ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಿಂದ ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಮ್' ಯೋಜನೆ

|
Google Oneindia Kannada News

ಮುಂಬೈ, ಮಾರ್ಚ್ 7: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಉದ್ಯೋಗಿಗಳಿಗೆ 'ವರ್ಕ್ ಫ್ರಂ ಹೋಮ್' (ಮನೆಯಿಂದಲೇ ಕೆಲಸ) ಅವಕಾಶ ನೀಡಿದೆ. ಮಂಗಳವಾರದಿಂದ ಈ ಯೋಜನೆಯನ್ನು ಜಾರಿಗೆ ತಂದಿದೆ. ಬ್ಯಾಂಕ್ ನ ಬೋರ್ಡ್ ಈಚೆಗೆಗೆ ವರ್ಕ್ ಫ್ರಂ ಹೋಮ್ ನೀತಿಗೆ ಒಪ್ಪಿಗೆ ಸೂಚಿಸಿತ್ತು.

ಈ ಮೂಲಕ ಮೊಬೈಲ್ ಫೋನ್ ಬಳಸಿ ತುಂಬ ತುರ್ತಾದ ಕೆಲಸಗಳನ್ನು ಉದ್ಯೋಗಿಗಳನ್ನು ಮನೆಯಿಂದಲೇ ಮಾಡಬಹುದು. ಮನೆಯಿಂದ ಬ್ಯಾಂಕ್ ನವರೆಗೆ ಹೋಗಬೇಕು ಎಂಬ ಅನಿವಾರ್ಯ ಇಲ್ಲ. "ಮೊಬೈಲ್ ತಂತ್ರಜ್ಞಾನ ಬಳಸುವಾಗ ಎಲ್ಲ ಡೇಟಾಗಳ ಸುರಕ್ಷತೆಗೂ ಕ್ರಮ ತೆಗೆದುಕೊಳ್ಳಲಾಗುವುದು" ಎಂದು ಬ್ಯಾಂಕ್ ನ ಹೇಳಿಕೆಯಲ್ಲಿ ತಿಳಿಸಲಾಗಿದೆ.[ಶುಲ್ಕ, ದಂಡ ನಿಯಮ ಮರುಪರಿಶೀಲಿಸಿ: ಬ್ಯಾಂಕುಗಳಿಗೆ ಕೇಂದ್ರದ ಮನವಿ]

SBI

ತಂತ್ರಜ್ಞಾನದ ಬಳಕೆ ಮತ್ತು ಸೇವೆಗಳನ್ನು ತುಂಬ ಎಚ್ಚರಿಕೆಯಿಂದ ರೂಪಿಸಲಾಗಿದೆ. ಅವುಗಳನ್ನು ಮತ್ತಷ್ಟು ಉತ್ತಮ ಪಡಿಸುವುದಕ್ಕೆ ಎಲ್ಲ ಅವಕಾಶಗಳಿವೆ. ಭವಿಷ್ಯದಲ್ಲಿ ಮಾರುಕಟ್ಟೆ ವಿಭಾಗ, ಸಾಮಾಜಿಕ ಜಾಲತಾಣಗಳ ನಿರ್ವಹಣೆ, ದೂರು ನಿರ್ವಹಣೆ ಅಪ್ಲಿಕೇಷನ್ ಸೇರಿದಂತೆ ಇತರ ಕೆಲಸಗಳನ್ನು ಮನೆಯಿಂದಲೇ ನಿರ್ವಹಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಲಾಗಿದೆ.

English summary
Country's largest lender State Bank of India on Tuesday launched a new facility to enable its employees to work from home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X