ಸೋನಿ ಇಂಡಿಯಾ ತೆಕ್ಕೆಗೆ ಬಿದ್ದ ZEE ಎಂಟರ್‌ಟೇನ್‌ಮೆಂಟ್
ಮುಂಬೈ, ಸೆಪ್ಟೆಂಬರ್ 22: ಭಾರತದ ಅತಿದೊಡ್ಡ ಮನರಂಜನಾ ಜಾಲ ಹೊಂದಿರುವ ಟಿವಿ ಮಾಧ್ಯಮ ಝೀ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮೆಟೆಡ್ ಸಂಸ್ಥೆಯನ್ನು ಸೋನಿ ಇಂಡಿಯಾ ಕಾರ್ಪ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಝೀ ಸಂಸ್ಥೆಯಲ್ಲಿ ಉಂಟಾದ ಆಂತರಿಕ ತಿಕ್ಕಾಟದಿಂದ ಹಲವು ಉನ್ನತ ಅಧಿಕಾರಿಗಳನ್ನು ವಜಾಗೊಳಿಸಲು ಷೇರುದಾರರು ಮುಂದಾಗಿದ್ದರು. ಇದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಹೊಸ ಒಪ್ಪಂದದಂತೆ ಸೋನಿ ಇಂಡಿಯಾ ಶೇ 53ರಷ್ಟು ಪಾಲು ಹೊಂದಲಿದ್ದು, ಮಿಕ್ಕಿದ್ದು ಝೀ ಪಾಲಾಗಲಿದೆ ಎಂದು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಜೊತೆಗೆ ಝೀ ಸಂಸ್ಥೆಯಲ್ಲಿ ಸೋನಿ ಇಂಡಿಯಾ ಸರಿ ಸುಮಾರು 1.58 ಬಿಲಿಯನ್ ಡಾಲರ್ ಮೊತ್ತ ಹೂಡಿಕೆ ಮಾಡಲಿದೆ. ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳನ್ನು ಸೋನಿ ಇಂಡಿಯಾದಿಂದಲೇ ನೇಮಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ವಿಲೀನ ಪ್ರಕ್ರಿಯೆ ಸುಮಾರು 90 ದಿನಗಳ ಮಟ್ಟಿಗೆ ನಡೆಯಲಿದ್ದು, ಈ ಅವಧಿಯಲ್ಲಿ ಉಭಯ ಸಂಸ್ಥೆಗಳ ಪ್ರತಿನಿಧಿಗಳು ಹಲವು ಒಪ್ಪಂದ, ನಿಯಮಾವಳಿಗಳಿಗೆ ಸಹಿ ಹಾಕಲಿದ್ದಾರೆ. ಝೀ ಕಾರ್ಯಕಾರಿ ಅಧಿಕಾರಿ ಪುನೀತ್ ಗೊಯೆಂಕಾ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಯತ್ನಿಸಲಾಗಿತ್ತು. ಆದರೆ, ಸದ್ಯಕ್ಕೆ ಸಂಸ್ಥೆ ಮುನ್ನಡೆಸುವ ಹೊಣೆ ಅವರ ಹೆಗಲಿಗೆ ಹಾಕಲಾಗಿರುವುದು ವಿಶೇಷ.

ಸೋನಿ ಇಂಡಿಯಾಕ್ಕೂ ಮೊದಲು ಝೀ ಸಂಸ್ಥೆಯಲ್ಲಿ ಇತರೆ ಸಂಸ್ಥೆಗಳು ಕೂಡಾ ಹೂಡಿಕೆ ಮಾಡಿವೆ. ಇವೆಸ್ಕೋ ಡೆವಲಪ್ಮೆಂಟ್ ಮಾರ್ಕೆಟ್ಸ್ ಫಂಡ್ ಹಾಗೂ ಒಎಫ್ಐ ಗ್ಲೋಬಲ್ ಚೀನಾ ಫಂಡ್ ಎಲ್ಎಲ್ಸಿ ಹೂಡಿಕೆ ಮಾಡಿದ್ದು, ಶೇ 17.9ರಷ್ಟು ಪಾಲು ಹೊಂದಿವೆ. ಈ ಎರಡು ಸಂಸ್ಥೆಗಳ ಪ್ರತಿನಿಧಿಗಳೇ ಕಳೆದ ವಾರ ನಡೆದ ಬೋರ್ಡ್ ಸಭೆಯಲ್ಲಿ ಗೊಯೆಂಕಾರನ್ನು ಕೆಳಗಿಳಿಸಲು ಪ್ರಸ್ತಾವನೆ ಮುಂದಿಟ್ಟಿದ್ದರು. 1992ರಲ್ಲಿ ಸಂಸ್ಥೆ ಹುಟ್ಟು ಹಾಕಿದ ಸುಭಾಷ್ ಚಂದ್ರ ಅವರ ಕುಟುಂಬಸ್ಥರು ಸಂಸ್ಥೆ ಮೇಲೆ ನಿಧಾನವಾಗಿ ಹಿಡಿತ ಕಳೆದುಕೊಳ್ಳುತ್ತಿದ್ದು, ಪುನೀತ್ ನಿರ್ಗಮನದಿಂದ ಇನ್ನಷ್ಟು ಅಂತರ ಉಂಟಾಗುತ್ತಿತ್ತು. ಸದ್ಯಕ್ಕೆ ಇಬ್ಬರು ಬೋರ್ಡ್ ಸದಸ್ಯರು ಸಂಸ್ಥೆ ತೊರೆದಿದ್ದಾರೆ.
ಷೇರುಪೇಟೆಯಲ್ಲಿ ಸಂತಸ: ಕಳೆದ ಒಂದು ತಿಂಗಳಲ್ಲಿ ಶೇ 62ರಷ್ಟು ಏರಿಕೆ ಕಂಡಿದ್ದ ಝೀ ಎಂಟರ್‌ಟೇನ್‌ಮೆಂಟ್ ಸದ್ಯ ಶೇ 9.99ರಷ್ಟು ಏರಿಕೆ (25.55 ರು) ಕಂಡು 281.25 ರು ನಂತೆ ಏರಿಕೆ ಕಂಡಿದೆ. ಸೋನಿ ಸಮೂಹ ಸಂಸ್ಥೆ ಜಾಗತಿಕವಾಗಿ ಶೇ 0.85ರಷ್ಟು ಏರಿಕೆಯಾಗಿದ್ದು, 12,445 ಜಪಾನ್ ಯೆನ್ ಮೌಲ್ಯ ಹೊಂದಿದೆ. ಈ ವೇಳೆ ಇನ್ ವೆಸ್ಕೋ ಸಂಸ್ಥೆ ಶೇ 1.04ರಷ್ಟು ಕುಸಿತ ಕಂಡು 23.72 ಯುಎಸ್ ಡಾಲರ್ ಆಗಿದೆ. ಒಟ್ಟಾರೆ, ಸೋನಿ-ಝೀ ಎಂಟರ್‌ಟೇನ್‌ಮೆಂಟ್ ವಿಲೀನದ ಸ್ವರೂಪ ಇನ್ನು ಮೂರು ತಿಂಗಳಲ್ಲಿ ಸಂಪೂರ್ಣವಾಗಿ ತಿಳಿಯಲಿದೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications