ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ರಿಯಲ್ ಎಸ್ಟೇಟ್ ಹಿನ್ನೋಟ, ಮುನ್ನೋಟ

By Rajendra
|
Google Oneindia Kannada News

ಬೆಂಗಳೂರು, ಜ.13: ರಿಯಲ್ ಎಸ್ಟೇಟ್ ವ್ಯವಹಾರ ಕಳೆದ ವರ್ಷ ಹೇಗಿತ್ತು, ಮುಂದಿನ ವರ್ಷ ಏನೆಲ್ಲಾ ಬೆಳವಣಿಗೆಗಳನ್ನು ಕಾಣಲಿದೆ, ಹಿಂದಿನ ಸಾಧಕ ಬಾಧಕಗಳೇನು, ಮುಂದಿನ ಗೊತ್ತು ಗುರಿಗಳೇನು ಎಂಬುದನ್ನು ರಿಯಲ್ ಎಸ್ಟೇಟ್ ತಜ್ಞರು ವಿಶ್ಲೇಷಿಸಿದ್ದಾರೆ. ಮುಂದೆ ಓದಿ.

2014ರ ಪೂರ್ತಿ ನೋಟ: ಕಳೆದುಹೋದ 2014ರತ್ತ ಹಿಂದೆ ತಿರುಗಿ ನೋಡಿದರೆ, ಮಧ್ಯ ವರ್ಷದ ಬಳಿಕ ಬೇಡಿಕೆಯು ಉತ್ತಮವಾಗಿ ಮೇಲೆದ್ದಿರುವುದನ್ನು ನಾವು ಕಾಣುತ್ತೇವೆ. ಕೇಂದ್ರದಲ್ಲಿ ಸರ್ಕಾರ ಬದಲಾಗಿರುವುದು ಮತ್ತು ನೀತಿ ಬದಲಾಗುತ್ತದೆ ಎಂಬ ಜನರ ನಿರೀಕ್ಷೆಯೇ ಬಿರುಸಿನ ಬೇಡಿಕೆಗೆ ಒಂದು ಮುಖ್ಯ ಕೊಡುಗೆಯಾಗಿದೆ.

ನಾವು ಕೂಡ ಕೈಗಾರಿಕೆ ಹಾಗೂ ಆರ್ಥಿಕತೆಗೆ ಅನುಕೂಲವಾಗವ ಕಾಯಿದೆಯನ್ನೇ ಕಂಡಿದ್ದೇವೆ; ಈ ನಿಟ್ಟಿನಲ್ಲಿ ಬೊಟ್ಟು ಮಾಡಬಹುದಾದ್ದೆಂದರೆ, ಆರ್ ಇಐಟಿ ನೀತಿಯ ಘೋಷಣೆ. ಬೆಂಗಳೂರಿನ ಕುರಿತಾಗಿ ಹೇಳುವುದಾದರೆ, 2014ರ ನಿಧಾನಗತಿಯ ಹಂತವಾಗಿದ್ದ ವರ್ಷದ ಪ್ರಥಮ ಅರ್ಧದಲ್ಲೂ ಕೂಡ ನಾವು ಇಲ್ಲಿನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಸ್ಥಿರವಾದ ಪ್ರಗತಿ ಕಂಡಿದ್ದೇವೆ.

Bengaluru real estate2

ಸಣ್ಣ ಪ್ರದೇಶಗಳಲ್ಲಿ ವ್ಯಾಪಿಸಿರುವ ಪ್ರೊಜೆಕ್ಟ್ ಗಳಲ್ಲಿ ಎಫ್ ಡಿಐಗಿರುವ ನಿಯಮಗಳನ್ನು ಸರಳಗೊಳಿಸುವ ಮೂಲಕ, ಸರ್ಕಾರವು ನಗರದೊಳಗಿನ ಅಭಿವೃದ್ಧಿ ಅವಕಾಶಗಳ ಹಾದಿಯನ್ನು ತೆರೆದಿದೆ.

