ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಸೇರಿ 17 ರಾಜ್ಯಗಳಿಗೆ ಆದಾಯ ಕೊರತೆ ಅನುದಾನ ಬಿಡುಗಡೆ

|
Google Oneindia Kannada News

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, 17 ರಾಜ್ಯಗಳಿಗೆ 9,781 ಕೋಟಿ ರೂ. ತಿಂಗಳ ಬದಲಾವಣೆ ನಂತರದ ಆದಾಯ ಕೊರತೆ (ಪಿಡಿಆರ್ ಆಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಬಿಡುಗಡೆ ಮಾಡಿದ 10ನೇ ಕಂತಿನ ಪಿಡಿಆರ್ ಡಿ ಅನುದಾನವಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಈವರೆಗೆ ಅರ್ಹ ರಾಜ್ಯಗಳಿಗೆ 98,710 ಕೋಟಿ ರೂ. ಬದಲಾವಣೆ ನಂತರದ ಆದಾಯ ಕೊರತೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ ರಾಜ್ಯವಾರು ಬಿಡುಗಡೆ ಮಾಡಿರುವ ಪೋಸ್ಟ್ ಡಿವೊಲ್ಯುಷನ್ ರೆವಿನ್ಸೂ ಡೆಫಿಸಿಟ್ ಅನುದಾನ ಬಿಡುಗಡೆಯ ವಿವರಗಳನ್ನು ಈ ಕೆಳಗೆ ಅಡಕಗೊಳಿಸಲಾಗಿದೆ.

ಸಂವಿಧಾನದ ಕಲಂ 275ರಡಿ ರಾಜ್ಯಗಳಿಗೆ ವಿಕೇಂದ್ರೀಕರಣ ನಂತರದ ಆದಾಯ ಕೊರತೆ ಅನುದಾನವನ್ನು ನೀಡಲಾಗುವುದು. ವಿಕೇಂದ್ರೀಕರಣದ ನಂತರ ರಾಜ್ಯಗಳು ಅನುಭವಿಸುವ ಆದಾಯ ಕೊರತೆಯ ಅಂತರವನ್ನು ನೀಗಿಸಲು 15ನೇ ಹಣಕಾಸು ಯೋಜನೆಯಡಿ ಶಿಫಾರಸ್ಸಿನಂತೆ ಅನುದಾನವನ್ನು ಬಿಡುಗಡೆ ಮಾಡಲಾಗುವುದು. ಆಯೋಗ ಪಿಡಿಆರ್‌ಡಿ ಅನುದಾನವನ್ನು 17 ರಾಜ್ಯಗಳಿಗೆ ಶಿಫಾರಸು ಮಾಡಿದೆ ಮತ್ತು ಅದನ್ನು ಪ್ರತಿ ತಿಂಗಳು ಕಂತಿನ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

2021-22ನೇ ಹಣಕಾಸು ವರ್ಷದಲ್ಲಿ ಕೊರತೆಯನ್ನು ಅಂದಾಜು ಮಾಡಿ, ರಾಜ್ಯಗಳ ಆದಾಯ ಮತ್ತು ವೆಚ್ಚ ಎರಡರ ನಡುವಿನ ಕೊರತೆಯ ಮೌಲ್ಯಮಾಪನ ಆಧರಿಸಿ ಆಯೋಗ ರಾಜ್ಯಗಳಿಗೆ ಅರ್ಹ ಅನುದಾನವನ್ನು ನಿರ್ಧರಿಸುತ್ತದೆ. 15ನೇ ಹಣಕಾಸು ಆಯೋಗ 2021-22ನೇ ಹಣಕಾಸು ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟಾರೆ ವಿಕೇಂದ್ರೀಕರಣದ ನಂತರ 1,48,452 ಕೋಟಿ ರೂ. ಆದಾಯ ಕೊರತೆ ಅನುದಾನವನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲು ಶಿಫಾರಸು ಮಾಡಿತ್ತು. ಆ ಪೈಕಿ 98,710 ಕೋಟಿ (ಶೇ.83.33) ರಷ್ಟನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ.

10th installment PDRD released to 17 states

15ನೇ ಹಣಕಾಸು ಆಯೋಗ ಆದಾಯ ಕೊರತೆ ಅನುದಾನ ಪಡೆಯಲು ಶಿಫಾರಸು ಮಾಡಿರುವ ರಾಜ್ಯಗಳೆಂದರೆ, ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ್, ಸಿಕ್ಕಿಂ, ತಮಿಳುನಾಡು, ತ್ರಿಪುರಾ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳ.

