Gold Silver Price: ಬೆಳ್ಳಿ ದರ ₹12,000 ರೂಪಾಯಿ ಹೆಚ್ಚಳ, ಹೊಸ ದಾಖಲೆ! ಚಿನ್ನದ ಬೆಲೆ ಮತ್ತೆ ಇಳಿಕೆ
ಬೆಂಗಳೂರು, ಡಿಸೆಂಬರ್ 11: ಚಿನ್ನ ಮತ್ತು ಬೆಳ್ಳಿ ಲೋಹಗಳ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ನಿರಂತರವಾಗಿ ಏರಿಕೆ ಆಗುತ್ತಲೇ ಬಂದಿದ್ದ ಚಿನ್ನದ ಬೆಲೆಯು ಇಂದು ಒಂದೇ ದಿನಕ್ಕೆ ಕೊಂಚ ಇಳಿಕೆ ಆಗಿದೆ. ಇಂದಿನ ಗ್ರಾಹಕರಿಗೆ ಕೊಂಚ ನೆಮ್ಮದಿ ತಂದಿದೆ. ಆದರೆ ಬಂಗಾರದ ದರ ಇಳಿಕೆಯು ಏರಿಕೆಗೆ ಹೋಲಿಸಿದರೆ ತೀರಾ ಕಡಿಮೆ. ಇತ್ತ ಬೆಳ್ಳಿ ಸಹ ತೀವ್ರ ಸ್ವರೂಪದಲ್ಲಿ ಬೆಲೆ ಹೆಚ್ಚಿಸಿಕೊಂಡಿದೆ. ₹12,000 ರೂಪಾಯಿ ಏರಿಕೆ ಆಗಿದ್ದು, ಹೊಸ ದಾಖಲೆ ಬರೆದಿದೆ.
ವಿದೇಶ ಸುಂಕ ನೀತಿಗಳು, ಚಿನ್ನ-ಬೆಳ್ಳಿ ಮೇಲಿನ ಆಮದು ಸುಂಕ, ಯುದ್ಧಗಳು, ವಿದೇಶಿ ಮಾರುಕಟ್ಟೆ, ಹೂಡಿಕೆಗಳ ದಿಢೀರ್ ಬೆಳವಣಿಗೆ ಹಾಗೂ ಇತರ ಕಾರಣಗಳಿಂದ ಚಿನ್ನ-ಬೆಳ್ಳಿ ದರದಲ್ಲಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ನಿರಂತರವಾಗಿ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು 22 ಕ್ಯಾರಟ್ 10 ಗ್ರಾಂ 100 ರೂಪಾಯಿ ಕುಸಿದಿದ್ದು, ದರ 1,19,350 ರೂಪಾಯಿಗೆ ಕುಸಿದಿದೆ. ಇದರೊಂದಿಗೆ 24 ಕ್ಯಾರಟ್ ಚಿನ್ನದ 10 ಗ್ರಾಂ ದರವು 110 ರೂ. ಇಳಿಕೆ ಆಗಿದೆ. ಇಂದು ದರ 1,30,200 ರೂಪಾಯಿಯಷ್ಟಿದೆ.

ಬೆಳ್ಳಿ ದರದಲ್ಲಿ ಭಾರೀ ಹೆಚ್ಚಳ, ದಾಖಲೆ..!
ಬೆಳ್ಳಿಯ ದರ ಇಂದು ಒಂದೇ ದಿನಕ್ಕೆ 100 ಗ್ರಾಂಗೆ 200 ರೂಪಾಯಿ ಮತ್ತು 01 ಕೆಜಿ ಬೆಳ್ಳಿಗೆ 2000 ರೂಪಾಯಿ ಏರಿಕೆ ಆಗಿದೆ. ದಿನದಿಂದ ದಿನಕ್ಕೆ ಬೆಳ್ಳಿಯು ದರ ಏರಿಕೆಯಲ್ಲಿ ಚಿನ್ನಕ್ಕೆ ಕೌಂಟರ್ ನೀಡುತ್ತಿದೆ. ಗ್ರಾಹಕರಿಗೆ ಶಾಕ್ ನೀಡುವಲ್ಲಿ ಪೈಪೋಟಿ ಒಡ್ಡುತ್ತಿದೆ. 100 ಗ್ರಾಂ ಬೆಳ್ಳಿ ದರ ಡಿಸೆಂಬರ್ 11ರಂದು ಬೆಂಗಳೂರಿನಲ್ಲಿ 20,100 ರೂಪಾಯಿ ಇದೆ. 01ಕೆಜಿಗೆ 2,01,000 ರೂಪಾಯಿ ಇದೆ.