2015ರ ಮುನ್ನೋಟ: ಪ್ರಮುಖ ನೀತಿಗಳ ಬದಲಾವಣೆಯ ಅಡಿಗಲ್ಲಿನೊಂದಿಗೆ, ಎಫ್ ಡಿಐನಲ್ಲಿ ಭಾರಿ ಪ್ರಗತಿಯಾಗುವ ಮತ್ತು ಇತರೆ ಹೂಡಿಕೆಗಳು ಕ್ಷೇತ್ರದತ್ತ ಹರಿದು ಬರುವ ನಿರೀಕ್ಷೆ ಇದೆ. ಮುಂದೆ ಅಡಿ ಇಟ್ಟಂತೆ, 2015ರ ಎರಡನೇ ತ್ರೈಮಾಸಿಕದ ಆರಂಭದ ವೇಳೆಗೆ ಬಡ್ಡಿದರವು ದೃಢಗೊಳ್ಳು ಹಾಗೂ ಗೃಹಸಾಲದ ಮೇಲಿನ ಬಡ್ಡಿದರ ಕುಸಿಯುವ ನಿರೀಕ್ಷೆ ನಮ್ಮದು. ಸಂತೋಷದಾಯಕ ಪ್ರಗತಿಯನ್ನು ಉದ್ಯಮ ಕಾಣುವ ನಿರೀಕ್ಷೆ ಇದೆ.

2015ರ ಮೊದಲ ತ್ರೈಮಾಸಿಕದಿಂದ ಗತಿ ವೇಗ ಪಡೆದುಕೊಳ್ಳಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ. ಬೆಂಗಳೂರಿನಾದ್ಯಂತ 2015ರಲ್ಲಿ ವಿವಿಧ ಬೆಲೆ ಹಾಗೂ ಗಾತ್ರದ ಶ್ರೇಣಿಗಳಲ್ಲಿ ವಸತಿ ಯೋಜನೆಗಳು ಪ್ರಾರಂಭಗೊಳ್ಳುವುದನ್ನು ಖರೀದಿದಾರರು ಎದುರು ನೋಡಬಹುದು.

ಎಲ್ಲಿ ಉತ್ತಮ ಭೌತಿಕ ಹಾಗೂ ಸಾಮಾಜಿಕ ಮೂಲಸೌಕರ್ಯ ಲಭ್ಯವಿದೆಯೋ ಅಂತಹ ಸ್ಥಳಗಳಿಗೆ ಖರೀದಿದಾರರು ಆದ್ಯತೆ ನೀಡುತ್ತಾರೆ ಎಂಬುದು ನಮ್ಮ ಅನುಭವ. ಈ ನಗರದಲ್ಲಿ ಐಟಿ ಹಾಗೂ ಐಟಿಇಎಸ್ ಕ್ಷೇತ್ರಗಳ ಬೇಡಿಕೆಯ ಪರ್ವ ಮುಂದುವರಿದಿದೆ ಮತ್ತು ಹಾಗಾಗಿ ಖರೀದಿದಾರರು ವಾಣಿಜ್ಯ ಮತ್ತು ರಿಟೇಲ್ ಬೆಳವಣಿಗೆಗಳು ನಡೆಯಬಹುದಾದಂತಹ ಸ್ಥಳಗಳತ್ತಲೇ ಹೋಗುತ್ತಾರೆ.

ಮುಂದಿನ ಎರಡು ವರ್ಷಗಳಲ್ಲಿ ವಸತಿ ಹಾಗೂ ವಾಣಿಜ್ಯ ರಿಯಲ್ ಎಸ್ಟೇಟ್ ಸ್ಥಿರವಾದ ಪ್ರಗತಿ ಸಾಧಿಸುವ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೇವೆ. ಮೆಟ್ರೋ ಸಂಪರ್ಕದ ಇನ್ನಷ್ಟು ಮಾರ್ಗಗಳು 2015ರಲ್ಲಿ ಪೂರ್ಣಗೊಳ್ಳುತ್ತವೆ. ಇದು ಪ್ರಗತಿಗೆ ಮತ್ತಷ್ಟು ಪೂರಕವಾಗಲಿದೆ. ಇದು ಪ್ರಗತಿಗೆ ಮತ್ತಷ್ಟು ಉತ್ತೇಜನ ನೀಡಲಿದೆ. [ಸುರೇಶ್ ಹರಿ, ಕಾರ್ಯದರ್ಶಿಗಳು, ಕ್ರೆಡಾಯ್ ಬೆಂಗಳೂರು]

Bengaluru real estate1

2014ರ ಪೂರ್ತಿ ನೋಟ: 2014ನೇ ವರ್ಷ ಅನೇಕ ಸವಾಲುಗಳಿಂದ ಕೂಡಿತ್ತು. ಆದಾಗ್ಯೂ, ಅನೇಕ ವಿಧಗಳಲ್ಲಿ, ಜನರ ಹಾಗೂ ಉದ್ಯಮದ ಬಯಕೆಗಳು ಬದಲಾವಣೆಯತ್ತ ತುಡಿಯುವುದನ್ನು ನಾವು ಕಂಡಿದ್ದೇವೆ. ಪರಿಣಾಮವಾಗಿ, ವರ್ಷದ ಆರಂಭದಲ್ಲಿ ನಾವು ನಿರೀಕ್ಷಿಸಿದ್ದಕ್ಕಿಂತ ತುಂಬಾ ಚೆನ್ನಾಗಿ ವರ್ಷವು ಕೊನೆಗೊಂಡಿದೆ.

ಈ ವರ್ಷ, ಸವಾಲುಗಳ ಹೊರತಾಗ್ಯೂ, ಬಲಶಾಲಿ ಗತಿ ಇಲ್ಲದೇ ಇದ್ದರೂ ಕೂಡ, ಆರ್ಥಿಕತೆಯ ಮರುಸ್ಥಾಪನೆಯನ್ನು ನಾವು ಕಂಡಿದ್ದೇವೆ. ಜಾಗೃತಗೊಂಡಿವೆ. ಇದರಿಂದಾಗಿ ಮುಂದಿನ 2-5 ವರ್ಷಗಳಲ್ಲಿ ಬಲಿಷ್ಠ ಗತಿಯನ್ನು ನಾವು ನಿರೀಕ್ಷಿಸಿದ್ದೇವೆ.

2015ರ ಮುನ್ನೋಟ: ಈ ವರ್ಷಕ್ಕಿಂತ 2015 ತುಂಬಾ ಚೆನ್ನಾಗಿರುತ್ತದೆ ಎಂಬ ನಿರೀಕ್ಷೆ ನಮ್ಮದಾಗಿದೆ. ಕೇಂದ್ರ ಸರ್ಕಾರವು ತನ್ನ ನೀತಿಗಳ ಬದಲಾವಣೆಗೊಳಿಸುವ ಪರ್ವದೊಂದಿಗೆ ಮುಂದುವರಿಯುತ್ತದೆ ಮತ್ತು ಸುಧಾರಣೆಗಳು ನಡೆಯುತ್ತವೆ ಎಂಬ ಭರವಸೆಯನ್ನು ನಾವು ಇಟ್ಟುಕೊಂಡಿದ್ದೇವೆ.

ಗಮನಿಸಬೇಕಾಗಿರುವ ಒಂದು ಪ್ರಮುಖ ಸಂಗತಿ ಎಂದರೆ, ಬಡ್ಡಿ ದರ. 2014ರಲ್ಲಿ ಈ ತನಕ ನಾವು ಕಂಡಿದ್ದಕ್ಕಿಂತ 2015ರಲ್ಲಿ ಉತ್ತಮ ಪ್ರಗತಿ ಸಾಧಿಸುವಲ್ಲಿ ಇದು ನಿಜವಾಗಿಯೂ ತುಂಬಾ ಪ್ರಮುಖ ಪಾತ್ರ ವಹಿಸಲಿದೆ. [ವಿಶಾಲ್ ಮಿರ್ಚಂದಾನಿ, ಸಿಇಒ, ರಿಟೇಲ್ ಮತ್ತು ಕಮರ್ಷಿಯಲ್, ಬ್ರಿಗೇಡ್ ಗ್ರೂಪ್]

