ಎಸ್ಬಿಐನಿಂದ ಸಾಲ ಪಡೆಯುವವರಿಗೆ ಒಂದೊಳ್ಳೆ ಸುದ್ದಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 22: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಪ್ರಮುಖ ಬ್ಯಾಂಕುಗಳು ಆಗಸ್ಟ್ 22ರಂದು ದೇಶವ್ಯಾಪಿ ಮುಷ್ಕರ ನಡೆಸುತ್ತಿದೆ. ಆದರೆ, ಈ ಸಂದರ್ಭದಲ್ಲಿ ಎಸ್ಬಿಐನ ಸಾಲಗಾರ ಗ್ರಾಹಕರಿಗೆ ಒಂದೊಳ್ಳೆ ಸುದ್ದಿ ಸಿಕ್ಕಿದೆ.

ಎಸ್ಬಿಐ ಸಿಬ್ಬಂದಿ ಸಂಖ್ಯೆ ಶೇ10 ರಷ್ಟು ಕಡಿತ
ಬ್ಯಾಂಕಿನಿಂದ ಪಡೆಯಲಾಗುವ ವಿವಿಧ ವೈಯಕ್ತಿಕ ಸಾಲಗಳ ಮೇಲಿನ ಪ್ರೊಸೆಸಿಂಗ್ ಶುಲ್ಕವನ್ನು ಎಸ್ಬಿಐ ಕಡಿತ ಮಾಡುತ್ತಿದೆ. ಕಾರ್ ಲೋನ್, ಗೋಲ್ಡ್ ಲೋನ್ ಸೇರಿದಂತೆ ಇತರ ವೈಯಕ್ತಿಕ ಸಾಲಗಳಿಗೆ ಪ್ರೊಸೆಸಿಂಗ್ ಫೀ ವಿಧಿಸುವುದಿಲ್ ಎಂದು ಪ್ರಕಟಣೆ ಹೊರಡಿಸಿದೆ.

SBI offers up to 100% waiver on processing fee on various loans

2017ರ ಡಿಸೆಂಬರ್ 31ರವರೆಗೆ ಪಡೆಯುವ ಕಾರ್ ಲೋನ್ ಅರ್ಜಿಗಳ ಮೇಲೆ ಯಾವುದೇ ವ್ಯವಹಾರಿಕ ಶುಲ್ಕ ವಿಧಿಸಲಾಗುವುದಿಲ್ಲ. 2017ರ ಅಕ್ಟೋಬರ್ 31ರವರೆಗೆ ಪಡೆಯುವ ಗೋಲ್ಡ್ ಲೋನ್ ಅರ್ಜಿಗಳಿಗೆ ಶೇ.50ರಷ್ಟು ಪ್ರೊಸೆಸಿಂಗ್ ಶುಲ್ಕ ಕಡಿತವಾಗಲಿದೆ.

ವಿಲೀನದ ಬಳಿಕ ಸ್ಟೇಟ್ ಬ್ಯಾಂಕ್ ನಿವ್ವಳ ಲಾಭಗಳಿಕೆ 3,105 ಕೋಟಿಗೆ ಏರಿಕೆ

ಬ್ಯಾಂಕ್ ನೀಡುವ ವೈಯಕ್ತಿಕ ಸಾಲ ಎಕ್ಸ್ ಪ್ರೆಸ್ ಕ್ರೆಡಿಟ್ ಮೇಲೆ ಸೆಪ್ಟೆಂಬರ್ 30ರವರೆಗೆ ಶೇ.50ರಷ್ಟು ಶುಲ್ಕ ಕಡಿತ ಮಾಡಲಾಗುತ್ತದೆ.
ಇತ್ತೀಚೆಗೆ ಉಳಿತಾಯ ಖಾತೆ ಮೇಲಿನ ಬಡ್ಡಿದರ ಇಳಿಕೆ ಮಾಡಿ, ಎಸ್ಬಿಐ ತನ್ನ ಗ್ರಾಹಕರಿಗೆ ಆಘಾತ ನೀಡಿತ್ತು.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Market leader State Bank of India today announced waiver of up to 100 per cent processing fee on car, gold and personal loans, albeit for limited periods.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X