ಜಿಯೋ ಬ್ರಾಡ್ ಬ್ಯಾಂಡ್ ಸೇವೆಗಾಗಿ 60 ಸಾವಿರ ಕೋಟಿ ಹೂಡಿಕೆ
ಬೆಂಗಳೂರು, ಮೇ 08: ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಫೈಬರ್ ಟು ದಿ ಹೋಮ್ (FTTH) ಬ್ರಾಡ್ ಬ್ಯಾಂಡ್ ಸೇವೆ ತರಲು ಮುಂದಾಗಿದ್ದು, ಇದಕ್ಕಾಗಿ 60 ಸಾವಿರ ಕೋಟಿ ರು ಹೂಡಿಕೆಗೆ ಮುಂದಾಗಿದೆ ಎಂದು ಲೈವ್ ಮಿಂಟ್ ವರದಿ ಮಾಡಿದೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ ಗೆ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರು ಸಿಗಲಿದ್ದು, ಮುಖೇಶ್ ಅಂಬಾನಿ ಒಡೆತನದ ಕಂಪನಿ ಜಿಯೋದ ಹೂಡಿಕೆ ಮೊತ್ತ 2,50,000 ಕೋಟಿ ರು ಆಗಲಿದೆ.
ಫೈಬರ್ ಟು ದಿ ಹೋಮ್ (FTTH) ಬ್ರಾಡ್ ಬ್ಯಾಂಡ್ ಸೇವೆಯಲ್ಲಿ ಗ್ರಾಹಕರಿಗೆ 100 ಜಿಬಿ ಹೈ ಸ್ಪೀಡ್ ಡೇಟಾ ಸಿಗಲಿದೆ. 100 ಜಿಬಿ ಡೇಟಾ ಮಿತಿ ಮುಗಿದ ಮೇಲೆ ಬಳಕೆದಾರರಿಗೆ ತಿಂಗಳಿಗೆ 25 ಬಾರಿ 40 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ.

ಹೀಗಾಗಿ, ತಿಂಗಳಿಗೆ ಒಟ್ಟು 1,100 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಗ್ರಾಹಕರು ಇದಕ್ಕಾಗಿ 4,500 ರೂಪಾಯಿ ಸೆಕ್ಯೂರಿಟಿ ರೂಪದಲ್ಲಿ (ಗಿಗಾ ಹಬ್ ಹೋಮ್ ಗೇಟ್ ವೇ) ನೀಡಬೇಕಾಗುತ್ತದೆ. ಇದು ರೀಫಂಡ್ ಮೊತ್ತವಾಗಿದೆ.
ದೆಹಲಿ, ಮುಂಬೈ, ಅಹಮದಾಬಾದ್, ಚೆನ್ನೈ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಜಿಯೋ ತನ್ನ ಫೈಬರ್ ಸರ್ವೀಸ್ ತನ್ನ ಹೊಸ ಯೋಜನೆ ಆರಂಭಿಸಿದ್ದು, ಟಿವಿ ನೋಡಲು ಗ್ರಾಹಕರಿಗೆ ಒಂದು ಸೆಟ್ ಆಫ್ ಬಾಕ್ಸ್ ಕೂಡ ಜಿಯೋ ನೀಡಲಿದೆ. ಜಿಯೋ ಇಂಟರ್ನೆಟ್ ಫ್ರೋಟೋಕಾಲ್ ಟೆಲಿವಿಜನ್ ಸರ್ವಿಸ್ ನಡಿ ಗ್ರಾಹಕರು ಟಿವಿ ಕೂಡ ನೋಡಬಹುದಾಗಿದೆ. ಮಾರ್ಚ್ 2018ರ ಎಣಿಕೆಯಂತೆ ಜಿಯೋ ಸರಿ ಸುಮಾರು 186.6 ಮಿಲಿಯನ್ ಗ್ರಾಹಕರನ್ನು ಹೊಂದಿದೆ.












Click it and Unblock the Notifications