• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಾತಂತ್ರ್ಯದಿನಕ್ಕಾಗಿ ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್

|

ಮುಂಬೈ, ಆಗಸ್ಟ್ 10: ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಲು ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್ ಅನ್ನು ಮತ್ತೊಮ್ಮೆ ಹೊರ ತಂದಿದೆ.

ಈ ವಾರ್ಷಿಕ ಮಾರಾಟವು ತಂತ್ರಜ್ಞಾನದ ಅತ್ಯುತ್ತಮ ಡೀಲ್‌ಗಳನ್ನು ಹಾಗೂ ಅತಿದೊಡ್ಡ ಕೊಡುಗೆಗಳನ್ನು ಪ್ರತಿವರ್ಷವೂ ಗ್ರಾಹಕರಿಗೆ ನೀಡುತ್ತದೆ.

ಭಾರತದ 17 ನಗರಗಳಲ್ಲಿ ಗ್ರೇಟ್ ಇಂಡಿಯನ್ ರೆಸ್ಟೋರೆಂಟ್ ಫೆಸ್ಟಿವಲ್

ಈ ವರ್ಷದ ಸ್ವಾತಂತ್ರ್ಯ ದಿನ ಸಂದರ್ಭದಲ್ಲಿ, ಇಲೆಕ್ಟ್ರಾನಿಕ್ಸ್‌ನ ವ್ಯಾಪಕ ಶ್ರೇಣಿಯ ಮೇಲೆ ಗ್ರಾಹಕರು 15% ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಆನಂದಿಸಲಿದ್ದಾರೆ. ಈ ಕೊಡುಗೆಯು 10% ಎಚ್‌ಡಿಎಫ್‌ಸಿ ಕ್ಯಾಶ್‌ಬ್ಯಾಕ್ ಹಾಗೂ 5% ರಿಲಯನ್ಸ್ ಡಿಜಿಟಲ್ ಕ್ಯಾಶ್‌ಬ್ಯಾಕ್ ಅನ್ನು ಒಳಗೊಂಡಿದೆ.

360ಕ್ಕೂ ಹೆಚ್ಚಿನ ರಿಲಯನ್ಸ್ ಡಿಜಿಟಲ್ ಮಳಿಗೆಗಳು, 2200ಕ್ಕೂ ಹೆಚ್ಚಿನ ಮೈಜಿಯೋ ಮಳಿಗೆಗಳು ಹಾಗೂ ರಿಲಯನ್ಸ್ ಡಿಜಿಟಲ್‌ನ ಅಧಿಕೃತ ಜಾಲತಾಣದ ಮೂಲಕ ಈ ಕೊಡುಗೆ ದೊರಕಲಿದೆ.

ಜಿಯೋ ಜೊತೆ ಕೈಜೋಡಿಸಿದ ಪಬ್‌ಜಿ ಕಾರ್ಪ್, ಉಚಿತ ಗಿಫ್ಟ್ ಕೊಡುಗೆ

ಈ ಬ್ಲಾಕ್‌ಬಸ್ಟರ್ ಡೀಲ್‌ಗಳು ಆಗಸ್ಟ್ 10ರಿಂದ ಆಗಸ್ಟ್ 15, 2019ರವರೆಗೆ ಲಭ್ಯವಿರಲಿವೆ. ಅತ್ಯುತ್ತಮ ಡೀಲ್‍ಗಳು, ತಂತ್ರಜ್ಞಾನದ ವಿಸ್ತಾರವಾದ ಶ್ರೇಣಿ ಹಾಗೂ 'ಅಬ್ ಇಂಡಿಯಾ ಬದಲೇಗಾ' (ಈಗ ಭಾರತ ಬದಲಾಗುತ್ತದೆ) ಎನ್ನುವ ತನ್ನ ಉದ್ದೇಶದೊಂದಿಗೆ ರಿಲಯನ್ಸ್ ಡಿಜಿಟಲ್ ಲಕ್ಷಾಂತರ ಭಾರತೀಯರ ಇಲೆಕ್ಟ್ರಾನಿಕ್ಸ್ ಕನಸುಗಳನ್ನು ನನಸುಮಾಡಲು ಹೊರಟಿದೆ.

