ಭಾರ್ತಿ ಏರ್‌ಟೆಲ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕೇಂದ್ರ ಸರ್ಕಾರ
ನವದೆಹಲಿ, ಜುಲೈ 8: ಈ ಹಿಂದೆ ಸಲ್ಲಿಸಿದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್‌ಗಳನ್ನು ಸರಿಪಡಿಸುವ ಮೂಲಕ ಭಾರ್ತಿ ಏರ್‌ಟೆಲ್ ಲಿಮಿಟೆಡ್‌ಗೆ 9.23 ಬಿಲಿಯನ್ ತೆರಿಗೆ ಮರುಪಾವತಿ ಪಡೆಯಲು ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ, ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ (ಎಸ್‌ಸಿ) ಮೆಟ್ಟಿಲೇರಿದೆ ಎಂದು ಬ್ಲೂಮ್‌ಬರ್ಗ್ ವರದಿಯೊಂದು ತಿಳಿಸಿದೆ.
ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಮೇ ತಿಂಗಳಲ್ಲಿ ಸುನಿಲ್ ಮಿತ್ತಲ್ ನೇತೃತ್ವದ ಟೆಲಿಕಾಂ ಕಂಪನಿಗೆ ಜುಲೈ ರಿಂದ ಸೆಪ್ಟೆಂಬರ್ 2017 ರ ಅವಧಿಗೆ ಜಿಎಸ್‌ಟಿ ಮರುಪಾವತಿ ಪಡೆಯಲು ಅವಕಾಶ ನೀಡಿತ್ತು.
ಭಾರ್ತಿ ಏರ್‌ಟೆಲ್ 2017 ರ ಜುಲೈನಿಂದ ಸೆಪ್ಟೆಂಬರ್ ವರೆಗೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಕಡಿಮೆ ವರದಿ ಮಾಡಿದೆ ಎಂದು ಅಧಿಕಾರಿಗಳು ಹೇಳಿಕೊಂಡರೆ, ದೋಷದ ಅವಧಿಯಲ್ಲಿ ಜಿಎಸ್‌ಟಿಆರ್-2 ಎ ಫಾರ್ಮ್ ಕಾರ್ಯನಿರ್ವಹಿಸದ ಕಾರಣ ಅಂದಾಜಿನ ಆಧಾರದ ಮೇಲೆ ಇನ್‌ಪುಟ್‌ಗಳ ಮೇಲೆ 9.23 ಬಿಲಿಯನ್ (923 ಕೋಟಿ) ಹೆಚ್ಚುವರಿ ತೆರಿಗೆಯನ್ನು ಪಾವತಿಸಿದೆ ಎಂದು ಟೆಲಿಕಾಂ ಕಂಪನಿ ಹೇಳಿದೆ.

ದೆಹಲಿ ಹೈಕೋರ್ಟ್ ಈ ಮೇಲ್ಕಂಡತೆ ಜಿಎಸ್‌ಟಿ ಮರುಪಾವತಿ ಪಡೆಯಲು ಆದೇಶ ನೀಡಿರುವುದರಿಂದ, ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ, ಕೇಂದ್ರ ಸರ್ಕಾರವು ಇದೀಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.












Click it and Unblock the Notifications