ಮಲ್ಯರ ಪಾಸ್ ಪೋರ್ಟ್ ಜಪ್ತಿಗೆ ಕೋರಿ ಸುಪ್ರೀಂ ಅರ್ಜಿ

Posted By:
Subscribe to Oneindia Kannada

ನವದೆಹಲಿ, ಮಾ. 08: ಸಾಲದ ಸುಳಿಯಲ್ಲಿ ಸಿಲುಕಿರುವ ಉದ್ಯಮಿ ವಿಜಯ್ ಮಲ್ಯ ಅವರ ಮೇಲೆ ಇನ್ನಷ್ಟು ಬಲವಾಗಿ ಪ್ರಹಾರ ಮಾಡಲು ಬ್ಯಾಂಕ್ ಗಳು ನಿರ್ಧರಿಸಿವೆ.

ಉದ್ಯಮಿ ವಿಜಯ್ ಮಲ್ಯ ಅವರು ಯಾವುದೇ ಕಾರಣಕ್ಕೂ ದೇಶ ಬಿಡಬಾರರು ಅವರ ಪಾಸ್ ಪೋರ್ಟ್ ಜಪ್ತಿ ಮಾಡಬೇಕು ಎಂದು ಎಸ್ಬಿಐ ನೇತೃತ್ವ ಸಾಲ ವಸೂಲಾತಿ ನ್ಯಾಯಾಧಿಕರಣ (DRT) ಮಂಗಳವಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಿವೆ. ['ಅರುವತ್ತಕ್ಕೆ ಅರಳು ಮರಳು, ಅಡ್ವಾಣಿಯಂತಾದ ಮಲ್ಯ!']

SC to hear plea to restrain Mallya from leaving country

ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ಜಸ್ಟೀಸ್ ಯು.ಯು ಲಲಿತ್ ಅವರಿದ್ದ ನ್ಯಾಯಪೀಠ ಬ್ಯಾಂಕುಗಳು ಸಲ್ಲಿಸಿರುವ ಅರ್ಜಿ ಸ್ವೀಕರಿಸಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದ್ದಾರೆ. [ವಿಜಯ್ ಮಲ್ಯ ವಿರುದ್ಧ ಅರೆಸ್ಟ್ ವಾರೆಂಟ್ ಗೆ ಕೋರಿಕೆ]

ಪಾಸ್ ಪೋರ್ಟ್ ವಶಪಡಿಸಿಕೊಳ್ಳಿ: ಪಾಸ್ ಪೋರ್ಟ್ ಕಾಯ್ದೆ 1967ರ ಸೆಕ್ಷನ್ 10 (3) ಇ ಅನ್ವಯ ಪ್ರಯಾಣಿಕರೊಬ್ಬರ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಯುತ್ತಿದ್ದು, ಅವರ ವಿರುದ್ಧ ಅರೆಸ್ಟ್ ವಾರೆಂಟ್ ಗಾಗಿ ಅರ್ಜಿ ಸಲ್ಲಿಕೆಯಾಗಿದ್ದರೆ, ಅವರ ಪಾಸ್ ಪೋರ್ಟ್ ಹಾಗೂ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಏರ್ ಪೋರ್ಟ್ ನ ಅಧಿಕಾರಿಗಳು ವಶಪಡಿಸಿಕೊಳ್ಳಬಹುದು.

ಕಿಂಗ್ ಫಿಷರ್ ಏರ್ ಲೈನ್ಸ್ ವಿಮಾನಯಾನಕ್ಕಾಗಿ 17ಕ್ಕೂ ಹೆಚ್ಚು ಬ್ಯಾಂಕ್ ಗಳಿಂದ ಮಲ್ಯ ಅವರು ಸುಮಾರು 7,800 ಕೋಟಿ ರು ಸಾಲ ಪಡೆದುಕೊಂಡಿದ್ದಾರೆ.

ಯುನೈಟೆಡ್ ಸ್ಪಿರೀಟ್ ಚೆರ್ಮನ್ ಸ್ಥಾನ ತೊರೆದು ಲಂಡನ್ ಗೆ ಹಾರಲು ಸಿದ್ಧರಾಗಿರುವ ಮಲ್ಯ ಅವರಿಗೆ ಡಿಯಾಜಿಯೋ ಸಂಸ್ಥೆ ಸುಮಾರು 515 ಕೋಟಿ ರು ನೀಡಲು ಮುಂದಾಗಿತ್ತು. ಆದರೆ, ಈ ಮೊತ್ತ ಮಲ್ಯ ಕೈ ಸೇರದಂತೆ ತಾತ್ಕಾಲಿಕವಾಗಿ ಜಪ್ತಿ ಮಾಡಲು ಡಿಆರ್ ಟಿ ಆದೇಶಿಸಿದೆ. ಜೊತೆಗೆ ಜಾರಿ ನಿರ್ದೇಶನಾಲಯದಿಂದ ಹಣ ದುರಪಯೋಗ ಕೇಸು ದಾಖಲಾಗಿದೆ. (ಐಎಎನ್ಎಸ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Supreme Court will hear on Wednesday a plea by the consortium of banks led by the State Bank of India seeking to restrain beleaguered liquor baron Vijay Mallya from leaving the country.
Please Wait while comments are loading...