ರಿಲಯನ್ಸ್ ಲೈಫ್ ವಿಂಡ್ 4 ಡಿಜಿಟಲ್ ಸರೌಂಡ್ ಸೌಂಡ್ ಫೋನ್

Posted By:
Subscribe to Oneindia Kannada

ಬೆಂಗಳೂರು, ಮೇ 27: ರಿಲಯನ್ಸ್ ರಿಟೈಲ್ ಆರಂಭಿಕ ಹಂತದ ಲೈಫ್ (LYF) ವಿಂಡ್ 4 ಹ್ಯಾಂಡ್‍ಸೆಟನ್ನು 6,799 ರೂ.ಗೆ ಬಿಡುಗಡೆಗೊಳಿಸಿದೆ. ಡ್ಯುಯೆಲ್ ಸಿಮ್ ಫೋನ್ ಇದಾಗಿದ್ದು, 4,000 ಎಂಎಎಚ್ ಬ್ಯಾಟರಿ ಹೊಂದಿದ್ದು, 1ಜಿಬಿ RAM ಮತ್ತು 8ಜಿಬಿ ಇಂಟರ್ನಲ್ ಮೆಮೊರಿ ಒಳಗೊಂಡಿದೆ.

ಇದು ಡಿಜಿಟಲ್ ಡಿಟಿಎಸ್ ಸರೌಂಡ್ ತಂತ್ರಜ್ಞಾನ, ಐದು ಇಂಚಿನ ಎಲ್ಸಿಡಿ ಡಿಸ್ಪ್ಲೇ ಹೊಂದಿದೆ. ಈ ಫೋನ್ 8 ಎಂಪಿ ರೀಯರ್ ಕ್ಯಾಮರಾ ಮತ್ತು 2 ಎಂಪಿ ಫ್ರಂಟ್ ಕ್ಯಾಮರಾ ಹೊಂದಿದ್ದು, (VoLTE) ವಾಯ್ಸ್ ಓವರ್ ದೀರ್ಘಾವಧಿಯ ವಿಕಸನ ಸೌಲಭ್ಯದ ಮೂಲಕ ಹೈ ಡೆಫಿನಿಶನ್ ಧ್ವನಿ ಕರೆಯನ್ನು ಒದಗಿಸುತ್ತದೆ. [ನಮೋ ಟೆಲ್ -99 ರು ಗಳಿಗೆ ಕೊಳ್ಳಿ ಸ್ಮಾರ್ಟ್ ಫೋನ್]

ವಿಂಡ್ ಸರಣಿಯು ಲೈಫ್ ಶ್ರೇಣಿಯ ಆರಂಭಿಕ ಹಂತದ ವಿಭಾಗವಾಗಿದೆ ಮತ್ತು ಇದು ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದು, ನೋಟದ ಅನುಭವವನ್ನು ವರ್ಧಿಸಿದ ಡಿವೈಸ್ ನ ಹುಡುಕಾಟದಲ್ಲಿದ್ದ ಯುವಜನತೆಗೆ ಅಪ್ಯಾಯಮಾನವಾಗಲಿದೆ.

Reliance Retail has launched entry-level handset LYF Wind 4

ಸೆಲ್ಫಿ ಕಾರ್ಯನಿರ್ವಹಣೆಯತ್ತಲ್ಲೇ ಇತರೆ ಡಿವೈಸ್ ಗಳು ಗಮನ ಹರಿಸಿರುವಾಗ, ಲೈಫ್ ವೋಲ್ಟೆ ತಂತ್ರಜ್ಞಾನದೊಂದಿಗೆ ನೋಟದ ಅನುಭವ ವರ್ಧಿಸುವತ್ತ, ಶಕ್ತಿಶಾಲಿ ಕ್ಯಾಮರಾ, ಹಾಗೂ ಅದ್ಭುತ ಬ್ಯಾಟರಿ ಕಾರ್ಯನಿರ್ವಹಣೆಯತ್ತ ನೋಟ ಬೀರಿದೆ.ಲೈಫ್ ಹ್ಯಾಂಡ್ ಸೆಟ್ ಗಳು ಪ್ರಸ್ತುತ 5,999 ರೂ.ನಿಂದ 19,499 ರೂ. ತನಕದ ಬೆಲೆ ಶ್ರೇಣಿಯಲ್ಲಿ ಲಭ್ಯ ಇವೆ.[ಕೊಹ್ಲಿ ಹೆಸರಿನಲ್ಲಿ ಮೋಟೋ ಜಿ ಸ್ಮಾರ್ಟ್ ಫೋನ್!]

