ್ಲಿ ನೀಡುತ್ತಿರುವ ನೋಟಿಸ್ ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಜತೆಗೆ ಮಲ್ಯ ಅವರಿಗೆ ಸೇರಿದ 8 ಐಷಾರಾಮಿ ಕಾರುಗಳನ್ನು ಹರಾಜು ಹಾಕಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಸಂಪೂರ್ಣ ಆಸ್ತಿ ವಿವರವನ್ನು ಸಲ್ಲಿಸುವಂತೆ ಸೂಚಿಸಿದ್ದ ಸುಪ್ರೀಂಕೋರ್ಟ್‌ಗೆ ವರದಿ ನೀಡುವಾಗ ಉದ್ಯಮಿ ವಿಜಯ್ ಮಲ್ಯ ಹಲವು ಮಾಹಿತಿಗಳನ್ನು ಮರೆಮಾಚಿದ್ದ ಕಾರಣಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ್ದು, ಸಮರ್ಪಕ ಮಾಹಿತಿ ನೀಡುವಂತೆ ಸೂಚಿಸಿದೆ.

ಉದ್ಯಮಿ ವಿಜಯ್ ಮಲ್ಯರ 8 ಕಾರುಗಳನ್ನು ಆದಾಯ ತೆರಿಗೆ ಇಲಾಖೆಯ ಜತೆಗೂಡಿ ಹರಾಜು ಹಾಕಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆ ಎಸ್​ಬಿಐಸಿಎಪಿ ಕಂಪನಿ ಮುಂದಾಗಿದೆ. ಇದಕ್ಕೆ ಆಗಸ್ಟ್ 25ರ ದಿನಾಂಕವನ್ನು ನಿಗದಿ ಮಾಡಿಕೊಂಡಿದೆ.

ಸುಪ್ರೀಂ ನಿಂದ ಮತ್ತೆ ನೋಟಿಸ್

ಸುಪ್ರೀಂ ನಿಂದ ಮತ್ತೆ ನೋಟಿಸ್

ಬ್ರಿಟಿಷ್ ಸಂಸ್ಥೆ ಡಿಯಾಜಿಯೋದಿಂದ ಸ್ವೀಕರಿಸಿದ 300 ಕೋಟಿ ರೂ. ಬಗ್ಗೆ ಮಲ್ಯ ಎಲ್ಲಿಯೂ ದಾಖಲೆ ನೀಡಿಲ್ಲ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟಗಿ ವಾದ ಮುಂದಿಟ್ಟಿದ್ದಾರೆ. ನಾಲ್ಕು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಮಲ್ಯಗೆ ಕೋರ್ಟ್ ಸೂಚಿಸಿದೆ.

9 ಸಾವಿರ ಕೋಟಿ

9 ಸಾವಿರ ಕೋಟಿ

ಎಸ್‌ಬಿಐ ನೇತೃತ್ವದ 17 ಬ್ಯಾಂಕ್‌ಗಳಿಗೆ ಮಲ್ಯ 9 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ಐಡಿಬಿಐ ಗೆ ಸಂಬಂಧಿಸಿದ ಪ್ರಕರಣದಲ್ಲಿ ಮಲ್ಯಗೆ ರೆಡ್ ಕಾರ್ನರ್ ನೋಟಿಸ್ ಸಹ ನೀಡಲಾಗಿದೆ.

ಕಾರು ಹರಾಜು

ಕಾರು ಹರಾಜು

ಸದ್ಯ ಕಿಂಗ್​ಫಿಷರ್ ಹೌಸ್​ನ ಆವರಣದಲ್ಲಿರುವ ಕಾರುಗಳನ್ನು ಆ. 25ರಂದು ಹರಾಜಿಗಿಡಲು ತೀರ್ಮಾನಿಸಲಾಗಿದೆ. 13.70 ಲಕ್ಷ ರೂ. ಆರಂಭಿಕ ಬೆಲೆ ನಿಗದಿಪಡಿಸಲಾಗಿದೆ.

ಬಿಡ್ಡಿಂಗ್ ನೋಂಣಿಗೆ ಅವಕಾಶ

ಬಿಡ್ಡಿಂಗ್ ನೋಂಣಿಗೆ ಅವಕಾಶ

ಕಾರು ಖರೀದಿ ಸಂಬಂಧ ಬಿಡ್ಡಿಂಗ್ ನೋಂದಣಿ ಪ್ರಕ್ರಿಯೆ ಆ. 23ಕ್ಕೆ ನಡೆಯಲಿದ್ದು, ಇದಕ್ಕೆ 2,000 ರೂ. ಶುಲ್ಕ ನಿಗದಿಪಡಿಸಲಾಗಿದೆ. ಜು. 29ರಿಂದ ಆ. 5ರವರೆಗೆ ಕಾರುಗಳ ಪರಿಶಿಲನೆಗೆ ಅವಕಾಶ ಕಲ್ಪಿಸಲಾಗಿದೆ.

ಯಾವ ಕಾರುಗಳಿವೆ?

ಯಾವ ಕಾರುಗಳಿವೆ?

ಎರಡೂವರೆ ಲಕ್ಷ ರೂ. ಮೌಲ್ಯದ ಟೊಯೊಟಾ ಇನ್ನೊವಾ, 2.20 ಲಕ್ಷ ರೂ. ಮೌಲ್ಯದ ಟೊಯೊಟಾ ಕೊರೊಲ, 2 ಲಕ್ಷ ರೂ. ಮೌಲ್ಯದ ಹೋಂಡಾ ಸಿಟಿ ಝುಡ್​ಎಕ್ಸ್ ಮತ್ತಿತರ ಕಾರುಗಳು ಹರಾಜಾಗಲಿವೆ ಎಂದು ಬ್ಯಾಂಕ್ ಗಳ ಒಕ್ಕೂಟ ಮಾಹಿತಿ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The King of good times, Vijay Mallya is definitely giving a hard time to officials and banks in India. On Monday, Supreme Court issued a notice to Mallya over a contempt petition filed by the banks alleging that he had failed to disclose his assets.
Please Wait while comments are loading...