Get Updates
Get notified of breaking news, exclusive insights, and must-see stories!

Union Budget 2025: ಸಣ್ಣ ಉಳಿತಾಯ ಯೋಜನೆಯ ಹೂಡಿಕೆದಾರರಿಗೆ ಭರ್ಜರಿ ಗಿಫ್ಟ್‌ ಸಿಗುವ ಸಾಧ್ಯತೆ: ತಜ್ಞರು ಹೇಳೋದೇನು?

Union Budget 2025: ಕೇಂದ್ರ ಬಜೆಟ್‌ ಮಂಡನೆಗೆ ಇನ್ನೂ ಕೆಲವೇ ದಿನಗಳು ಮಾತ್ರ ಬಾಕಿಯಿವೆ. ಈ ಹಿನ್ನೆಲೆ ಬುತೇಕ ಮಂದಿ ಅದರಲ್ಲೂ ಮಧ್ಯಮ ವರ್ಗದವರು ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಹಲವರು ತಮ್ಮ ಅಭಿಪ್ರಾಯ ಹಾಗೂ ಬಯಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಸಣ್ಣ ಉಳಿತಾಯ ಯೋಜನೆಯಗಳ ಮೇಲೆ ಯಾವ ರೀತಿಯಾಗಿ ಈ ಬಜೆಟ್‌ ಪರಿಣಾಮ ಬೀರಬಹದು ಎಂಬ ಚರ್ಚೆಗಳು ಕೂಡ ಕೇಳಿಬರುತ್ತಿವೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 01 ರಂದು 2025-2026ನೇ ಸಾಲಿನ ಕೇಂದ್ರ ಬಜೆಟ್‌ ಮಂಡನೆ ಮಾಡಲಿದ್ದಾರೆ. ಇದು ಅವರು ಮಂಡನೆ ಮಾಡುತ್ತಿರುವ 8ನೇ ಬಜೆಟ್‌ ಆಗಲಿದೆ. ಈ ಮೂಲಕ ದಾಖಲೆ ಬರೆಯಲು ನಿರ್ಮಲಾ ಸೀತಾರಾಮನ್‌ ಸಜ್ಜಾಗಿದ್ದಾರೆ. ಈ ಬಜೆಟ್‌ ಮೇಲೆ ಬಹುತೇಕ ಮಂದಿ ಹಲವು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಅದರಲ್ಲೂ ಸಣ್ಣ ಉಳಿತಾಯ ಯೋಜನೆಯ ಹೂಡಿಕೆದಾರರು ದೊಡ್ಡ ಗಿಫ್ಟ್‌ ಸಿಗುವ ಭರವಸೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

Small Savings Scheme Investors Likely to Get Big Gift in Union Budget

2025-26ರ ಕೇಂದ್ರ ಬಜೆಟ್ ಪಿಪಿಎಫ್, ಎನ್‌ಎಸ್‌ಸಿ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆಯೊಂದು ಕೇಳಿಬರುತ್ತಿದೆ. ತೆರಿಗೆ ನೀತಿಗಳು ಮತ್ತು ಬಡ್ಡಿ ದರದಲ್ಲಿ ನಿರೀಕ್ಷಿತ ಬದಲಾವಣೆಗಳು ಆಗಬುದು ಎಂದು ತಜ್ಞರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

2024-25ರ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲದೇ ಸ್ಥಿರವಾಗಿದೆ. ಹೊಸ ಪಟ್ಟಿಯಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆಗಳು ಇಲ್ಲದೆ, ಪಿಪಿಎಫ್‌ ಶೇಕಡಾ 7.1, ಎನ್‌ಎಸ್‌ಸಿ ಶೇಕಡಾ 7.7 ಮತ್ತು ಎಸ್‌ಎಸ್‌ವೈ ಶೇಕಡಾ 8.2ರಷ್ಟು ಬಡ್ಡಿ ದರವನ್ನು ನೀಡುತ್ತಿವೆ.

ಇನ್ನು ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬದಲಾಗುತ್ತಿರುವ ಆರ್ಥಿಕ ಆದ್ಯತೆಗಳೊಂದಿಗೆ ಅನೇಕ ಹೂಡಿಕೆದಾರರು ಉಳಿತಾಯ ಯೋಜನೆಗಳಿಂದ ಉತ್ತಮ ಆದಾಯವನ್ನು ಭರವಸೆ ನೀಡುವ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸುತ್ತಿದ್ದಾರೆ. ಈ ಬಜೆಟ್‌ನಲ್ಲಿ ಈ ಕ್ರಮದ ಬಗ್ಗೆ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ ಎಂದು ಎಂದು ತಜ್ಞರು ಹೇಳುತ್ತಿದ್ದಾರೆ.

ಬಡ್ಡಿ ದರದಲ್ಲಿ ಹೆಚ್ಚಳದ ನಿರೀಕ್ಷೆ ತುಂಬಾ ಸಮಯದಿಂದ ಇತ್ತು. ಸಣ್ಣ ಉಳಿತಾಯ ಯೋಜನೆಗಳ ಕುರಿತು ಮಾತನಾಡುತ್ತಾ, ಸರ್ಕಾರವು 2020ರಲ್ಲಿ ಪಿಪಿಎಫ್‌ ಮೇಲಿನ ಬಡ್ಡಿ ದರವನ್ನು ಶೇಕಡಾ 7.9ರಿಂದ 7.1ಕ್ಕೆ ಇಳಿಕೆ ಮಾಡಿತ್ತು. 2022ರ ಅಂತ್ಯದೊಳಗೆ ಇತರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವು ಹೆಚ್ಚಳ ಕಂಡಿದ್ದು, ನಾವು ಪಿಪಿಎಫ್‌ ಯೋಜನೆಯಲ್ಲಿ ತಿದ್ದುಪಡಿಗಳನ್ನು ನಿರೀಕ್ಷಿಸುತ್ತಿದ್ದೇ ಎಂದು ಹೇಳುತ್ತಿದ್ದಾರೆ.

ಇತ್ತೀಷೆಗಷ್ಟೇ ಅಪ್ರಾಪ್ತ ವಯಸ್ಕರಿಗೆ ಬಡ್ಡಿ ದರಗಳನ್ನು ನಿರ್ಬಂಧಿಸಲಾಗಿದೆ ಮತ್ತು ನಿರ್ದಿಷ್ಟ ಅವಧಿಯ ನಂತರ ನವೀಕರಣಗಳನ್ನು ನಿರ್ಬಂಧಿಸಲಾಗಿದೆ. ಹೊಸ ತೆರಿಗೆ ಪದ್ಧತಿಯಿಂದಾಗಿ ಪಿಪಿಎಫ್, ಎನ್‌ಎಸ್‌ಸಿಯಲ್ಲಿನ ಹೂಡಿಕೆಗಳು ಮೊಟಕಾಗಿವೆ. ಪರಿಣಾಮ ಬಡ್ಡಿ ದರದ ಬದಲಾವಣೆಯ ಪರಿಣಾಮವನ್ನ ಕಡಿಮೆ ಮಾಡುತ್ತದೆ ಅಂತಾ ಸುದಿತ್ ಕೆ.ಪರೇಖ್ ಮತ್ತು ಕಂಪನಿಯ ಪಾಲುದಾರ ಅನಿತಾ ಬಸ್ರೂರ್ ಹೇಳಿದರು ಎಂದು ನ್ಯೂಸ್‌ 18 ಕನ್ನಡ ವರದಿ ಮಾಡಿದೆ.

ನಾವು ಪಿಪಿಎಫ್‌ ಮತ್ತು ಎನ್‌ಎಸ್‌ಸಿಯಂತಹ ಯೋಜನೆಗಳ ದರಗಳಲ್ಲಿ ಪರಿಷ್ಕರಣೆಯನ್ನು ನಿರೀಕ್ಷಿಸುತ್ತೇವೆ. ಅಲ್ಲದೆ, ತೆರಿಗೆ ಸ್ಲ್ಯಾಬ್‌ಗಳನ್ನು ಮಾರ್ಪಡಿಸುವ ಮೂಲಕ ಸರ್ಕಾರವು ಮಧ್ಯಮ ವರ್ಗದವರಿಗೆ ಪರಿಹಾರವನ್ನು ನೀಡುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ. ಇದರಿಂದ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಪರಿಣಾಮಕಾರಿ ತೆರಿಗೆ ದರವು ಕಡಿಮೆ ಆಗಿದೆ ಎಂದು ಪ್ರೈಮಸ್ ಪಾರ್ಟ್‌ನರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರವಣ್ ಶೆಟ್ಟಿ ಹೇಳಿದರು.

ನಾವು ಪಿಪಿಎಫ್‌, ಎನ್‌ಎಸ್‌ಸಿ, ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿದ್ದೇವೆ. ಇವುಗಳಿಗೆ ಬಡ್ಡಿದರಗಳನ್ನು ಉತ್ತಮ ಮತ್ತು ಸ್ಥಿರವಾಗಿರಿಸಬೇಕಿದೆ. ಇದರಿಂದ ಸಣ್ಣ ಲಾಭ ದೊರೆಯುತ್ತದೆ ಎಂದು ಬ್ರಾಂಡ್ ರೇಡಿಯೇಟರ್ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಹಿಮಾನಿ ಮಿಶ್ರಾ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+