4ಜಿ ಮೊಬೈಲ್ ವೇಗ :ರಿಲಯನ್ಸ್ ಜಿಯೋ ಮತ್ತೆ ಪ್ರಥಮ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 4: ಅತಿವೇಗದ 4ಜಿ ಸೇವೆಗಳ ಪೈಕಿ ರಿಲಯನ್ಸ್ ಜಿಯೋ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ವರದಿಯ ಪ್ರಕಾರ ಜೂನ್ ತಿಂಗಳಿನಲ್ಲಿ 18 ಮೆಗಾಬಿಟ್ ಪರ್ ಸೆಕೆಂಡ್ ಗಿಂತ (ಎಂಬಿಪಿಎಸ್) ಹೆಚ್ಚಿನ ಸರಾಸರಿ ಡೌನ್ಲೋಡ್ ವೇಗವನ್ನು ದಾಖಲಿಸುವ ಮೂಲಕ ಜಿಯೋ ಈ ಸಾಧನೆ ಮಾಡಿದೆ.

ಟ್ರಾಯ್ ಪ್ರಕಟಿಸಿರುವ ಅಂಕಿ-ಅಂಶಗಳ ಪ್ರಕಾರ ಜೂನ್ ತಿಂಗಳಿನಲ್ಲಿ ಭಾರ್ತಿ ಏರ್ಟೆಲ್ ನ ಸರಾಸರಿ ಡೌನ್ಲೋಡ್ ವೇಗ ಅತ್ಯಂತ ಕಡಿಮೆ, ಅಂದರೆ 8.91 ಎಂಬಿಪಿಎಸ್ ನಷ್ಟಿತ್ತು. ಅಂತರಜಾಲ ವೇಗವನ್ನು ಅಳೆಯುವ ಖಾಸಗಿ ಸಂಸ್ಥೆಗಳ ಪರೀಕ್ಷೆಯ ಪ್ರಕಾರ ತಮ್ಮದೇ ಅತ್ಯಂತ ವೇಗದ 4ಜಿ ಜಾಲ ಎಂದು ಏರ್ಟೆಲ್ ಹೇಳಿಕೊಳ್ಳುವುದು ಇಲ್ಲಿ ಗಮನಾರ್ಹ.

Reliance Jio tops 4G test again in June, shows TRAI data

ತಿಂಗಳ ಪ್ರಾರಂಭದಲ್ಲಿ 19.12 ಎಂಬಿಪಿಎಸ್ನಷ್ಟಿದ್ದ ಜಿಯೋ ಜಾಲದ ಸರಾಸರಿ ಡೌನ್ಲೋಡ್ ವೇಗ ಜೂನ್ ಅಂತ್ಯದವೇಳೆಗೆ ಅಲ್ಪಪ್ರಮಾಣದ ಇಳಿಕೆ ಕಂಡು 18.65 ಎಂಬಿಪಿಎಸ್ ಗೆ ತಲುಪಿತ್ತು. ಹೀಗಿದ್ದರೂ, ಜಿಯೋ ಡೌನ್ಲೋಡ್ ವೇಗ ಸಮೀಪದ ಪ್ರತಿಸ್ಪರ್ಧಿ ವೋಡಾಫೋನ್ ಗಿಂತ ಸುಮಾರು ಶೇ. 68ರಷ್ಟು ಹೆಚ್ಚಾಗಿತ್ತು.

ಕಳೆದ ಏಳು ತಿಂಗಳಿನಿಂದ ಸತತವಾಗಿ ಜಿಯೋ ಅತ್ಯಂತ ಹೆಚ್ಚು 4ಜಿ ವೇಗವನ್ನು ದಾಖಲಿಸುತ್ತ ಬಂದಿದೆ. ವಿವಿಧ ಜಾಲಗಳಿಂದ ಮಾಹಿತಿ ಸಂಗ್ರಹಿಸುವ ಟ್ರಾಯ್ 'ಮೈಸ್ಪೀಡ್' ತಂತ್ರಾಂಶದ ನೆರವಿನಿಂದ ಅದನ್ನು ತತ್ ಕ್ಷಣದಲ್ಲೇ ವಿಶ್ಲೇಷಿಸಿ ಸರಾಸರಿ ಡೌನ್ಲೋಡ್ ವೇಗವನ್ನು ಲೆಕ್ಕಹಾಕುತ್ತದೆ.

ಟ್ರಾಯ್ ಪ್ರಕಟಿಸಿರುವ ಫಲಿತಾಂಶಗಳ ಪ್ರಕಾರ ಜೂನ್ ತಿಂಗಳ ಅಂತ್ಯದಲ್ಲಿ ವೋಡಾಫೋನ್ 11.07 ಎಂಬಿಪಿಎಸ್ ಸರಾಸರಿ ಡೌನ್ಲೋಡ್ ವೇಗವನ್ನು ದಾಖಲಿಸಿದೆ. 9.46 ಎಂಬಿಪಿಎಸ್ ಸರಾಸರಿ ವೇಗದೊಡನೆ ಐಡಿಯಾ ಸೆಲ್ಯುಲರ್ ಹಾಗೂ 8.91 ಎಂಬಿಪಿಎಸ್ ನೊಡನೆ ಏರ್ಟೆಲ್ ನಂತರದ ಸ್ಥಾನಗಳಲ್ಲಿವೆ.

ಇನ್ನುಳಿದ ಜಾಲಗಳ 4ಜಿ ಮೊಬೈಲ್ ವೇಗದ ಕುರಿತ ವಿವರಗಳು ಈ ಬಾರಿ ಪ್ರಕಟವಾಗಿಲ್ಲ. 3ಜಿ ಜಾಲಗಳ ಪೈಕಿ 5.16 ಎಂಬಿಪಿಎಸ್ ಡೌನ್ಲೋಡ್ ವೇಗದೊಡನೆ ವೋಡಾಫೋನ್ ಮೊದಲ ಸ್ಥಾನ ಪಡೆದಿದೆ. 3.56 ಎಂಬಿಪಿಎಸ್ ವೇಗದೊಡನೆ ಏರ್ಟೆಲ್, 2.94 ಎಂಬಿಪಿಎಸ್ ವೇಗದೊಡನೆ ಐಡಿಯಾ, 2.39 ಎಂಬಿಪಿಎಸ್ ನೊಡನೆ ಏರ್ಸೆಲ್ ಹಾಗೂ 1.65 ಎಂಬಿಪಿಎಸ್ ನೊಡನೆ ಬಿಎಸ್ಎನ್ಎಲ್ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Reliance Jio has topped the charts again as the fastest 4G services provider by registering average download speed of over 18 megabit per second in June, as per data published by telecom regulator TRAI.
Please Wait while comments are loading...