ಕೋವಿಡ್ ನಂತರದ ಆದಾಯ ಕೊರತೆ ಅನುದಾನದ ರಾಜ್ಯವಾರು ಮಾಹಿತಿ, ಬಿಡುಗಡೆಯಾಗಿರುವ ಪಿಡಿಆರ್‌ಡಿ ಅನುದಾನದ ರಾಜ್ಯವಾರು ವಿವರ:

ಕೋವಿಡ್ ನಂತರದ ಆದಾಯ ಕೊರತೆ ಅನುದಾನದ ರಾಜ್ಯವಾರು ಮಾಹಿತಿ
ಕ್ರಮ ಸಂಖ್ಯೆ ರಾಜ್ಯಗಳ ಹೆಸರು ಜನವರಿ 2022ರವಾರೆಗೆ ಬಿಡುಗಡೆಯಾದ ಮೊತ್ತ, (10 ನೇ ಕಂತು) (ಕೋಟಿ ರೂ.ಗಳಲ್ಲಿ) 2021-22ರ ಅವಧಿಯಲ್ಲಿ ಬಿಡುಗಡೆಯಾದ ಒಟ್ಟು ಮೊತ್ತ (ಕೋಟಿ ರೂ.ಗಳಲ್ಲಿ)
1 ಆಂಧ್ರಪ್ರದೇಶ 1438.08 14380.83
2 ಅಸ್ಸಾಂ 531.33 5313.33
3 ಹರ್ಯಾಣ 11.00 110.00
4 ಹಿಮಾಚಲ ಪ್ರದೇಶ 854.08 8540.83
5 ಕರ್ನಾಟಕ 135.92 1359.17
6 ಕೇರಳ 1657.58 1657.83
7 ಮಣಿಪುರ 210.33 2103.33
8 ಮೇಘಾಲಯ 106.58 1065.83
9 ಮಿಜೋರಾಂ 149.17 1491.67
10 ನಾಗಾಲ್ಯಾಂಡ್ 379.75 3797.50
11 ಪಂಜಾಬ್ 840.08 8400.83
12 ರಾಜಸ್ಥಾನ 823.17 8231.67
13 ಸಿಕ್ಕಿಂ 56.50 565.00
14 ತಮಿಳು ನಾಡು 183.67 1836.67
15 ತ್ರಿಪುರ 378.83 3788.33
16 ಉತ್ತರಾಖಂಡ 647.67 6476.67/td>
17 ಪಶ್ಚಿಮ ಬಂಗಾಳ 1467.25 14672.50
--- ಒಟ್ಟು 9,871.00 9,8710.00

ಹದಿನೈದನೆಯ ಹಣಕಾಸು ಆಯೋಗವು 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ ಒಟ್ಟು 1,18,452 ಕೋಟಿ ರೂ. ಪಿಡಿಆರ್‌ಡಿ ಅನುದಾನವನ್ನು ಶಿಫಾರಸು ಮಾಡಿದೆ. ಈ ಪೈಕಿ 69,097.00 ಕೋಟಿ ರೂ.ಗಳನ್ನು (ಶೇ.58.33) ಇದುವರೆಗೆ ಬಿಡುಗಡೆ ಮಾಡಲಾಗಿದೆ.

ಎನ್.ಕೆ. ಸಿಂಗ್ ನೇತೃತ್ವದ ಹದಿನೈದನೇ ಹಣಕಾಸು ಆಯೋಗವು 2021-22 ರಿಂದ 2025-26ನೇ ಸಾಲಿನ ತನ್ನ ವರದಿಯನ್ನು ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಸಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಹಾಗೂ ರಾಜ್ಯಗಳೊಳಗಿನ ತೆರಿಗೆ ಹಂಚಿಕೆ, ಸ್ಥಳೀಯ ಸರ್ಕಾರಗಳ ಅನುದಾನ, ವಿಪತ್ತು ನಿರ್ವಹಣಾ ಅನುದಾನದ ಹೊರತಾಗಿ, ವಿದ್ಯುತ್ ವಲಯ, ಡಿಬಿಟಿ ಅಳವಡಿಕೆ, ಘನತ್ಯಾಜ್ಯ ನಿರ್ವಹಣೆ ಇತ್ಯಾದಿ ಹಲವು ಕ್ಷೇತ್ರಗಳಲ್ಲಿ ರಾಜ್ಯಗಳಿಗೆ ಕಾರ್ಯಕ್ಷಮತೆ ಪ್ರೋತ್ಸಾಹಕ ಪರೀಕ್ಷೆ ಮತ್ತು ಶಿಫಾರಸುಗಳನ್ನು ಆಯೋಗದ ವರದಿ ಹೊಂದಿದೆ. ಕೇಂದ್ರ ಸರ್ಕಾರವು 2020 ಜನವರಿ 30ರಂದು ಸಂಸತ್ತಿನಲ್ಲಿ ಮಂಡಿಸಿ, ಅಂಗೀಕರಿಸಿದೆ.
ಪ್ರತಿ ತಿಂಗಳು ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2021-22 ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಒಟ್ಟು ಪಿಡಿಆರ್‌ಡಿ ಆದಾಯ ಕೊರತೆ ಅನುದಾನದ ಮೊತ್ತವನ್ನು ಹಣಕಾಸು ಆಯೋಗ ಶಿಫಾರಸ್ಸಿನ ನಂತರ ಪ್ರಕಟಿಸಲಾಗಿದೆ.

English summary
The Department of Expenditure, Ministry of Finance, today released monthly Post Devolution Revenue Deficit (PDRD) Grant of Rs. 9,871 crore to 17 States. This was the 10th installment of the PDRD grant released to the States.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X