ಉನ್ನತ ಶ್ರೇಣಿಯ ಟಿವಿಗಳ ಮೇಲಿನ ಕೊಡುಗೆಗಳು

ಉನ್ನತ ಶ್ರೇಣಿಯ ಟಿವಿಗಳ ಮೇಲಿನ ಕೊಡುಗೆಗಳು

ಉನ್ನತ ಶ್ರೇಣಿಯ ಟಿವಿಗಳ ಮೇಲಿನ ಕೊಡುಗೆಗಳು, ಡಿಜಿಟಲ್ ಇಂಡಿಯಾ ಸೇಲ್‌ನ ಪ್ರಮುಖಾಂಶಗಳ ಪೈಕಿ ಕೆಲವು.

ರೂ. 39,900ರಿಂದ ಪ್ರಾರಂಭವಾಗುವ 55 ಇಂಚ್ ಟೀವಿ, ರೂ. 59,990ರಿಂದ ಪ್ರಾರಂಭವಾಗುವ 65 ಇಂಚ್ ಟೀವಿ ಹಾಗೂ ರೂ. 10,990ರ ನಂಬಲಾಗದ ಬೆಲೆಯಲ್ಲಿ ದೊರಕಲಿರುವ 32 ಇಂಚ್ ಸ್ಮಾರ್ಟ್ ಟೀವಿಯಂತಹ ಹಲವು ಆಕರ್ಷಕ ಕೊಡುಗೆಗಳನ್ನು ಈ ಸೇಲ್ ಒಳಗೊಂಡಿದೆ.

ರೆಫ್ರಿಜರೇಟರ್ ಹಾಗೂ ವಾಶಿಂಗ್ ಮಶೀನು

ರೆಫ್ರಿಜರೇಟರ್ ಹಾಗೂ ವಾಶಿಂಗ್ ಮಶೀನು

ರಿಲಯನ್ಸ್ ಡಿಜಿಟಲ್ ಸಂಸ್ಥೆಯು ರೆಫ್ರಿಜರೇಟರ್ ಹಾಗೂ ವಾಶಿಂಗ್ ಮಶೀನುಗಳ ಮೇಲೂ ಗಮನಸೆಳೆಯುವ ಕೊಡುಗೆಗಳನ್ನು ನೀಡುತ್ತಿದೆ. ತಮ್ಮ ರೆಫ್ರಿಜರೇಟರುಗಳನ್ನು ಬದಲಿಸುವ ಇಚ್ಛೆಯುಳ್ಳವರು ಈ ಸೇಲ್ ಸಂದರ್ಭದಲ್ಲಿ ಸೈಡ್-ಬೈ-ಸೈಡ್ ರೆಫ್ರಿಜರೇಟರುಗಳನ್ನು ರೂ. 44,990ರಿಂದ ಪ್ರಾರಂಭವಾಗುವ ಬೆಲೆಯಲ್ಲಿ ಕೊಳ್ಳಬಹುದಾಗಿದೆ. ವಾಶಿಂಗ್ ಮಶೀನ್ ಕೊಳ್ಳಬಯಸುವವರಿಗೆ ಫ್ರಂಟ್-ಲೋಡ್ ಮಶೀನುಗಳು ರೂ. 16,990ರಿಂದ ಪ್ರಾರಂಭವಾಗುವ ಬೆಲೆಯಲ್ಲಿ ದೊರಕುತ್ತಿವೆ.

ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ಭಾರಿ ರಿಯಾಯಿತಿ

ಲ್ಯಾಪ್‌ಟಾಪ್‌ಗಳ ಖರೀದಿ ಮೇಲೆ ಭಾರಿ ರಿಯಾಯಿತಿ

Mega deal:1.5 ಟನ್ 3-ಸ್ಟಾರ್ ಇನ್ವರ್ಟರ್ ಎಸಿ ಕೊಂಡಾಗ, ರೂ. 10,490 ಮೌಲ್ಯದ ಎಲ್‌ಜಿ ರೆಫ್ರಿಜರೇಟರ್ ಅನ್ನು ರಿಲಯನ್ಸ್ ಡಿಜಿಟಲ್ ಉಚಿತವಾಗಿ ನೀಡುತ್ತಿದೆ. ಇತ್ತೀಚಿನ ಮಾದರಿಯ ಲ್ಯಾಪ್‌ಟಾಪ್‌ಗಳ ಖರೀದಿಯ ಮೇಲೆ ಗ್ರಾಹಕರು ಒಂದೆರಡಲ್ಲ, ಆರು ಅಚ್ಚರಿಯ ಕೊಡುಗೆಗಳನ್ನು ಪಡೆಯಬಹುದು.

