ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾನ್ ಕಾರ್ಡ್ ಇಲ್ಲದೆ ಹಣ ಜಮಾ ಮಾಡಿದವರಿಗೆ ಕಷ್ಟಕಾಲ!

ಇದ್ದಕ್ಕಿದ್ದಂತೆ ಕೆಲವರ ಬ್ಯಾಂಕ್ ಖಾತೆಯಲ್ಲಿ ಧನಾಧನ್ ಅಂತ ಬ್ಯಾಲೆನ್ಸ್ ಹೆಚ್ಚಾಗುತ್ತದೆ, ದಿನ ಬೆಳಗಾಗುವುದರೊಳಗೆ ಶ್ರೀಮಂತರಾಗುತ್ತಾರೆ. ಆದ್ರೆ, ಆ ಹಣಾನ ಈಗ ವಾಪಸ್ಸು ಪಡಕೊಳೋದು ಕಷ್ಟ ಕಷ್ಟ! ರಿಸರ್ವ್ ಬ್ಯಾಂಕಿಗೇನು ಅಷ್ಟು ಬುದ್ದಿ ಇಲ್ವಾ!

By Mahesh
|
Google Oneindia Kannada News

ನವದೆಹಲಿ, ಡಿಸೆಂಬರ್ 16: ಬ್ಯಾಂಕ್ ಖಾತೆಯಿಂದ ಹಣ ವಿಥ್ ಡ್ರಾ ಮಾಡುವ ಗ್ರಾಹಕರ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಕೆಲ ನಿರ್ಬಂಧಗಳನ್ನು ಹೇರಿದೆ.

500 ರೂ. ಹಾಗೂ 1000 ರೂ. ನೋಟು ನಿಷೇಧದ ಬಳಿಕ (ನವೆಂಬರ್ 9ರ ನಂತರ) ಪ್ಯಾನ್ ಕಾರ್ಡ್ ಇಲ್ಲದೆ, ಬ್ಯಾಂಕ್ ಖಾತೆಗೆ 2 ಲಕ್ಷ ರುಗೂ ಅಧಿಕ ಮೊತ್ತ ಜಮೆ ಮಾಡಿದವರಿಗೆ ನಿರ್ಬಂಧ ಅನ್ವಯವಾಗಲಿದೆ.

* ನವೆಂಬರ್ 9ರ ನಂತರ 2 ಲಕ್ಷ ರೂ. ಗಿಂತಲೂ ಹೆಚ್ಚಿನ ಹಣವನ್ನು ಬ್ಯಾಂಕ್ ಖಾತೆಗಳಿಗೆ ಡೆಪಾಸಿಟ್ ಮಾಡಿದವರ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ರೂ. ಗಿಂತಲೂ ಹೆಚ್ಚಿನ ಹಣ ಇದ್ದಲ್ಲಿ, ಅಂಥ ಖಾತೆದಾರರು ಸುಲಭವಾಗಿ ವಿಥ್ ಡ್ರಾ ಮಾಡಲಾಗುವುದಿಲ್ಲ.

RBI Imposes Restrictions on Withdrawal From Certain Bank Accounts

* ಇಂಥ ಖಾತೆದಾರರು ಪ್ಯಾನ್ ನಂಬರ್ ಅಥವಾ ಫಾರ್ಮ್ 60 (ಪ್ಯಾನ್ ನಂಬರ್ ಇಲ್ಲದಿರುವವರಿಗೆ) ಯನ್ನು ನೀಡಿದರೆ ಮಾತ್ರ ಹಣ ವಿಥ್ ಡ್ರಾ ಮಾಡಬಹುದು. ಇಲ್ಲದಿದ್ದಲ್ಲಿ ಹಣ ವರ್ಗಾವಣೆ ಅಥವಾ ವಿಥ್ ಡ್ರಾ ಸಾಧ್ಯವಿಲ್ಲ.

* ಒಂದೊಮ್ಮೆ ಸಣ್ಣ ಖಾತೆಗಳಲ್ಲಿ ವಾರ್ಷಿಕ ಠೇವಣಿ ಮಿತಿ 1 ಲಕ್ಷ ರೂ. ದಾಟಿದರೂ ಮಾಸಿಕ ಹಿಂಪಡೆತ ಮಿತಿ 10,000 ರೂ. ಇರಬೇಕು.

* ಕೆವೈಸಿ (know your customer) ಚೆಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ.

* ಮೇಲ್ಕಂಡ ನಿಯಮಗಳನ್ನು ಪಾಲಿಸದ ಖಾತೆಗಳಿಂದ ಹಣ ವಿಥ್ ಡ್ರಾ, ಜಮೆ ಅಥವಾ ಯಾವುದೇ ವ್ಯವಹಾರ ಸಾಧ್ಯವಿಲ್ಲ.

ನೋಟು ನಿಷೇಧದ ನಂತರ ಕೆಲ ಖಾತೆಗಳಿಗೆ ಲೆಕ್ಕವಿಲ್ಲದಂತೆ ಹಣ ಜಮೆಯಾಗುತ್ತಿರುವುದು, ಜನ್ ಧನ್ ಖಾತೆ ದುರುಪಯೋಗ ತಡೆಗಟ್ಟಲು ಆರ್ ಬಿಐ ಈ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ.

English summary
Tightening the noose around people who misused banking channels to park unaccounted money, the Reserve Bank today imposed certain restrictions on withdrawal if more than Rs 2 lakh has been deposited after November 9 in an account which has a balance of over Rs 5 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X