ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್‌ ಬುಲೆಟ್ ಬೆಲೆ ಹೆಚ್ಚಳ

|
Google Oneindia Kannada News

ನವ ದೆಹಲಿ, ಸೆಪ್ಟೆಂಬರ್ 16: ದೇಶದಲ್ಲಿ ಲಾಕ್‌ಡೌನ್ ಮುಕ್ತಾಯದ ಬಳಿಕ ವಾಹನ ಮಾರಾಟವು ಸ್ವಲ್ಪ ಹೆಚ್ಚಾಗಿದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ವಾಹನ ಕಂಪನಿಗಳು ದರವನ್ನು ಹೆಚ್ಚಿಸಿಬಿಟ್ರೆ ಏನು ಗತಿ?, ಇದು ವಾಹನ ಪ್ರಿಯರಿಗೆ ಆಘಾತ ಆಗೋದ್ರಲ್ಲಿ ಅನುಮಾನವಿಲ್ಲ.

ರಾಯಲ್‌ ಎನ್‌ಫೀಲ್ಡ್‌ ಬುಲೆಟ್ ಪ್ರಿಯರಿಗೆ ಇಲ್ಲಿ ಸ್ವಲ್ಪ ನಿರಾಸೆಯಾಗಿದೆ. ಏಕೆಂದರೆ ಕಂಪನಿಯು ತನ್ನ ಮೋಟಾರ್‌ಸೈಕಲ್ ಮಾದರಿಯ ಬೆಲೆಯನ್ನು ಹೆಚ್ಚಿಸಿದೆ. ಆದರೆ, ಬೆಲೆ ಏರಿಕೆಯೊಂದಿಗೆ ಬೈಕ್‌ನಲ್ಲಿ ಯಾವುದೇ ವೈಶಿಷ್ಟ್ಯವನ್ನು ಹೆಚ್ಚಿಸಲಾಗಿದೆ ಎಂದು ಕಂಪನಿ ತಿಳಿಸಿಲ್ಲ. ನೀವು ಬುಲೆಟ್ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಯಾವ ಮಾದರಿಗಳ ಬೆಲೆಗಳು ಎಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ.

 ಹೊಸ ಬೈಕ್ ಬಿಡುಗಡೆಗೆ ಹೋಂಡಾ ಸಿದ್ಧತೆ: ಬೆಲೆ 60,000 ರೂಪಾಯಿ ಒಳಗೆ ಹೊಸ ಬೈಕ್ ಬಿಡುಗಡೆಗೆ ಹೋಂಡಾ ಸಿದ್ಧತೆ: ಬೆಲೆ 60,000 ರೂಪಾಯಿ ಒಳಗೆ

ಬುಲೆಟ್ 350 ರ ಎಲ್ಲಾ ಮೂರು ರೂಪಾಂತರಗಳ ಎಕ್ಸ್ ಶೋ ರೂಂ ಬೆಲೆಯನ್ನು ಕಂಪನಿಯು ಹೆಚ್ಚಿಸಿದೆ. ದೆಹಲಿಯಲ್ಲಿ ಈ ಬೆಲೆ 2,756 ರೂ. ಏರಿಕೆ ಮಾಡಲಾಗಿದೆ.

Royal Enfield Bullet 350 BS6 Price Becomes Costlier In India

ದೆಹಲಿಯಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ ಎಕ್ಸ್ 350 ವೇರಿಯಂಟ್ ಎಕ್ಸ್ ಶೋರೂಮ್ ಬೆಲೆ 1,27,093 ರೂ. ಆಗಿದೆ. ಇನ್ನು ರಾಯಲ್ ಎನ್‌ಫೀಲ್ಡ್ 350 (ಬ್ಲ್ಯಾಕ್) ಎಕ್ಸ್ ಶೋರೂಮ್ ಬೆಲೆ 1,33,260 ರೂ. ತಲುಪಿದೆ. ಇನ್ನು ಟಾಪ್-ಆಫ್-ಲೈನ್ ಬುಲೆಟ್ ಎಕ್ಸ್ 350 ಇಎಸ್ (ಎಲೆಕ್ಟ್ರಿಕ್ ಸ್ಟಾರ್ಟ್) ಗೆ ಬೆಲೆ 1,42,705 ರೂ. ಆಗಿದೆ.

ಬುಲೆಟ್ 350 ಬೈಕ್, ರಾಯಲ್ ಎನ್‌ಫೀಲ್ಡ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ಮೋಟಾರ್‌ಸೈಕಲ್. ಕಂಪನಿಯು ಇದನ್ನು ಹೊಸ ಬಣ್ಣದಲ್ಲಿ ಬಿಡುಗಡೆ ಮಾಡಿದೆ. ಆದಾಗ್ಯೂ, ಇದರ ನಂತರವೂ ಬುಲೆಟ್‌ನ ಹಳೆಯ ರೂಪವನ್ನು ಉಳಿಸಿಕೊಳ್ಳಲಾಗಿದೆ. ಬುಲೆಟ್ 350 ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳಲ್ಲಿ ಕಪ್ಪು ಬಣ್ಣವನ್ನು ಹೊಂದಿರುವ ಗೋಲ್ಡನ್ ಪಿನ್‌ಸ್ಟ್ರೈಪ್‌ಗಳನ್ನು ಹೊಂದಿದೆ.

ದೊಡ್ಡ ಎಂಜಿನ್ ಮತ್ತು ಭಾರವಾದ ಹೊರತಾಗಿಯೂ, ಇದು ಪ್ರತಿ ಲೀಟರ್‌ಗೆ 30 ರಿಂದ 35 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಅದೇ ಸಮಯದಲ್ಲಿ, ಬುಲೆಟ್‌ನ ಮರುಮಾರಾಟ ಮೌಲ್ಯವೂ ಉತ್ತಮವಾಗಿದೆ.

English summary
The Royal Enfield Bullet 350 BS 6's pricing has been increased for the second time since it was launched in India earlier this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X