LYF (ಲೈಫ್) ಬಗ್ಗೆ: LYF ಸ್ಮಾರ್ಟ್ ಫೋನ್ + ರಿಲಯನ್ಸ್ ರಿಟೇಲ್ ನ ನೈಜ 4ಜಿ ಶ್ರೇಣಿಯ ಉಪಕರಣಗಳಾಗಿದ್ದು, ಭಾರತದ ಗ್ರಾಹಕರಿಗೆ ಅತ್ಯಾಧುನಿಕ 4ಜಿ ತಂತ್ರಜ್ಞಾನ ನೀಡುವಂತೆ ವಿನ್ಯಾಸಿಸಲ್ಪಟ್ಟಿವೆ. ಲೈಫ್ ನ ಸಂಪೂರ್ಣ ಶ್ರೇಣಿ ನೈಜ 4ಜಿ ಅನುಭವ ನೀಡುವಂತಹ ವೋಲ್ಟೆ(VoLTE) ಶಕ್ತಿ ಹೊಂದಿದೆ. ಇದುವರೆಗೆ ಯಾವುದೇ ನಿದರ್ಶನ ಇರದಂಥ, ಬೆಲೆಗೆ ತಕ್ಕ ನಿರೀಕ್ಷೆಗೂ ಮೀರಿದ ತಂತ್ರಜ್ಞಾನ ಕ್ರಾಂತಿಯನ್ನು ಈ ಉಪಕರಣಗಳು ಹೊಂದಿವೆ.

-
-
-
-

ಎಚ್ಡಿ ಧ್ವನಿ, ವೋಲ್ಟೆ ಮತ್ತು ವೈ-ಫೈ ಆಧಾರಿತ ವೀಡಿಯೊ ಕರೆಗಳು, ಮಲ್ಟಿಪಾರ್ಟಿ ಆಡಿಯೋ ಮತ್ತು ವೀಡಿಯೊ ಕಾನ್ಫೆರೆನ್ಸಿಂಗ್, ಅತಿಶೀಘ್ರದಲ್ಲಿ ಡೌನ್‍ಲೋಡ್ ಹಾಗೂ ವಾಯ್ಸ್ ಮತ್ತು ವೀಡಿಯೊ ಕರೆಗಳ ಮಧ್ಯ ತಡೆರಹಿತ ಬದಲಾವಣೆ ಮುಂತಾದ ಉತ್ಕೃಷ್ಟ ತಂತ್ರಜ್ಞಾನದ ಸೌಲಭ್ಯಗಳು ಗ್ರಾಹಕರನ್ನು ಈ ಬ್ರಾಂಡ್‍ನ ಜೊತೆಗಿರುವಂತೆ ಮಾಡುತ್ತದೆ. LYF ಶ್ರೇಣಿಯ ಸ್ಮಾರ್ಟ್ ಫೋನ್ ಗಳು ಅರ್ಥ್, ವಾಟರ್, ವಿಂಡ್ ಹಾಗೂ ಫ್ಲೇಮ್ ಎಂಬ ನಾಲ್ಕು ಸರಣಿಯಲ್ಲಿ ಲಭ್ಯ ಇರಲಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Reliance Retail has launched entry-level handset LYF Wind 4. The LYF handsets are currently available in the price range of Rs 5,599 to Rs 19,499. Wind series is the entry level segment of the LYF range
Please Wait while comments are loading...