ಫೋನ್ ಪೇ & ಗೂಗಲ್ ಪೇ ಬಳಸುತ್ತಿರುವವರಿಗೆ ಶಾಕ್: ಇದಕ್ಕೂ ಕಟ್ಟಬೇಕು ಟ್ಯಾಕ್ಸ್ ?!
Google Pay and Phone Pay: ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗಿದೆ. ಟೀ - ಕಾಫಿಗೆ 10 ರೂಪಾಯಿ ಕೊಡುವುದರಿಂದ ದೊಡ್ಡ ದೊಡ್ಡ ಮೊತ್ತದ ಹಣ ಕಳುಹಿಸುವುದಕ್ಕೂ ಜನ ಗೂಗಲ್ ಪೇ ಹಾಗೂ ಫೋನ್ ಪೇ ಬಳಸುತ್ತಿದ್ದಾರೆ. ಆದರೆ, ಈ ರೀತಿ ಇರುವಾಗಲೇ ಕಮರ್ಷಿಯಲ್ ಟ್ಯಾಕ್ಸ್ ಆತಂಕ ಎದುರಾಗಿದೆ. ಹೌದು ದೇಶದಲ್ಲಿ ಎಲ್ಲರೂ ಫೋನ್ ಪೇ ಹಾಗೂ ಗೂಗಲ್ ಬಳಸುವುದಕ್ಕೆ ಶುರು ಮಾಡಿಕೊಂಡಿದ್ದು. ಹಣ ವಹಿವಾಟು ಕಡಿಮೆ ಮಾಡಿರುವ ಸಂದರ್ಭದಲ್ಲಿಯೇ ಸರ್ಕಾರ ಶಾಕ್ ನೀಡುವುದಕ್ಕೆ ಪ್ರಾರಂಭಿಸಿದೆ. ಇದರಿಂದ ಗೂಗಲ್ ಪೇ ಹಾಗೂ ಪೋನ್ ಪೇನಲ್ಲಿ ಹಣ ವಹಿವಾಟು ಮಾಡುತ್ತಿದ್ದವರು ಶಾಕ್‌ಗೆ ಒಳಗಾಗಿದ್ದಾರೆ. ಕೆಲವು ಸಣ್ಣಪುಟ್ಟ ಅಂಗಡಿಗಳಿಗೂ ಇದೀಗ ವಾಣಿಜ್ಯ ಇಲಾಖೆಯಿಂದ ಕಮರ್ಷಿಯಲ್ ಟ್ಯಾಕ್ಸ್ ಹೆಸರಿನಲ್ಲಿ ಶೋಕಾಸ್ ನೋಟಿಸ್ ಕೊಡುತ್ತಿರುವುದು ವರದಿಯಾಗಿದೆ.
ಗೂಗಲ್ ಪೇ ಹಾಗೂ ಫೋನ್ ಪೇ ಇದೀಗ ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಎಲ್ಲರೂ ದಿನದಲ್ಲಿ ಒಮ್ಮೆಯಾದರೂ ಫೋನ್ ಪೇ ಹಾಗೂ ಗೂಗಲ್ ಪೇ ಬಳಸುತ್ತಿದ್ದಾರೆ. ಈ ತಂತ್ರಜ್ಞಾನಕ್ಕೆ ಜನ ಅಷ್ಟೊಂದು ಅಡಿಕ್ಟ್ ಆಗಿರುವಂತೆ ಆಗಿದ್ದಾರೆ. ಜನ ಫೋನ್ ಪೇ ಹಾಗೂ ಗೂಗಲ್ ಪೇ ಬಳಕೆ ಮಾಡುವುದನ್ನು ಹೆಚ್ಚಿಸಿಕೊಂಡ ಬೆನ್ನಲ್ಲೇ ಸರ್ಕಾರ ಶಾಕ್ ಕೊಡುವುದಕ್ಕೆ ಮುಂದಾಗಿದೆ. ಇದರಿಂದ ಸಣ್ಣಪುಟ್ಟ ಅಂಗಡಿಗಳಲ್ಲಿ ಗೂಗಲ್ ಪೇ ಹಾಗೂ ಫೋನ್ ಪೇ ಸೇರಿದಂತೆ ಆನ್‌ಲೈನ್ ಪೇಮೆಂಟ್ ಬಳಸುತ್ತಿರುವವರಿಗೆ ಭಯ ಶುರುವಾಗಿದೆ. ಎಲ್ಲಿ ನಾವೂ ಕೂಡ ಟ್ಯಾಕ್ಸ್ ಕಟ್ಟಬೇಕೋ ಎನ್ನುವ ಭಯದಲ್ಲಿ ಹಲವರು ಗೂಗಲ್ ಪೇ ಹಾಗೂ ಫೋನ್ ಪೇಗೆ ಗುಡ್ ಬಾಯ್ ಹೇಳುತ್ತಿದ್ದಾರೆ.

