• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾರ್ಪೋರೇಟ್‌ NBFCಗಳನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಯೋಜನೆಗೆ ರಘುರಾಮ್ ರಾಜನ್ ವಿರೋಧ

|

ನವದೆಹಲಿ, ನವೆಂಬರ್ 23: ಬ್ಯಾಂಕೇತರ ಹಣಕಾಸು ಸಂಸ್ಥೆಗಳನ್ನು, ಕಾರ್ಪೋರೇಟ್ ಕಂಪನಿಗಳು ನಡೆಸುತ್ತಿರುವ ಎನ್‌ಬಿಎಫ್‌ಸಿಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲು, ಆರ್‌ಬಿಐ ಆಂತರಿಕ ಕಾರ್ಯಕಾರಿ ಸಮಿತಿ ನೀಡಿರುವ ಸಲಹೆಯನ್ನು ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಸೋಮವಾರ ವಿರೋಧಿಸಿದ್ದಾರೆ.

ಆರ್‌ಬಿಐನ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತಂದರೆ ವಿನಾಶಕಾರಿ ಎಂದು ರಾಜನ್ ಭಾವಿಸಿದ್ದಾರೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಆಸ್ತಿಯ ಒಟ್ಟು ಮೊತ್ತವು 50 ಸಾವಿರ ಕೋಟಿಗಿಂತ ಹೆಚ್ಚಿದ್ದರೆ, ಅವುಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಬಹುದು ಎಂದು ಆರ್‌ಬಿನ ಆಂತರಿಕ ಸಮಿತಿ ಸಲಹೆಯನ್ನು ಕೊಟ್ಟಿದೆ. ಕಾರ್ಪೋರೇಟ್ ಕಂಪನಿಗಳು ನಡೆಸುತ್ತಿರುವ ಎನ್‌ಬಿಎಫ್‌ಸಿಗಳನ್ನು ಬ್ಯಾಂಕ್ ಆಗಿ ