Ratan Tata: ರತನ್ ಟಾಟಾ ಬಳಿಕ 3,800 ಕೋಟಿ ರೂ. ಸಾಮ್ರಾಜ್ಯದ ಅಧಿಪತಿ ಯಾರು?
ರತನ್ ಟಾಟಾ ಅವರು ಇನ್ನಿಲ್ಲ ಎಂಬ ಸುದ್ದಿ ಭಾರತ ಮೂಲೆ ಮೂಲೆಯಲ್ಲೂ ಸಂಚಲನ ಸೃಷ್ಟಿ ಮಾಡಿದ್ದು, ಬಿರುಗಾಳಿಯನ್ನೇ ಎಬ್ಬಿಸಿದೆ ಎನ್ನಬಹುದು. ಯಾಕಂದ್ರೆ ನಮ್ಮ & ನಿಮ್ಮ ಮನಸ್ಸಿನಲ್ಲೂ ಗೌರವಯತ ಭಾವನೆ ಹೊಂದಿರುವ ವ್ಯಕ್ತಿ ರತನ್ ಟಾಟಾ ಅವರು.
ಉದ್ಯಮಿ ಒಬ್ಬ ಹೇಗೆಲ್ಲಾ ಸಮಾಜಸೇವೆ ಮಾಡಬಹುದು? ಎಂಬುದಕ್ಕೆ ನಮ್ಮ ದೇಶದ ಹೆಮ್ಮೆಯ ರತನ್ ಟಾಟಾ ಅವರೇ ಮಾದರಿ ಆಗಿದ್ದರು. ಇಂತಹ ವ್ಯಕ್ತಿಯನ್ನು ಕಳೆದುಕೊಂಡು ಈಗ ಭಾರತದ ಉದ್ಯಮ ವಲಯ ಮಾತ್ರವಲ್ಲ, ಇಡೀ ಜಗತ್ತಿನ ಉದ್ಯಮ ವಲಯವೇ ಅನಾಥವಾಗಿದೆ. ಈ ಸಮಯದಲ್ಲಿ, ರತನ್ ಟಾಟಾ ಬಳಿಕ 3,800 ಕೋಟಿ ರೂ. ಸಾಮ್ರಾಜ್ಯದ ಅಧಿಪತಿ ಯಾರು? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಬನ್ನಿ.

ರತನ್ ಟಾಟಾ ಅವರು ಕಟ್ಟಿ ಬೆಳೆಸಿದ್ದ ಉದ್ಯಮ ಸಾಮ್ರಾಜ್ಯ ಬಹುದೊಡ್ಡದು ಮಾತ್ರವಲ್ಲ, ರತನ್ ಟಾಟಾ ಬೆಳೆಸಿದ್ದ ಉದ್ಯಮವನ್ನೇ ಆಧರಿಸಿ ಕೋಟ್ಯಂತರ ಕುಟುಂಬಗಳು ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದಾರೆ. ಯಾಕಂದ್ರೆ ಒಂದು ಉದ್ಯಮವನ್ನು ಬೆಳೆಸುವುದು & ಉದ್ಯೋಗಿಗಳ ಬೆಂಬಲಕ್ಕೆ ನಿಲ್ಲುವುದು ಅಷ್ಟು ಸುಲಭದ ಮಾತು ಅಲ್ಲ, ಆದರೆ ರತನ್ ಟಾಟಾ ಅವರು ಕಟ್ಟಿ ಬೆಳೆಸಿದ್ದ ಉದ್ಯಮ ಅಂದ್ರೆ ಕಂಪನಿಗಳು ಈ ತತ್ವ ಪಾಲನೆ ಮಾಡಿಕೊಂಡು ಬಂದಿವೆ. ಹೀಗೆ ಇಡೀ ಜಗತ್ತಿಗೇ ಮಾದರಿ ಆಗಿದ್ದ ರತನ್ ಟಾಟಾ ಅವರು ಕಟ್ಟಿ ಬೆಳೆಸಿದ್ದ ಕಂಪನಿಗಳ ಕಥೆ ಏನು? ರತನ್ ಟಾಟಾ ಅವರ ಜಾಗಕ್ಕೆ ಬಂದು ಕೂರಲಿರುವ ವ್ಯಕ್ತಿ ಯಾರು? ಯಾರ ಯಾರ ಹೆಸರು ಈಗ ಮುಂಚೂಣಿಯಲ್ಲಿ ಇದೆ? ಮುಂದೆ ಓದಿ.
