Hindenburg Report: ಅದಾನಿ ಷೇರು ಹಗರಣದಲ್ಲಿ ಸೆಬಿ ಅಧ್ಯಕ್ಷೆ ಭಾಗಿ; ಹಿಂಡೆನ್‌ಬರ್ಗ್ ಗಂಭೀರ ಆರೋಪ
ಭಾರತಕ್ಕೆ ಸಂಬಂಧಿಸಿದಂತೆ ದೊಡ್ಡ ಸುದ್ದಿ ಕೊಡುವುದಾಗಿ ಟ್ವೀಟ್ ಮಾಡಿ ಕುತೂಹಲ ಮೂಡಿಸಿದ್ದ ಯುಎಸ್ ಶಾರ್ಟ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಸರ್ಚ್ ಇದೀಗ ಸೆಬಿ ಅಧ್ಯಕ್ಷೆಯ ವಿರುದ್ಧವೇ ಗಂಭೀರ ಆರೋಪ ಮಾಡಿದೆ. ಅದಾನಿ ಷೇರು ಹಗರಣದಲ್ಲಿ ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಮತ್ತು ಅವರ ಪತಿ ದವಾಳ್ ಬುಚ್ ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದೆ. ಇದು ಭಾರತೀಯ ಷೇರು ಮಾರುಕಟ್ಟೆ ವಲಯದಲ್ಲಿ ತೀವ್ರ ಸಂಚಲನ ಮೂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಹಿಂಡೆನ್‌ಬರ್ಗ್ ಈ ಬಗ್ಗೆ ಟ್ವೀಟ್ ಮಾಡಿದ್ದು, "ಅದಾನಿ ಗ್ರೂಪ್‌ನ ವಿದೇಶಿ ಷೇರುಗಳಲ್ಲಿ ಸೆಬಿ ಅಧ್ಯಕ್ಷರು ಪಾಲು ಹೊಂದಿದ್ದಾರೆ" ಎಂದು ಹೇಳಿದರು. ಇದು ಅದಾನು ಸಂಸ್ಥೆಯ ಮೇಲೆ ಹಿಂಡೆನ್‌ಗ್ರೂಪ್ ಮಾಡುತ್ತಿರುವು ಎರಡನೇ ಗಂಭೀರ ಆರೋಪವಾಗಿದೆ. ಈ ಮೊದಲು ಕೂಡ 2023ರ ಜನವರಿಯಲ್ಲಿ ಅದಾನಿ ಗ್ರೂಪ್ ಷೇರು ಮೌಲ್ಯಗಳನ್ನು ಕೃತಕವಾಗಿ ಏರಿಕೆ ಮಾಡಲಾಗುತ್ತಿದೆ ಎಂದು ಆರೋಪ ಮಾಡಿತ್ತು.

ಯುಎಸ್ ಮೂಲದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಅದಾನಿ ಗ್ರೂಪ್ ಮೇಲಿನ ಆರೋಪಗಳನ್ನು ಮುಂದುವರೆಸಿದೆ. "ಅದಾನಿ ಗ್ರೂಪ್‌ನ ಶಂಕಿತ ವಿದೇಶ ಹೂಡಿಕೆದಾರರ ವಿರುದ್ಧ ವಿರುದ್ಧ ಮಹತ್ವದ ಕ್ರಮ ಕೈಗೊಳ್ಳದೇ ಇರಲು ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಕೂಡ ಶಾಮೀಲಾಗಿರುವ ಸಾಧ್ಯತೆ ಇದೆ ಎನ್ನುವ ಅನುಮಾನ ನಮ್ಮದು, ಅವರು ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ ಬಳಕೆ ಮಾಡಿರುವಷ್ಟೇ ಗಣವನ್ನು ಬಳಕೆ ಮಾಡಿರುವುದು ಅನುಮಾನಕ್ಕೆ ಕಾರಣ" ಎಂದು ಹೇಳಿದೆ.
ವಿಸ್ಲ್‌ಬ್ಲೋವರ್ ಡಾಕ್ಯುಮೆಂಟ್‌ಗಳನ್ನು ಉಲ್ಲೇಖಿಸಿರುವ ಹಿಂಡೆನ್‌ಬರ್ಗ್ "ಸೆಬಿಯ ಅಧ್ಯಕ್ಷರು ಅದಾನಿ ಹಣದ ಹಗರಣದಲ್ಲಿ ಬಳಸಲಾದ ಅಸ್ಪಷ್ಟ ವಿದೇಶಿ ಘಟಕಗಳಲ್ಲಿ ಪಾಲನ್ನು ಹೊಂದಿದ್ದಾರೆ." ಎಂದು ಆರೋಪ ಮಾಡಿದೆ. ಈ ಬಗ್ಗೆ ಸೆಬಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications