ಸೆನ್ಸೆಕ್ಸ್ 1050 ಅಂಕ ಕುಸಿತ, ಹೂಡಿಕೆದಾರರು ಕಂಗಾಲು

ಮುಂಬೈ, ಆಗಸ್ಟ್.24: ಸೋಮವಾರ ಮುಂಬೈ ಷೇರು ಪೇಟೆ ದಿಢೀರ್ ಕುಸಿತ ಕಂಡಿದೆ. ಮುಂಬೈ ಮಾರುಕಟ್ಟೆ 1050 ಅಂಕಗಳ ಪತನ ಕಂಡಿದೆ. ಆದರೆ ಇದು ಆರ್ಥಿಕ ವ್ಯವಸ್ಥೆ ಮೇಲೆ ಯಾವ ಪರಿಣಾಮ ಬೀರುವುದಿಲ್ಲ. ಭಾರತ ಸುಭದ್ರವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಹೇಳಿದ್ದಾರೆ.

ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 318.05 ಅಂಕಗಳ ಕುಸಿತಕ್ಕೆ ಗುರಿಯಾಗಿ 7981 ಕ್ಕೆ ಇಳಿದಿದೆ. ಶುಕ್ರವಾರದಿಂದ ಮಾರುಕಟ್ಟೆ ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದು ಬಂಡವಾಳ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.[ರುಪಾಯಿ ಇಳಿಕೆ ಹಾದಿ ಹಿಡಿದಿದ್ದೇಕೆ]

ಯಾವುದು ಇಳಿಕೆ, ಯಾವುದು ಏರಿಕೆ

Sensex Sinks 1050 Points On Global Market Meltdown

ಇತ್ತ ರುಪಾಯಿ ಮೌಲ್ಯ ಕೂಡಾ ಇಳಿಕೆಯಾಗಿದ್ದು ಡಾಲರ್ ಎದುರು 66 ರು. ಗೆ ಬಂದುನಿಂತಿದೆ. ಚೀನಾ ಆರ್ಥಿಕತೆಯಲ್ಲಿನ ಬದಲಾವಣೆ, ಏಷ್ಯಾ ಮಾರುಕಟ್ಟೆ ಕುಸಿತ, ರುಪಾಯಿ ಅಪಮೌಲ್ಯ ಎಲ್ಲವೂ ಷೇರು ಮಾರುಕಟ್ಟೆಯ ಮೇಲೆ ನೇರ ಪರಿಣಾಮ ಉಂಟುಮಾಡಿವೆ. ಕುಸಿತದಿಂದ ಕಂಗಾಲಾಗಿರುವ ಭಾರತೀಯ ಸಾಂಸ್ಥಿಕ ಹೂಡಿಕೆದಾರರು ತಮ್ಮ ಷೇರುಗಳನ್ನು ಅತಿಯಾಗಿ ಮಾರುತ್ತಿದ್ದಾರೆ.

ಚೀನಾ ತನ್ನ ಕರೆನ್ಸಿಯಲ್ಲಿ ಮಾಡಿದ ಬದಲಾವಣೆಗಳು, ಅಮೆರಿಕದ ಫೆಡರಲ್ ಬ್ಯಾಂಕ್ ನೀತಿ, ಪೆಟ್ರೋಲಿಯಂ ದರ ಇಳಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+