ಸೆನ್ಸೆಕ್ಸ್ 1200 ಪಾಯಿಂಟ್ಸ್ ಜಿಗಿತ: ಟಾಟಾ ಮೋಟಾರ್ಸ್ 14% ಏರಿಕೆ

ನವದೆಹಲಿ, ಫೆಬ್ರವರಿ 02: ಕೇಂದ್ರ ಬಜೆಟ್ ಬಳಿಕ ಭಾರತೀಯ ಷೇರು ಮಾರುಟ್ಟೆಯಲ್ಲಿ ಗೂಳಿ ಓಟ ಜೋರಾಗಿದ್ದು, ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 1200 ಪಾಯಿಂಟ್ಸ್ ಹೆಚ್ಚಳಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 366 ಪಾಯಿಂಟ್ಸ್ ಏರಿಕೆಗೊಂಡಿದೆ.

ಮಂಗಳವಾರ ವಹಿವಾಟು ಮುಕ್ತಾಯಕ್ಕೆ ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 2.46ರಷ್ಟು ಅಥವಾ 1197.11 ಪಾಯಿಂಟ್ಸ್‌ ಹೆಚ್ಚಳಗೊಂಡು 49,797.72 ಪಾಯಿಂಟ್ಸ್ ತಲುಪಿದೆ. ಎನ್‌ಎಸ್ಇ ಸೂಚ್ಯಂಕ ನಿಫ್ಟಿ ಶೇಕಡಾ 2.57ರಷ್ಟು ಅಥವಾ 366.70 ಪಾಯಿಂಟ್ಸ್ ಏರಿಕೆಗೊಂಡು 14,647 ಪಾಯಿಂಟ್ಸ್‌ ಮುಟ್ಟಿದೆ.

ಇಂದು 1727 ಷೇರುಗಳು ಏರಿಕೆಗೊಂಡಿದ್ದು, 1165 ಷೇರುಗಳು ಕುಸಿತಗೊಂಡಿವೆ ಮತ್ತು 170 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Sensex Gains 1200 Points: Nifty Up 3 Percent A Day After Budget

ಟಾಟಾ ಮೋಟಾರ್ಸ್, ಶ್ರೀ ಸಿಮೆಂಟ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಸ್‌ಬಿಐ ಮತ್ತು ಹಿಂಡಾಲ್ಕೊ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಎಚ್‌ಡಿಎಫ್‌ಸಿ ಲೈಫ್, ಬಜಾಜ್ ಫಿನ್‌ಸರ್ವ್, ಹೀರೋ ಮೊಟೊಕಾರ್ಪ್, ಟೈಟಾನ್ ಕಂಪನಿ ಮತ್ತು ಎಚ್‌ಯುಎಲ್ ನಷ್ಟ ಅನುಭವಿಸಿದ ಷೇರುಗಳಾಗಿವೆ.

ಬ್ಯಾಂಕಿಂಗ್, ಆಟೋ ಮತ್ತು ಇನ್ಫ್ರಾ ಸಂಬಂಧಿದ ಷೇರುಗಳು ಶೇಕಡಾ 3 ರಿಂದ 4ರಷ್ಟು ಲಾಭದೊಂದಿಗೆ ಕೊನೆಗೊಂಡಿತು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 1ರಿಂದ 2 ರಷ್ಟು ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+