ಡಿಜಿಟಲ್ ಇಂಡಿಯಾ ಸೇಲ್ ಸಮಯದಲ್ಲಿ ಲ್ಯಾಪ್‌ಟಾಪ್‌ಗಳು ವಿಶೇಷ ಬೆಲೆಗಳಲ್ಲಿ ದೊರಕಲಿದ್ದು, ರೂ. 55,999ರಿಂದ ಪ್ರಾರಂಭವಾಗುವ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಜೊತೆಯಲ್ಲಿ ರೂ. 13,000 ಮೌಲ್ಯದ ಖಚಿತ ಲಾಭಗಳೂ ಸಿಗಲಿವೆ. ಖಚಿತ ಉಡುಗೊರೆಗಳು, ಅದ್ಭುತ ಕ್ಯಾಶ್‌ಬ್ಯಾಕ್ ಕೊಡುಗೆಗಳು, ಅತ್ಯುತ್ತಮ ಎಕ್ಸ್‌ಚೇಂಜ್ ಆಫರ್‌ಗಳು ಹಾಗೂ ಉಚಿತ ಶಾಪಿಂಗ್ ವೋಚರ್‌‌ಗಳು ದೊರಕುವಾಗ, ನಿಮ್ಮ ಲ್ಯಾಪ್‌ಟಾಪ್ ಅನ್ನು ಉನ್ನತೀಕರಿಸಲು ಇದು ಸರಿಯಾದ ಸಮಯ.

ಸ್ಮಾರ್ಟ್‌ಫೋನ್ ವಿಭಾಗದಲ್ಲೂ ಅನೇಕ ಆಫರ್

ಸ್ಮಾರ್ಟ್‌ಫೋನ್ ವಿಭಾಗದಲ್ಲೂ ಅನೇಕ ಆಫರ್

ಸ್ಮಾರ್ಟ್‌ಫೋನ್ ವಿಭಾಗದಲ್ಲೂ ಕಾದುನೋಡಬೇಕಾದ ಹಲವು ಸಂಗತಿಗಳಿವೆ. ರೂ. 9,999ಕ್ಕೆ ಮೋಟೋ ಜಿ6 ಪ್ಲಸ್ (6ಜಿಬಿ) ಹಾಗೂ ರೂ. 19,999ಕ್ಕೆ ಒಪ್ಪೋ ಆರ್17(8ಜಿಬಿ)ನಂತಹ ಕೊಡುಗೆಗಳಿರುವಾಗ ಸ್ಮಾರ್ಟ್‌ಫೋನ್ ಅಪ್‌ಗ್ರೇಡ್ ಮಾಡಲು ಇದು ಒಳ್ಳೆಯ ಸಮಯವೆಂದೇ ಹೇಳಬಹುದು. ಗ್ರಾಹಕರು ಯಾವುದೇ ಇಲೆಕ್ಟ್ರಾನಿಕ್ಸ್‌ ಖರೀದಿ ನಿರೀಕ್ಷೆಯಲ್ಲಿದ್ದರೂ, ಈ ಸ್ವಾತಂತ್ರ್ಯ ದಿನದಂದು ರಿಲಯನ್ಸ್ ಡಿಜಿಟಲ್ ಅವರಿಗೆ ಅದಕ್ಕಾಗಿ ಶೂನ್ಯ ಡೌನ್ ಪೇಮೆಂಟ್ ಹಾಗೂ ಸುಲಭ ಇಎಂಐ‌ಗಳಂತಹ ಅದ್ಭುತ ಫೈನಾನ್ಸ್ ಆಯ್ಕೆಗಳನ್ನು ನೀಡುತ್ತಿದೆ.

English summary
Reliance Digital has flagged off the latest edition of its annual Digital India Sale to celebrate Independence Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X