ಆದಾಯ ತೆರಿಗೆ ಫಾರ್ಮ್15ಸಿ.ಎ/15 ಸಿ.ಬಿ. ಸಲ್ಲಿಕೆ ರಿಯಾಯಿತಿ
ನವದೆಹಲಿ, ಜೂನ್ 14: ಆದಾಯ ತೆರಿಗೆ ಕಾಯ್ದೆ 1961 ರನ್ವಯ ಫಾರಂ 15 ಸಿಎ /15 ಸಿಬಿ ಗಳನ್ನು ವಿದ್ಯುನ್ಮಾನ ಮೂಲಕ ಸಲ್ಲಿಸಬೇಕಾಗಿರುತ್ತದೆ. ಪ್ರಸ್ತುತ ತೆರಿಗೆ ಪಾವತಿದಾರರು ಎಲ್ಲೆಲ್ಲಿ ಅನ್ವಯವಾಗುತ್ತದೋ ಅಲ್ಲಿ ಫಾರಂ 15 ಸಿ.ಎ.ಯನ್ನು ಫಾರಂ 15 ಸಿ.ಬಿ.ಯಲ್ಲಿ ಲೆಕ್ಕ ಪರಿಶೋಧಕರ ಪ್ರಮಾಣ ಪತ್ರದೊಂದಿಗೆ ಇ-ಸಲ್ಲಿಕೆ ಪೋರ್ಟಲಿನಲ್ಲಿ ಅಪ್ಲೋಡ್ ಮಾಡಬೇಕಾಗಿರುತ್ತದೆ. ಯಾವುದೇ ವಿದೇಶಿ ವಹಿವಾಟಿಗಾಗಿ ಅಧಿಕೃತ ಡೀಲರಿಗೆ ಪ್ರತಿಯನ್ನು ಸಲ್ಲಿಕೆ ಮಾಡುವುದಕ್ಕೆ ಮೊದಲು ಈ ನಿಯಮವನ್ನು ಪಾಲಿಸಬೇಕಾಗಿರುತ್ತದೆ.
ಹೊಸ ಪೋರ್ಟಲ್ www.incometax.gov.in ರಲ್ಲಿ ಆದಾಯ ತೆರಿಗೆ ಫಾರಂಗಳಾದ 15 ಸಿ.ಎ./15 ಸಿ.ಬಿ.ಗಳನ್ನು ವಿದ್ಯುನ್ಮಾನ ಸಲ್ಲಿಕೆ ಮಾಡುವಾಗ ತೆರಿಗೆದಾರರು ಸಮಸ್ಯೆಯಾಗುತ್ತಿರುವ ಬಗ್ಗೆ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ, ಮೇಲ್ಕಾಣಿಸಿದ ಫಾರಂಗಳನ್ನು ತೆರಿಗೆ ಪಾವತಿದಾರರು 2021 ರ ಜೂನ್ 30 ರವರೆಗೆ ಅಧಿಕೃತ ಡೀಲರುಗಳಿಗೆ ಮ್ಯಾನುವಲ್ ಮಾದರಿಯಲ್ಲಿ ಸಲ್ಲಿಸಬಹುದೆಂದು ನಿರ್ಧರಿಸಲಾಗಿದೆ.

ಅಧಿಕೃತ ಡೀಲರುಗಳಿಗೆ ಇಂತಹ ಫಾರಂಗಳನ್ನು ವಿದೇಶೀ ವಹಿವಾಟಿಗಾಗಿ 2021 ರ ಜೂನ್ 30 ರವರೆಗೆ ಅಂಗೀಕರಿಸುವಂತೆ ಸಲಹೆ ಮಾಡಲಾಗಿದೆ. ಹೊಸ ಇ-ಫೈಲಿಂಗ್ (ವಿದ್ಯುನ್ಮಾನ ಫೈಲಿಂಗ್) ಪೋರ್ಟಲಿನಲ್ಲಿ ಈ ಫಾರಂಗಳನ್ನು ಬಳಿಕದ ದಿನಾಂಕಗಳಲ್ಲಿ ಅಪ್ಲೋಡ್ ಮಾಡಲು ಹೊಸ ಸವಲತ್ತನ್ನು ಒದಗಿಸಲಾಗುವುದು. ದಾಖಲೆ ಗುರುತಿಸುವಿಕೆ ಸಂಖ್ಯೆಯನ್ನು ಪಡೆಯಲು ಇದರಿಂದ ಸಾಧ್ಯವಾಗಲಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications