ರಿಲಯನ್ಸ್ -ಫಾಸಿಲ್ ಸ್ಮಾರ್ಟ್ ವಾಚುಗಳು ಮಾರುಕಟ್ಟೆಗೆ
ಬೆಂಗಳೂರು, ನವೆಂಬರ್ 30: ರಿಲಯನ್ಸ್ ಡಿಜಿಟಲ್, ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಸರಣಿ, ಮುಂಚೂಣಿ ವಾಚ್ ರಿಟೈಲರ್ ಫಾಸಿಲ್ ಇಂಡಿಯಾ ಪ್ರೈ.ಲಿ.ನೊಂದಿಗೆ ಕೈಜೋಡಿಸಿದೆ. ವೇರಬಲ್ ಟೆಕ್ ಹೆಸರಿನಲ್ಲಿ ಎಲ್ಲಾ ಮಳಿಗೆಗಳಲ್ಲಿ ಸ್ಮಾರ್ಟ್ ವಾಚ್‍ಗಳ ಶ್ರೇಣಿಯನ್ನು ಬಿಡುಗಡೆಗೊಳಿಸಿದೆ.
ರಿಲಯನ್ಸ್ ಡಿಜಿಟಲ್‍ನ ಗ್ರಾಹಕ ಡಿಜಿಟಲ್/ ಟೆಕ್ ಜೀವನಶೈಲಿಯತ್ತ ತಲುಪುವ ಪ್ರಯತ್ನ ಇದಾಗಿದೆ. ಫಾಸಿಲ್ ಕ್ಯೂ, ಎಸ್‍ಕಾಜೆನ್ ಕನೆಕ್ಟೆಡ್, ಮೈಕೆಲ್ ಕೋರ್ಸ್ ಆಕ್ಸೆಸ್, ಮಿಸ್‍ಫಿಟ್ ಮತ್ತು ಡೀಸೆಲ್ ಆನ್ ನಂಥ ಬ್ರಾಂಡ್‍ನ ಸೇರ್ಪಡೆ ಕಾಣಬಹುದಾಗಿದೆ.

ಈಗಾಗಲೇ ದೃಢವಾಗಿರುವ ವೇರೇಬಲ್ ತಂತ್ರಜ್ಞಾನ ಫೋರ್ಟ್‍ಫೋಲಿಯೋಕ್ಕೆ ಕೇವಲ ಫ್ಯಾಶನ್ ಆಯಾಮವನ್ನಷ್ಟೇ ಸೇರಿಸಿಲ್ಲ, ಜತೆಗೆ ಒಂದೇ ಸೂರಿನಡಿಯಲ್ಲಿ ಫ್ಯಾಶನ್ ಮತ್ತು ತಂತ್ರಜ್ಞಾನದ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ಮೂಲಕ ಅವರಿಗೆ ನೀಡುವಿಕೆಗಳನ್ನು ವರ್ಧಿಸಿದೆ.
ರಿಲಯನ್ಸ್ ಡಿಜಿಟಲ್‍ನೊಂದಿಗಿನ ಈ ಸಹಭಾಗಿತ್ವವು ಫಾಸಿಲ್ ಇಂಡಿಯಾ ಪ್ರೈ.ಲಿನ ವಿತರಣಾ ರೀಚ್ ಮತ್ತು ಅಸ್ತಿತ್ವವನ್ನು ದೇಶದಲ್ಲಿ ಬಲಗೊಳಿಸುದ್ದಷ್ಟೇ ಅಲ್ಲದೆ, ಜತೆಗೆ ಹೊಸ ಗ್ರಾಹಕ ವಿಭಾಗವನ್ನು ತಲುಪಲು ಹಾಗೂ ಅವರೊಂದಿಗೆ ಸಂವಾದ ನಡೆಸಲು ಸಾಧ್ಯವಾಗಿದೆ.
ಬ್ರಿಯಾನ್ ಬೇಡ್, ಸಿಇಒ - ರಿಲಯನ್ಸ್ ಡಿಜಿಟಲ್ ಮಾತನಾಡಿ, ರಿಲಯನ್ಸ್ ಡಿಜಿಟಲ್‍ನಲ್ಲಿ, ನಾವು ನಮ್ಮ ಗ್ರಾಹಕರಿಗೆ ಅತ್ಯುತ್ತಮ ದರ್ಜೆಯ ಡಿಜಿಟಲ್ ಲೈಫ್‍ಸ್ಟೈಲ್ ಆಫರ್ ನೀಡಲು ಶ್ರಮಿಸುತ್ತೇವೆ. ವೇರೇಬಲ್ ಟೆಕ್' ವೇಗವಾಗಿ ಅಗತ್ಯತೆಯಾಗುತ್ತಿದ್ದು, ಇದು ನಮ್ಮ ಗ್ರಾಹಕರಿಗೆ ಒಂದೇ ಸೂರಿನಡಿಯಲ್ಲಿ ವಿಶಾಲ ಶ್ರೇಣಿಯ ಆಯ್ಕೆಯನ್ನು ನೀಡುತ್ತಿರುವ ನಮ್ಮ ದೃಢ ಟೆಕ್ ಪೋರ್ಟ್‍ಫೋಲಿಯೋಗೆ ಫಾಸಿಲ್ ಸ್ಮಾರ್ಟ್ ವಾಚ್‍ಗಳ ಸೇರ್ಪಡೆಯಾಗಿದೆ'' ಎಂದರು.












Click it and Unblock the Notifications