ರತನ್ ಟಾಟಾ ಉತ್ತರಾಧಿಕಾರಿ ಯಾರು?
ಲಕ್ಷ ಲಕ್ಷ ಕೋಟಿ ರೂಪಾಯಿ ಉದ್ಯಮ ಕಟ್ಟಿ ಬೆಳೆಸಿದ್ದ ರತನ್ ಟಾಟಾ ಅವರು, ಜಾಗತಿಕ ಮಟ್ಟದಲ್ಲಿ ಬಹುದೊಡ್ಡ ಗೌರವ ಹೊಂದಿದ್ದರು. ಇದೇ ಕಾರಣಕ್ಕೆ ರತನ್ ಟಾಟಾ ಜಾಗಕ್ಕೆ ಬರುವ ಉತ್ತರಾಧಿಕಾರಿ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಹೀಗಿರುವಾಗ ರತನ್ ಟಾಟಾ ಅವರ ಉತ್ತರಾಧಿಕಾರಿ ಸ್ಥಾನಕ್ಕೆ ನೋಯೆಲ್ ಟಾಟಾ ಪ್ರಬಲ ಸ್ಪರ್ಧಿಯಾಗಿ ಹೊರ ಹೊಮ್ಮುತ್ತಿದ್ದಾರೆ. ನೋಯೆಲ್ ಟಾಟಾ ಅವರು ರತನ್ ಟಾಟಾ ಅವರ ಸಂಬಂಧಿ ಕೂಡ ಹೌದು. ಹೀಗಾಗಿಯೇ ಟಾಟಾ ಕುಟುಂಬದ ಸದಸ್ಯರಿಗೆ ಈಗ ಬಹುದೊಡ್ಡ ಸ್ಥಾನ ಸಿಗುವುದು ಖಚಿತವಾಗುತ್ತಿದೆ.
ರತನ್ ಟಾಟಾ ಮೊಮ್ಮಕ್ಕಳಿಗೆ ಸ್ಥಾನ?
ನೋಯೆಲ್ ಟಾಟಾ ಅವರಿಗೆ ಮೂವರು ಮಕ್ಕಳಿದ್ದು, 34 ವರ್ಷದ ಮಾಯಾ ಟಾಟಾ ಅವರು ಕೂಡ ರತನ್ ಟಾಟಾ ಉತ್ತರಾಧಿಕಾರಿ ಸ್ಥಾನದ ಸ್ಪರ್ಧಿಯಾಗಿದ್ದಾರೆ. ಆದರೆ ಅವರ ತಂದೆಯೇ ಈ ಸ್ಥಾನಕ್ಕೆ ಕೂರುವುದು ಬಹುತೇಕ ಗ್ಯಾರಂಟಿ ಆಗುತ್ತಿದೆ. ಮತ್ತೊಂದು ಕಡೆ 32 ವರ್ಷದ ನೆವಿಲ್ಲೆ ಟಾಟಾ & 39 ವರ್ಷದ ಲೇಹ್ ಟಾಟಾ ಕೂಡ ಈ ರೇಸ್‌ನಲ್ಲಿ ಇದ್ದಾರೆ. ಈ ಮೂರು ಜನರು ಕೂಡ ನೋಯೆಲ್ ಟಾಟಾ ಅವರ ಮಕ್ಕಳು. ಹಾಗೇ ರತನ್ ಟಾಟಾ ಅವರಿಗೆ ಇವರು ಮೊಮ್ಮಕ್ಕಳ ಸ್ಥಾನ ತುಂಬುತ್ತಾರೆ. ಹೀಗಾಗಿ ಟಾಟಾ ಕುಟುಂಬದ ಕೈಯಲ್ಲೇ ಇದೀಗ ದೇಶದ ದೊಡ್ಡ ಉದ್ಯಮ ಸಾಮ್ರಾಜ್ಯವು ಇದ್ದು, ಮುಂದಿನ ದಿನಗಳಲ್ಲಿ ಉತ್ತಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ.












Click it and Unblock the Notifications