ಜನ ಈಗ ಎಲ್ಲದಕ್ಕೂ ಆನ್‌ಲೈನ್ ಪೇಮೆಂಟ್ ಮಾಡುತ್ತಿದ್ದಾರೆ. ಆನ್‌ಲೈನ್ ಪೇಮೆಂಟ್ ಬಿಟ್ಟು ಹಣ ಕೊಟ್ಟು ವ್ಯವಹಾರ ಮಾಡುವುದು ಈಗ ತುಂಬಾನೇ ಕಡಿಮೆ ಆಗಿದೆ. ಆದರೆ, ಇದೀಗ ವಾಣಿಜ್ಯ ಇಲಾಖೆ ಕೊಟ್ಟಿರುವ ಶಾಕ್‌ನಿಂದ ಎಲ್ಲರೂ ಮತ್ತೆ ಹಣ ಕೊಟ್ಟು ವ್ಯಾಪಾರ ಹಾಗೂ ವ್ಯವಹಾರ ಮಾಡುವ ಪರಿಸ್ಥಿತಿ ಶುರುವಾಗುತ್ತಿದೆ.
ದೇಶದಾದ್ಯಂತ ಈಗ ಎಲ್ಲರೂ ಕ್ಯೂಆರ್ ಕೋಡ್‌ನ ಮೂಲಕ (ಆನ್‌ಲೈನ್) ಪೇಮೆಂಟ್ ಸ್ಕ್ಯಾನ್ ಮಾಡಿ ಆನ್‌ಲೈನ್ ಪೇಮೆಂಟ್ ಮಾಡುತ್ತಿದ್ದಾರೆ. ಆದರೆ, ಕಳೆದ ಒಂದು ವಾರದಿಂದಲೂ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ.
ವಾಣಿಜ್ಯ ಇಲಾಖೆಯ ಅಧಿಕಾರಿಗಳು ಹೆಚ್ಚು ವಹಿವಾಟು ಮಾಡಿರುವ ಸಣ್ಣ ಸಣ್ಣ ಅಂಗಡಿಗಳಿಗೆ ಲಕ್ಷ ಲಕ್ಷ ರೂಪಾಯಿ ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕು ಎಂದು ಶೋಕಸ್ ನೋಟಿಸ್ ಕೊಡುತ್ತಿದ್ದಾರೆ ಎಂದು ಹೇಳಲಾಗಿದ್ದು. ಈ ರೀತಿ ನೋಟಿಸ್ ಬರುತ್ತಿರುವುದನ್ನು ನೋಡಿ ಅಂಗಡಿ ಮಾಲೀಕರು ಶಾಕ್‌ಗೆ ಒಳಗಾಗಿದ್ದಾರೆ.
ಲಕ್ಷ ಲಕ್ಷ ರೂಪಾಯಿ ಎಲ್ಲಿಂದ ತರೋದು: ಇನ್ನು ಗೂಗಲ್ ಪೇ ಹಾಗೂ ಫೋನ್ ಪೇ ಬಳಕೆ ಮಾಡುತ್ತಿದ್ದ ಅಂಗಡಿಗಳ ವ್ಯಾಪಾರಿಗಳು ವಾಣಿಜ್ಯ ಇಲಾಖೆಯ ಶೋಕಸ್ ನೋಟಿಸ್‌ಗೆ ಆಕ್ರೋಶ ಹೊರ ಹಾಕಿದ್ದಾರೆ. ಲಕ್ಷ ಲಕ್ಷ ರೂಪಾಯಿ ತೆರಿಗೆಯನ್ನು ಎಲ್ಲಿಂದ ಪಾವತಿ ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಗೂಗಲ್ ಪೇ ಹಾಗೂ ಫೋನ್ ಪೇ ಬಳಸುವುದಕ್ಕೆ ಜನ ಸಾಮಾನ್ಯರೂ ಸಹ ಹಿಂದೇಟು ಹಾಕುವಂತೆ ಆಗಿದೆ.












Click it and Unblock the Notifications