Bengaluru real estate

2014ರ ಪೂರ್ತಿನೋಟ: ಇದೊಂದು ಅರ್ಹ ಪ್ರಗತಿ ಹಾಗೂ ನಾವೀನ್ಯತೆಗಳನ್ನೊಳಗೊಂಡಿದ್ದ ವರ್ಷವಾಗಿತ್ತು. ಈ ವರ್ಷ ನಾವು ಶೇ.20-ಶೇ.30ರಷ್ಟು ಪ್ರಗತಿಯನ್ನು ಕಂಡಿದ್ದೇವೆ. ಈ ವರ್ಷ ಅನೇಕ ಜನರು ಸೌಂದರ್ಯದ ವಿಷಯದತ್ತ ಮುಖ ಮಾಡಿದ್ದನ್ನು ಕಂಡಿದ್ದೇವೆ. ಉತ್ತಮ ಚರ್ಮ, ಅಥವಾ ಕೂದಲು, ಅಥವಾ ಲೈಪೋಸಕ್ಷನ್, ಬ್ರೆಸ್ಟ್ ಆಗ್ಯುಮೆಂಟೇಶನ್, ರೈನೋಪ್ಲಾಸ್ಟಿಯಂತಹ ಪ್ಲಾಸ್ಟಿಕ್ ಸರ್ಜರಿ ವಿಧಾನಗಳು ಮತ್ತು ಇಂತಹ ಅನೇಕ ಶಸ್ತ್ರಚಿಕಿತ್ಸಾ ವಿಧಾನಗಳ ಮೂಲಕ ತಮ್ಮ ಲುಕ್ ಸುಧಾರಿಸಿಕೊಳ್ಳು ಜನರು ಹೆಚ್ಚೆಚ್ಚು ಬಯಸುತ್ತಿದ್ದಾರೆ.

2015ರ ಮುನ್ನೋಟ: ಸರ್ಕಾರ ನೀತಿಗಳ ಬದಲಾವಣೆಯೊಂದಿಗೆ ಬರಲಿದ್ದು, ಆರ್ಥಿಕತೆಯ ಮುಂದಕ್ಕೆ ಸಾಗಲಿದೆ ಎಂದು ನಾವು ನಿರೀಕ್ಷಿಸಿದ್ದೇವೆ. ಹೇರ್ ಲೈನ್ ಮಟ್ಟಿಗೆ, 2014ರಲ್ಲಿ ನಾವು ಕಂಡಿದ್ದಕ್ಕಿಂತ 2015ನೇ ವರ್ಷದಲ್ಲಿ ಬೇಡಿಕೆ ಹಾಗೂ ಟ್ರೆಂಡ್ ಗಳು ಉತ್ತಮವಾಗಿರಲಿವೆ ಎಂಬ ವಿಶ್ವಾಸವನ್ನು ನಾವು ಇರಿಸಿಕೊಂಡಿದ್ದೇವೆ.

ಅನೇಕ ನೀತಿಗಳ ಬದಲಾವಣೆಯನ್ನು ಸರ್ಕಾರ ಘೋಷಿಸುವುದನ್ನೇ ಉದ್ಯಮ ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಎದುರು ನೋಡುತ್ತಿವೆ. ಇವುಗಳಲ್ಲಿ ಜಿಎಸ್ ಟಿ ಪದ್ಧತಿಯು ಒಂದಾಗಿದೆ. ಇದು ಸದ್ಯ ವಿಧಿಸಲಾಗುತ್ತಿರುವ ಬಹು ತೆರಿಗೆಗಳನ್ನು ರದ್ದುಗೊಳಿಸಿ ಸರಕುಗಳು ಹಾಗೂ ಸೇವೆಗಳಿಗೆ ಏಕ ತೆರಿಗೆ ವಿಧಿಸಲಿದೆ. ಜತೆಗೆ ಸರ್ಕಾರ ತೆರಿಗೆಗಳನ್ನು ಇಳಿಸಬಹುದು ಎಂಬ ನಿರೀಕ್ಷೆ ನಮ್ಮದಾಗಿದೆ. [ಬನಿ ಆನಂದ್, ಸಂಸ್ಥಾಪಕ ನಿರ್ದೇಶಕರು, ಹೇರ್ ಲೈನ್ ಇಂಟರ್ ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ]

English summary
Bengaluru real estate Round up of 2014: Looking back at 2014, we have seen good pick-up in demand from the mid-year onwards. Outlook for 2015: With major policy changes on the anvil, a lot of growth in FDI and other investments are expected to flow into the sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X