ಸಾಲ ಮರುಪಾವತಿ ಮಾಡದೆ ತಲೆಮರೆಸಿಕೊಂಡಿರುವ 25 ಮಂದಿಯ ಪಟ್ಟಿ ಬಿಡುಗಡೆ ಮಾಡಿದ ಸೆಬಿ
ನವದೆಹಲಿ, ಮಾರ್ಚ್ 13: ಕ್ಯಾಪಿಟಲ್ ಮಾರ್ಕೆಟ್ಸ್ ರೆಗ್ಯುಲೇಟರ್ ಸೆಬಿಯು ಸಾಲ ಪಡೆದು ಮರುಪಾವತಿ ಮಾಡದ 25 ಮಂದಿಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅವರು ಇನ್ನೂ ಪತ್ತೆಯಾಗಿಲ್ಲ ಎಂದು ಕಂಡುಬಂದಿದೆ. ಈ 25 ಮಂದಿಯು ಹೂಡಿಕೆದಾರರ ಹಣವನ್ನು ಹಿಂದಿರುಗಿಸಲು ವಿಫಲರಾಗಿದ್ದಾರೆ ಅಥವಾ ಸೆಕ್ಯುರಿಟೀಸ್ ಮಾರುಕಟ್ಟೆಗೆ ಸಂಬಂಧಿಸಿದ ವಿವಿಧ ಅಪರಾಧಗಳಿಗಾಗಿ ನಿಯಂತ್ರಕರು ವಿಧಿಸಿದ ದಂಡವನ್ನು ಪಾವತಿಸಲು ವಿಫಲರಾಗಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.
ಪತ್ತೆಹಚ್ಚಲಾಗದ ಸುಸ್ತಿದಾರರ ವಿವರಗಳನ್ನು ಬುಧವಾರ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಸೆಬಿ, ಈ ವ್ಯಕ್ತಿಗಳ ವಿರುದ್ಧ ನಿಯಂತ್ರಕ ವಸೂಲಾತಿ ಅಧಿಕಾರಿಯಿಂದ ವಸೂಲಾತಿ ಪ್ರಮಾಣಪತ್ರಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಆದಾಗ್ಯೂ, ಈ ಸೂಚನೆಗಳನ್ನು ಸಾಲ ಮರುಪಾವತಿ ಮಾಡದವರ ವಿಳಾಸಕ್ಕೆ ನೀಡಲು ಸಾಧ್ಯವಾಗಿಲ್ಲ ಎಂಬುವುದನ್ನು ಈ ಪಟ್ಟಿಯಲ್ಲಿ ವಿವರಣೆ ಮಾಡಲಾಗಿದೆ.
ಈ ಸೂಚನೆಗಳನ್ನು ಜುಲೈ 2014 ರಿಂದ ಜನವರಿ 2022 ರವರೆಗೆ ನೀಡಲಾಗಿದೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ತಿಳಿಸಿದೆ. ಮಾರ್ಚ್ 24, 2022 ರೊಳಗೆ ಪತ್ರ ಅಥವಾ ಇ-ಮೇಲ್ ಕಳುಹಿಸುವ ಮೂಲಕ ಸೆಬಿಯ ವಸೂಲಾತಿ ಅಧಿಕಾರಿಯನ್ನು ಸಂಪರ್ಕಿಸಲು ನಿಯಂತ್ರಕರು ಈ ಸಾಲ ಪಾವತಿ ಮಾಡದವರಿಗೆ ವಿನಂತಿ ಮಾಡಿದೆ.

ಇದಲ್ಲದೆ, ಯಾವುದೇ ವ್ಯಕ್ತಿಗೆ ಈ ಸಾಲ ಮರುಪಾವತಿ ಮಾಡದ ವ್ಯಕ್ತಿಗಳ ಬಗ್ಗೆ ತಿಳಿದಿದ್ದರೆ, ಅವರ ವಿವರವನ್ನು ಸಾಲ ವಸೂಲಾತಿ ಅಧಿಕಾರಿಗೆ ಪತ್ರವನ್ನು ಕಳುಹಿಸುವ ಮೂಲಕ ಒದಗಿಸಬಹುದು. ಅಥವಾ ಇ-ಮೇಲ್ ಮಾಡಬಹುದು. 2022ರ ಮಾರ್ಚ್ 24 ರೊಳಗೆ ಈ ಪತ್ರವನ್ನು ಕಳುಹಿಸುವಂತೆ ಸೂಚನೆಯನ್ನು ಉಲ್ಲೇಖ ಮಾಡಲಾಗಿದೆ.
ಸಾಲ ಮರುಪಾವತಿ ಮಾಡದವರು ಯಾರ್‍ಯಾರು?
ಕನೈಯಾಲಾಲ್ ಜೋಶಿ, ಸಂತೋಷ್ ಕೃಷ್ಣ ಪವಾರ್, ಚೇತನ್ ಮೆಹ್ತಾ, ಮುಕುಂದ್ ಯದು ಜಂಭಾಲೆ, ಅಂಕಿತ್ ಕೆ ಅಗರ್ವಾಲ್, ಜಯೇಶ್ ಶಾ, ಸುರೇಶಕುಮಾರ್ ಪಿ ಜೈನ್, ಪ್ರವೀಣ್ ವಸಿಸ್ಠ, ರಾಜೇಶ್ ತುಕಾರಾಂ ದಾಂಬ್ರೆ, ಜಯೇಶ್ ಕುಮಾರ್ ಶಾ, ದಹ್ಯಾಭಾಯಿ ಜಿ ಪಟೇಲ್, ದಲ್ಸುಖಭಾಯ್ ಡಿ ಪಟೇಲ್, ವಿಠಲಭಾಯ್ ವಿ. ಸುಸ್ತಿದಾರರು ಆಗಿದ್ದಾರೆ.
ಅಲ್ಲದೆ ವಿನೋದ್ ಡಿ ಪಟೇಲ್, ಪ್ರವೀಣ್ ಪಿ ಪಟೇಲ್, ನವೀನ್‌ಕುಮಾರ್ ಪಟೇಲ್, ಸುನೀಲ್ ಕುರಿಲ್, ದಿಲೀಪ್ ಹೇಮಂತ್ ಜಂಭಾಲೆ, ಜಗದೀಶ್ ಜಯಚಂದಭಾಯ್ ಪಾಂಡ್ಯ, ಚಿರಾಗ್ ದಿನೇಶ್‌ಕುಮಾರ್ ಶಾ, ಪ್ರಶಾಂತ್ ಖಂಕರಿ, ಕೈಲಾಶ್ ಶ್ರೀರಾಮ್ ಅಗರ್ವಾಲ್, ದತ್ತು ಶಿಟೋಲೆ, ಜಿಂತೇಂದ್ರ ಚಂದ್ರಭಾನ್ ಸಿಂಗ್ ಮತ್ತು ಅಂಕಿತ್ ಸಂಚಾರಿಯಾ ಕೂಡಾ ಸಾಲ ಮರುಪಾವತಿ ಮಾಡದವರು ಆಗಿದ್ದಾರೆ. 2013 ರಲ್ಲಿ ವಸೂಲಾತಿ ಅಧಿಕಾರವನ್ನು ಪಡೆದ ನಂತರ, ಸೆಬಿ ಹೆಚ್ಚಿನ ಸಂಖ್ಯೆಯ ಸಾಲ ಮರುಪಾವತಿ ಮಾಡದವರ ಪಟ್ಟಿಯನ್ನು ಮಾಡಿದೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications