ರಿಲಯನ್ಸ್ ಜುವೆಲ್ಸ್- ಆಸ್ಯಾ - ಐ ಆಮ್ ದಾಟ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 07: ರಿಲಯನ್ಸ್ ಜುವೆಲ್ಸ್, ಇದು ಶೇ.100ರ ಶುದ್ಧತೆ ಮತ್ತು ವಿಶಾಲ ಶ್ರೇಣಿಯ ವಿನ್ಯಾಸಗಳ ಖಾತ್ರಿ ನೀಡುವ ಮುಂಚೂಣಿ ಜುವೆಲ್ಲರಿ ಬ್ರಾಂಡ್ ಆಗಿದ್ದು, ಇದು ತನ್ನ ಹೊಚ್ಚಹೊಸ ಡಿಸೈನರ್ ಚಿನ್ನದ ಆಭರಣ ಸಂಗ್ರಹ ಆಸ್ಯಾ- ಐ ಆಮ್ ದಾಟ್' ಅನ್ನು ಬಿಡುಗಡೆಗೊಳಿಸಿದೆ.

ಇದನ್ನು ಡಿಸೈನರ್ ಗರಿಮಾ ಮಹೇಶ್ವರಿ ಅವರು ವಿಶಿಷ್ಟವಾಗಿ ರಿಲಯನ್ಸ್ ಜುವೆಲ್ಸ್ ನ 10ನೇ ವರ್ಷದ ಸಂಭ್ರಮಾಚರಣೆಗೋಸ್ಕರ ವಿನ್ಯಾಸಗೊಳಿಸಿದ್ದಾರೆ.

ಈ ಸಂಕೀರ್ಣ ವಿನ್ಯಾಸದ ಸೂಕ್ಷ್ಮ ಜುವೆಲ್ಲರಿ ಕಲೆಕ್ಷನ್ ಭಾರತೀಯ ಸಾಂಪ್ರದಾಯಿಕ ಕುಸುರಿಯನ್ನು ಸಮಕಾಲೀನ ರೂಪದಲ್ಲಿ ಪ್ರಸ್ತುತಪಡಿಸುತ್ತಿದೆ. ಪ್ರತಿಯೊಂದು ಕಲಾ ಕುಸುರಿಯ ತುಣುಕು ಆಧುನಿಕ ಮಹಿಳೆಯು ಕೆಲಸದಲ್ಲಿರಲ್ಲಿ ಅಥವಾ ಹಬ್ಬದ ಕೂಟದಲ್ಲೇ ಇರಲಿ, ಸೌಂದರ್ಯದ ಅನುಭೂತಿ ಪಡೆಯುವುದನ್ನು ಖಾತ್ರಿಪಡಿಸುತ್ತದೆ.

ಹಂಸದ ಪ್ರಚೋದಿಸುವ ಸೊಬಗನ್ನು ಹೊಂದಿದೆ, ಈ ಸೂಕ್ಷ್ಮ ಜುವೆಲ್ಲರಿ ಕಲೆಕ್ಷನ್ ಸಾಂಪ್ರದಾಯಿಕ ಸಂಕೇತಗಳನ್ನು ಆಧುನಿಕ ವಿನ್ಯಾಸಗಳೊಂದಿಗೆ ಸಮ್ಮಿಳಿತಗೊಳಿಸಿದೆ.

ಬೆಲೆಬಾಳುವ ಕಲ್ಲುಗಳಿಂದ ಅಲಂಕಾರ

ಬೆಲೆಬಾಳುವ ಕಲ್ಲುಗಳಿಂದ ಅಲಂಕಾರ

ಚಿನ್ನದ ಆಭರಣಗಳು ವರ್ಣಮಯ ಬೆಲೆಬಾಳುವ ಕಲ್ಲುಗಳಿಂದ ಅಲಂಕರಿಸಲ್ಪಟ್ಟಿರುತ್ತವೆ, ಇದು ಈ ಭವ್ಯವಾದ ಪಕ್ಷಿಯ ವಿವಿಧ ಗುಣಗಳನ್ನು ಪ್ರತಿನಿಧಿಸುತ್ತದೆ. ಈ ವಿನ್ಯಾಸಗಳು ಹಂಸದ ಹಾರುವಿಕೆ, ಕಮಲದ ಕೊಳದಲ್ಲಿನ ಈಜುವಿಕೆ, ಕತ್ತು ತಿರುಗಿಸುವಿಕೆಯ ಸಹಿತ ವೈವಿಧ್ಯಮಯ ಸ್ಥಾನಗಳು, ರೂಪಗಳು, ಅನುಭವಗಳು ಮತ್ತು ದೇಹದ ಭಾಗಗಳಿಂದ ಸ್ಫೂರ್ತಿಗೊಂಡಿವೆ.

`ಆಸ್ಯಾ' ಹಂಸದ ರೂಪಕ್ಕೆ ನಿಕಟ

`ಆಸ್ಯಾ' ಹಂಸದ ರೂಪಕ್ಕೆ ನಿಕಟ

`ಆಸ್ಯಾ' ಹಂಸದ ರೂಪಕ್ಕೆ ನಿಕಟವಾಗಿದ್ದು, ಇದರ ಸ್ಮರಣಶೀಲ ಸೌಂದರ್ಯವನ್ನು ಕುಸುರಿಗೊಳಿಸಲಾಗಿದೆ. ಶುದ್ಧ ಚಿನ್ನದ ಆಭರಣ ಸಂಗ್ರಹವು ಈ ರೆಗಲ್ ಹಕ್ಕಿಯ ಅನುಗ್ರಹವನ್ನು ಹೊಂದಿದೆ. ಭಾರತೀಯ ಪುರಾಣದಲ್ಲಿ ಅನುಗ್ರಹದ ಸಂಕೇತ, ಮತ್ತು ಲಕ್ಷ್ಮಿದೇವಿಯ ವಾಹನವಾಗಿರುವ ಈ ಹಂಸವು ಶುದ್ಧ, ಸುಂದರ, ಸ್ಮಾರ್ಟ್, ಸ್ವತಂತ್ರ ಹಾಗೂ ನಿರ್ಭೀತವಾದ ಆಧುನಿಕ ಮಹಿಳೆಯ ಪ್ರತಿಬಿಂಬವಾಗಿದೆ.

`ಬಿ ದಿ ಮೊಮೆಂಟ್' ನೊಂದಿಗೆ ಜೋಡಣೆ

`ಬಿ ದಿ ಮೊಮೆಂಟ್' ನೊಂದಿಗೆ ಜೋಡಣೆ

ಆಸ್ಯಾ ಕಲೆಕ್ಷನ್‍ನ ಟ್ಯಾಗ್‍ಲೈನ್ `ಐ ಆಮ್ ದಾಟ್', ರಿಲಯನ್ಸ್ ಜುವೆಲ್ಸ್ ನ ಅಭಿಯಾನ `ಬಿ ದಿ ಮೊಮೆಂಟ್' ನೊಂದಿಗೆ ಜೋಡಿಕೊಂಡಿದ್ದು, ಕಟ್ಟುಪಾಡುಗಳನ್ನು ಮೀರಿದ ಹಾಗೂ ಜೀವನದ ಪ್ರತಿ ಹಂತದಲ್ಲಿ ಅನುಗ್ರಹ, ಪ್ರೀತಿ, ಅದ್ಭುತವನ್ನು ಸಾಧಿಸುವ ಪ್ರತಿ ಮಹಿಳೆಯನ್ನು ಪ್ರತಿನಿಧಿಸುತ್ತದೆ.

ಇದನ್ನು ಕೇಂದ್ರ ಚಿಂತನೆಯಾಗಿಟ್ಟುಕೊಂಡು, ಪ್ರತಿ ವಯೋಮಾನ ಗುಂಪಿನ ಮಹಿಳೆಯರಿಗಾಗಿ ಆಸ್ಯಾದ ಬಹುಮುಖಿ ವಿನ್ಯಾಸ ರೂಪಿಸಲಾಗಿದ್ದು, ತಮ್ಮ ಆಭರಣದ ಕುರಿತು ಹೇಳಿಕೆಗಳನ್ನು ನೀಡುವ ಯುವತಿಯರು ಅಥವಾ ತಮ್ಮ ಪರಂಪರೆಯ ಆಭರಣವನ್ನು ಅರ್ಥ ಮಾಡಿಕೊಂಡ ಹಿರಿಯರಿಗೂ ಸೂಕ್ತವಾಗಿದೆ.

ಈ ಕಲೆಕ್ಷನ್ ವಿಶಿಷ್ಟವಾಗಿದೆ

ಈ ಕಲೆಕ್ಷನ್ ವಿಶಿಷ್ಟವಾಗಿದೆ

ಈ ಕಲೆಕ್ಷನ್ ವಿಶಿಷ್ಟವಾಗಿದೆ ಮತ್ತು ಆಧುನಿಕ ಭಾರತೀಯ ಮಹಿಳೆಯ ಮನಸ್ಸಿನ ಆದ್ಯತೆಯ ಅನುಸಾರವಾಗಿದೆ. ಸಾಂಪ್ರದಾಯಿಕ ಸಂಕೇತಗಳನ್ನು ಆಧುನಿಕ ವಿನ್ಯಾಸಗಳೊಂದಿಗೆ ಮಿಳಿತಗೊಳಿಸಲು, ಇಂದಿನ ಡೈನಾಮಿಕ್ ಭಾರತೀಯ ಮಹಿಳೆಯರ ಆಭರಣದ ಅನುಭವವನ್ನು ಮರುಕಲ್ಪಿಸಿಕೊಳ್ಳಲು ನಾವು ಬಯಸುತ್ತೇವೆ.ಈ ಕಲೆಕ್ಷನ್ ಭಾರತದಾದ್ಯಂತ ರಿಲಯನ್ಸ್ ಜುವೆಲ್ಸ್ ಶೋರೂಮ್‍ಗಳಲ್ಲಿ ವಿಶಿಷ್ಟವಾಗಿ ಲಭ್ಯವಿದೆ- ಸುನಿಲ್ ನಾಯಕ್, ಸಿಇಒ, ರಿಲಯನ್ಸ್ ಜುವೆಲ್ಸ್,

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Reliance Jewels has launched its latest designer gold jewellery collection called ‘ASYA- I am that’ designed by the talented designer Garima Maheshwari exclusively for Reliance Jewels.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