ಭಾರತದ ಜಿಡಿಪಿ ದರ ಶೇ. 7.2: ಆರ್‌ಬಿಐ ಅಂದಾಜಿನಲ್ಲಿ ಇಲ್ಲ ಬದಲಾವಣೆ
ನವದೆಹಲಿ, ಜೂನ್ 8: ಜಾಗತಿಕ ವಿದ್ಯಮಾನ, ಹಣದುಬ್ಬರ ಇತ್ಯಾದಿ ಸಮಸ್ಯೆಗಳಿಂದ ಭಾರತದ ಆರ್ಥಿಕ ಚೇತರಿಕೆ ವೇಗ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಆಗಬಹುದು ಎಂದು ಅನೇಕ ರೇಟಿಂಗ್ ಸಂಸ್ಥೆಗಳು ಅಂದಾಜು ಮಾಡಿವೆ. ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಿಂದಿನ ಅಂದಾಜನ್ನೇ ಉಳಿಸಿಕೊಂಡಿದೆ. ಭಾರತದ ಜಿಡಿಪಿ ಶೇ. 7.2ರ ದರದಲ್ಲಿ ಪ್ರಗತಿ ಕಾಣಬಹುದು ಎಂದು ಈ ಹಿಂದಿನ ಲೆಕ್ಕಾಚಾರದಲ್ಲಿ ಆರ್‌ಬಿಐ ಅಂದಾಜು ಮಾಡಿತ್ತು. ಇಂದು ಬುಧವಾರ ಬೆಳಗ್ಗೆ ಎಂಪಿಸಿ ಸಭೆಯಲ್ಲಿ ಆರ್‌ಬಿಐ ಇದೇ ನಿಲುವಿಗೆ ಬದ್ಧವಾಗಿದೆ.
ಆರ್‌ಬಿಐ ಅಂದಾಜಿನ ಪ್ರಕಾರ ಈ ಹಣಕಾಸು ವರ್ಷದ ನಾಲ್ಕು ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಕ್ರಮೇಣ ಇಳಿಮುಖವಾಗಬಹುದು ಎಂದು ಹೇಳಲಾಗಿದೆ. ಮೊದಲ ಅವಧಿಯಲ್ಲಿ ಶೇ. 16.1 ಇದ್ದರೆ ಎರಡನೇ ಅವಧಿಯಲ್ಲಿ ಶೇ. 6.2, ಮೂರನೇ ಅವಧಿಯಲ್ಲಿ ಶೇ. 4.1 ಮತ್ತು ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಶೇ. 4ರಷ್ಟು ಬೆಳವಣಿಗೆ ಆಗಬಹುದು ಎಂದು ಭಾವಿಸಲಾಗಿದೆ.
ಕೋವಿಡ್ ಸಾಂಕ್ರಾಮಿಕತೆಯ ತೀವ್ರತೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ದೈಹಿಕ ಸಂಪರ್ಕವಿರುವ ಸೇವೆಗಳ ಪ್ರಮಾಣ ಹೆಚ್ಚುತ್ತಿರುವುದು ನಗರವಾಸಿಗಳ ಅನುಭೋಗಕ್ಕೆ ಪುಷ್ಟಿ ಸಿಗುವ ಸಾಧ್ಯತೆ ಇದೆ. ಕೃಷಿ ವಲಯದಲ್ಲಿ ಕಾಣುತ್ತಿರುವ ಪ್ರಗತಿ ಮತ್ತು ಉತ್ತಮ ಮುಂಗಾರು ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳು ಗರಿಗೆದರಬಹುದು ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನಿರೀಕ್ಷಿಸಿದ್ದಾರೆ.

ಆರ್‌ಬಿಐ ಸದ್ಯ ಸತತ ಎರಡು ಬಾರಿ ಬಡ್ಡಿ ದರಗಳನ್ನು ಹೆಚ್ಚಿಸಿದೆ. ಕೋವಿಡ್ ಸಾಂಕ್ರಾಮಿಕ ಸ್ಥಿತಿ ವಕ್ಕರಿಸಿಕೊಂಡ ಬಳಿಕ ಆರ್‌ಬಿಐ ಹಲವು ಬಾರಿ ರೆಪೋ ಮತ್ತಿತರ ದರಗಳನ್ನು ಇಳಿಸುತ್ತಾ ಬಂದಿತ್ತು. ಕಳೆದ ಬಾರಿ ನಡೆದ ಎಂಪಿಸಿ ಸಭೆಯಲ್ಲಿ ರೆಪೋ ದರ ಏರಿಸುವ ನಿರ್ಧಾರ ಮಾಡಲಾಯಿತು. ಇಂದು ಬುಧವಾರವೂ ಕೂಡ ರೆಪೋ ದರದ ಏರಿಕೆ ಆಗಿದೆ. ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಆರ್‌ಬಿಐ ತೆಗೆದುಕೊಂಡ ಈ ಕ್ರಮ ನಿರೀಕ್ಷಿತವಾಗಿಯೇ ಇದೆ.
ನಿನ್ನೆ ಮಂಗಳವಾರ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಜಿಡಿಪಿ ವೃದ್ಧಿ ದರ ವಿಚಾರದಲ್ಲಿ ತಾನು ಮಾಡಿದ್ದ ಅಂದಾಜನ್ನು ತುಸು ತಗ್ಗಿಸಿದೆ. ಈ ಹಿಂದೆ ಶೇ. 9ರಷ್ಟು ಜಿಡಿಪಿ ಬೆಳವಣಿಗೆ ಆಗಬಹುದು ಎಂದು ನಿರೀಕ್ಷಿಸಿದ್ದ ಐಎಂಎಫ್ ಇದೀಗ ಆ ದರವನ್ನು ಶೇ. 8.2ಕ್ಕೆ ತಗ್ಗಿಸಿ ಅಂದಾಜು ವ್ಯಕ್ತಪಡಿಸಿದೆ.

ಮೂಡೀಸ್, ಎಸ್ ಅಂಡ್ ಪಿ ಗ್ಲೋಬರ್ ರೇಟಿಂಗ್, ಫಿಚ್, ಎಡಿಬಿ ಮೊದಲಾದ ಸಂಸ್ಥೆಗಳೂ ಕೂಡ ಭಾರತದ ಜಿಡಿಪಿ ನಿರೀಕ್ಷಿತ ಮಟ್ಟದಲ್ಲಿ ವೃದ್ಧಿಕಾಣುವುದಿಲ್ಲ ಎಂಬ ಅಭಿಪ್ರಾಯಕ್ಕೆ ಬಂದಿವೆ.
(ಒನ್ಇಂಡಿಯಾ ಸುದ್ದಿ)
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications