ಬ್ಯಾಂಕುಗಳಿಂದ ಗೃಹಸಾಲ, ವಾಹನ ಸಾಲ ಬಡ್ಡಿದರ ಇಳಿಕೆ
ಮುಂಬೈ, ಏ.8: ಹೊಸ ಹಣಕಾಸು ನೀತಿ ಪ್ರಕಟಿಸಿರುವ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅವರು ಸಾಲ ಪಡೆಯುವವರಿಗೆ ಶುಭ ಸುದ್ದಿ ಕೊಟ್ಟಿದ್ದಾರೆ.. ಆರ್ ಬಿಐ ಬಡ್ಡಿದರ 25 ಅಂಶಗಳಷ್ಟು ಇಳಿಕೆ ಸ್ಥಿರವಾಗಿದ್ದು, ಗೃಹಸಾಲ, ವಾಹನ ಸಾಲ ಕಡಿಮೆ ಮಾಡುವಂತೆ ಬ್ಯಾಂಕುಗಳಿಗೆ ತಾಕೀತು ಮಾಡಿದ್ದಾರೆ.
ಇದರಿಂದಾಗಿ ಬ್ಯಾಂಕಿನಿಂದ ಗೃಹ, ವಾಹನ ಲೋನ್ ಪಡೆಯುವವರು ಬ್ಯಾಂಕಿನತ್ತ ಮುಖ ಮಾಡಬಹುದಾಗಿದೆ. ಇತ್ತೀಚೆಗೆ ರೆಪೋ ದರ 25 ಮೂಲಾಂಶ (bps) ಶೇ 7.75ಕ್ಕೆ ಇಳಿಕೆ ಮಾಡಲಾಗಿದೆ. ಶೇ 8ರಷ್ಟಿದ್ದ ರೆಪೋ ದರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಇಳಿಸಲಾಗಿದೆ. ರೆಪೋದರ ಆಧಾರಿಸಿ ಬ್ಯಾಂಕುಗಳು ಈಗ ಶೇ 7.75ರಂತೆ ಆರ್ ಬಿಐನಿಂದ ಹಣ ಪಡೆದುಕೊಳ್ಳಲಿವೆ. [ಸಾಲ ಮಾಡಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ]
ಆರ್ ಬಿಐ ರೆಪೋ ದರ ಬಡ್ಡಿದರ ಇಳಿಕೆ ಮಾಡಿದ ಕೂಡಲೇ ಬ್ಯಾಂಕ್ ಗಳು ವಿವಿಧ ಸಾಲಕ್ಕೆ ನೀಡಿದ ಬಡ್ಡಿದರ ಇಳಿಕೆ ಮಾಡಲೇಬೇಕೆಂಬ ನಿಯಮವೇನೂ ಇಲ್ಲ. ಆದರೆ, ಕ್ರೆಡಿಟ್ ಆಫ್ ಟೇಕ್ ಪ್ರಬಲವಾಗಿಲ್ಲದ ಕಾರಣ ಬ್ಯಾಂಕುಗಳು ಅನಿವಾರ್ಯವಾಗಿ ಬಡ್ಡಿ ದರ ಇಳಿಕೆ ಮಾಡಿ ಗ್ರಾಹಕರನ್ನು ಆಕರ್ಷಿಸಲು ತೊಡಗಿವೆ.

ಯಾವ ಯಾವ ಬ್ಯಾಂಕಿನಿಂದ ಇಳಿಕೆ: ಯುನೈಟೆಡ್ ಬ್ಯಾಂಕ್ ಈಗಾಗಲೇ 25 ಮುಲಾಂಶ ಕಡಿತ ಘೋಷಿಸಿದೆ 15 ಅಂಶ ಮೂಲಾಂಶ (bps) ಕಡಿಮೆಗೊಳಿಸಿ ಶೇ 9.85 ಕ್ಕೆ ಇಳಿಸುತ್ತಿದ್ದು ಏ.13ರಿಂದ ಜಾರಿಗೆ ಬರಲಿದೆ.
ಖಾಸಗಿ ಬ್ಯಾಂಕುಗಳ ಪೈಕಿ ಎಚ್ ಡಿಎಫ್ ಸಿ ಬ್ಯಾಂಕ್ ಕೂಡಾ ಅಂಶ ಮೂಲಾಂಶ (bps) ಕಡಿಮೆಗೊಳಿಸಿ ಶೇ 9.85 ಕ್ಕೆ ಇಳಿಸಿದೆ. ಠೇವಣಿ ದರ 25 ಮೂಲಾಂಶಕ್ಕೆ ಇಳಿಸಲಾಗಿದೆ. ಏ.13ರಿಂದ ಜಾರಿಗೆ ಬರಲಿದೆ. [ಮನೆಸಾಲ, ವಾಹನ ಸಾಲ, ಆಸಾಲ ಈಸಾಲದ ಬಡ್ಡಿ ಇಳಿಕೆ]
ಐಸಿಐಸಿಐ ಬ್ಯಾಂಕ್ 25 ಮೂಲಾಂಶ ಇಳಿಸಿ ಶೇ 9.75ರಷ್ಟು ಇಳಿಕೆಯಾಗಿದೆ. 1 ಕೋಟಿ ತನಕದ ಠೇವಣಿ ದರವನ್ನು ಕೂಡಾ 25 ಮೂಲಾಂಶದಷ್ಟು ಇಳಿಸಲಾಗಿದೆ.
ಇದರಿಂದಾಗಿ ಬ್ಯಾಂಕಿನಿಂದ ಸಾಲ ಪಡೆಯುವವರಿಗೆ ಹಾಗೂ ಇಎಂಐ ಬಯಸುವವರಿಗೆ ಹಿತಕರ ಸುದ್ದಿ ಸಿಕ್ಕಿದೆ. ಅದರೆ, ಸಣ್ಣ ಮಟ್ಟದ ಹೂಡಿಕೆ ಹಾಗೂ ಪಿಂಚಣಿದಾರರಿಗೆ ಠೇವಣಿ ದರ ಹೆಚ್ಚಳದಿಂದ ಭಾರಿ ತೊಂದರೆಯಾಗುವ ಸಾಧ್ಯತೆಯಿದೆ.
ಸಿಆರ್ ಅರ್: ಬ್ಯಾಂಕುಗಳಲ್ಲಿರುವ ಠೇವಣಿಗೆ ಅನುಗುಣವಾಗಿ ಆರ್ ಬಿಐ ನಲ್ಲಿ ಇಡಬೇಕಾದ ಹಣದ ಮೊತ್ತ.
ರೆಪೋ ದರ: ಆರ್ ಬಿಐನಿಂದ ಬ್ಯಾಂಕುಗಳ ಹಣ ಪಡೆಯುವ ದರ.












Click it and Unblock the Notifications