ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರು ಮಾರುಕಟ್ಟೆ 777 ಅಂಕ ಏರಿಕೆಗೆ ಕಾರಣವೇನು?

|
Google Oneindia Kannada News

ಮುಂಬೈ, ಮಾರ್ಚ್, 01: ಬಜೆಟ್ ದಿನವೂ ಇಳಿಕೆ ಹಾದಿ ಹಿಡಿದಿದ್ದ ಭಾರತದ ಷೇರು ಮಾರುಕಟ್ಟೆ ಮರುದಿನ ಏಕಾಏಕಿ ಏರಿಕೆ ಸಾಧಿಸಿದೆ, ಸೆನ್ಸೆಕ್ಸ್ ಬರೋಬ್ಬರಿ 777 ಅಂಕ ಏರಿಕೆ ದಾಖಲಿಸಿ ಹಿಂದಿನ ಹಾದಿಗೆ ಮರಳುವ ಸೂಚನೆ ನೀಡಿದೆ. ನಿಫ್ಟಿ 235 ಅಂಕಗಳ ಏರಿಕೆ ಕಂಡಿದ

ಆರ್ ಬಿಐ ದರ ಕಡಿತ ನಿರೀಕ್ಷೆ ಮತ್ತು ಏಷ್ಯನ್ ಮಾರುಕಟ್ಟೆಯ ಸಕಾರಾತ್ಮಕ ವಹಿವಾಟು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಬಜೆಟ್ ಮೇಲೆ ಇಟ್ಟುಕೊಂಡಿದ್ದಂತ ನಿರೀಕ್ಷೆಯನ್ನೇ ಹೂಡಿಕೆದಾರರು ಇದೀಗ ಅದೇ ನಿರೀಕ್ಷೆಯನ್ನು ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಮೇಲೆ ಇಟ್ಟಿದ್ದು, ಆರ್ ಬಿಐ ಹಣಕಾಸು ನೀತಿ ಮೇಲೆ ಗಮನ ಕೇಂದ್ರಿಕರಿಸಿದ್ದಾರೆ.[ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]

ಪ್ರಮುಖವಾಗಿ ಬ್ಯಾಂಕಿಂಗ್ ವಲಯ, ಐಟಿ, ರಿಯಾಲಿಟಿ ವಲಯ, ತಂತ್ರಜ್ಞಾನ ಮತ್ತು ಬಂಡವಾಳ ಸರಕುಗಳ ವಲಯದ ಷೇರುಗಳ ಮೌಲ್ಯದಲ್ಲಿ ಶೇ.4.87ರಷ್ಟು ಏರಿಕೆ ಕಂಡುಬಂದಿದ್ದು ಹೂಡಿಕೆದಾರರು ನಿಟ್ಟುಸಿರು ಬಿಡಿವಂತೆ ಮಾಡಿದೆ.

ಬಜೆಟ್ ಮರುದಿನ

ಬಜೆಟ್ ಮರುದಿನ

ಮೂಲ ಸೌಕರ್ಯ ನೀಡಿಕೆಗೆ ಕೇಂದ್ರ ಬಜೆಟ್ ನಲ್ಲಿ ಅರುಣ್ ಜೇಟ್ಲಿ ಒತ್ತು ನೀಡಿದ್ದು ನೇರವಾಗಿ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ.

ಆರ್ ಬಿಐ ದರ ಕಡಿತ ನಿರೀಕ್ಷೆ

ಆರ್ ಬಿಐ ದರ ಕಡಿತ ನಿರೀಕ್ಷೆ

ಆರ್‌ಬಿಐ ಬಡ್ಡಿ ದರ ಕಡಿತ ಮಾಡುವುದು ನಿಶ್ಚಿತವೆಂಬ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಮಂಗಳವಾರ 777 ಅಂಕಗಳ ಅಭೂತಪೂರ್ವ ಜಿಗಿತವನ್ನು ದಾಖಲಿಸಿ 23,779.35 ಅಂಕಗಳ ಮಟ್ಟಕ್ಕೇರುವ ಮೂಲಕ ದಿನದ ವಹಿವಾಟನ್ನು ಕೊನೆಗೊಳಿಸಿತು. ನಿಫ್ಟಿ ಸೂಚ್ಯಂಕ ಕೂಡ 235.25 ಅಂಕಗಳ ಏರಿಕೆಯನ್ನು ದಾಖಲಿಸಿ 7,222 ರಲ್ಲಿ ಕೊನೆಯಾಯಿತು.

ಬೆಳಗ್ಗೆಯಿಂದಲೇ ಏರಿಕೆ

ಬೆಳಗ್ಗೆಯಿಂದಲೇ ಏರಿಕೆ

ಮುಂಬಯಿ ಪೇಟೆಯಲ್ಲಿ ಶುಭ ಮಂಗಳವಾರ. ಬೆಳಗ್ಗೆಯಿಂದಲೇ ವಹಿವಾಟು ಜೋರಾಗಿತ್ತು. ಏರಿಕೆ ದಾಖಲಿಸುತ್ತಲೇ ಸಾಗಿದ ಮಾರುಕಟ್ಟೆ ದಿನದ ಅಂತ್ಯಕ್ಕೆ ಭರ್ಜರಿ ಏರಿಕೆ ದಾಖಲಿಸಿತು.

 ಮೊಟಾರ್ಸ್ ಏರಿಕೆ

ಮೊಟಾರ್ಸ್ ಏರಿಕೆ

ಬ್ಯಾಂಕಿಂಗ್ ಮತ್ತು ಮೋಟಾರ್ಸ್ ಷೇರುಗಳು ಹೆಚ್ಚಿನ ಏರಿಕೆ ದಾಖಲಿಸಿದ್ದು ವಿಶೇಷ. ಟಾಟಾ ಮೋಟಾರ್ಸ್, ಹೀರೋ ಮೋಟಾರ್ ಕಾಪ್, ಅದಾನಿ ಪವರ್, ಸನ್ ಟಿವಿ ಏರಿಕೆ ಹಾದಿಯಲ್ಲಿ ಸಾಗಿದರೆ ಪೆಟ್ರೊಲಿಯಂ ಷೇರುಗಳು ಕುಸಿತ ಕಂಡವು.

English summary
Benchmark indices surged in trade following a set of solid global cues and on expectations of an interest rate cut. Hopes that adhering to the fiscal deficit would lead to an interest rate cut, saw heavy buying in banking stocks. The Sensex ended the day higher by a huge 777 points, led by buying in heavyweight ITC, which surged 9 per cent, on hectic short covering.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X