ಬೆಳ್ಳಿ 12,000 ರೂ. ಏರಿಕೆ: ಗ್ರಾಹಕರಿಗೆ ಶಾಕ್
ಒಂದು ಕೆಜಿ ಬೆಳ್ಳಿ ದರವು ನೆನ್ನೆ ಡಿಸೆಂಬರ್ 10ರಂದು ಬುಧವಾರ ಬರೋಬ್ಬರಿ 9000 ರೂಪಾಯಿ ಹೆಚ್ಚಾಗಿತ್ತು. ಅದರ ಹಿಂದಿನ ದಿನ ಮಂಗಳವಾರ 1000 ರೂಪಾಯಿ ಹೆಚ್ಚಾಗಿತ್ತು. ಇಂದು ಮತ್ತೆ 2000 ರೂಪಾಯಿ ಏರಿಕೆ ಆಗಿದೆ. ಒಟ್ಟು ಕೇವಲ ಮೂರೇ ದಿನದಲ್ಲಿ ಬರೋಬ್ಬರಿ 12,000 ರೂಪಾಯಿ ಹೆಚ್ಚಾಗುತ್ತಿದೆ. ಈ ಹಿಂದೆ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆಗಿದ್ದರ ನಂತರ ಇತ್ತೀಚಿನ ದಿನಗಳಲ್ಲಿ ಹೆಚ್ಚಾದ ಗರಿಷ್ಠ ಏರಿಕೆ ಎನ್ನಬಹುದು. ಈವರೆಗೆ ಬಂಗಾರ ಮಾತ್ರವೇ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿತ್ತು. ಇದೀಗ ಬೆಳ್ಳಿಯ ದರ ನಿರಂತರವಾಗಿ ಹೆಚ್ಚಾಗುತ್ತಾ ಖರೀದಿದಾರರಿಗೆ ಶಾಕ್ ನೀಡುತ್ತಿದೆ. ನಗರವಾರು ಬೆಳ್ಳಿ ಮತ್ತು ಚಿನ್ನದ ಇಂದಿನ ದರಪಟ್ಟಿ ಇಲ್ಲಿದೆ.
ನಗರವಾರು ಇಂದಿನ ಬೆಳ್ಳಿ 01 ಗ್ರಾಂ ದರ ಪಟ್ಟಿ
ಬೆಂಗಳೂರು: 201 ರೂಪಾಯಿ
ದೆಹಲಿ: 201 ರೂಪಾಯಿ
ಮುಂಬೈ: 201 ರೂಪಾಯಿ
ಕೋಲ್ಕತಾ: 201 ರೂಪಾಯಿ
ಚೆನ್ನೈ: 209 ರೂಪಾಯಿ
ಲಕ್ನೋ: 201 ರೂಪಾಯಿ
ಭುವನೇಶ್ವರ್: 209ರೂಪಾಯಿ
ಪುಣೆ: 201 ರೂಪಾಯಿ
ಜೈಪುರ್: 201 ರೂಪಾಯಿ
ಕೇರಳ: 209 ರೂಪಾಯಿ
ಅಹ್ಮದಾಬಾದ್: 201 ರೂಪಾಯಿ
22k 10ಗ್ರಾಂ ಚಿನ್ನದ ದರ ವಿವರ
ಬೆಂಗಳೂರು: 11,935 ರೂಪಾಯಿ
ದೆಹಲಿ: 11,950 ರೂಪಾಯಿ
ಕೋಲ್ಕತಾ: 11,935 ರೂಪಾಯಿ
ಚೆನ್ನೈ: 12,050 ರೂಪಾಯಿ
ಮುಂಬೈ: 11,935 ರೂಪಾಯಿ
ಲಕ್ನೋ: 11,950 ರೂಪಾಯಿ
ಭುವನೇಶ್ವರ್: 11,935 ರೂಪಾಯಿ
ಕೇರಳ: 11,935 ರೂಪಾಯಿ
ಅಹ್ಮದಾಬಾದ್: 11,940 ರೂಪಾಯಿ
ಜೈಪುರ್: 11,950 ರೂಪಾಯಿ
-
ಇರಾನ್ನ ವಾಯುನೆಲೆ, ಶಸ್ತ್ರಾಸ್ತ್ರ ಡಿಪೋ ಮೇಲೆ ಯುಎಸ್ ಜಂಟಿ ದಾಳಿ, ರಷ್ಯಾ ಬೆಂಬಲ? ಇಲ್ಲಿವೆ ಪ್ರಮುಖಾಂಶಗಳು -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ











Click it and Unblock the Notifications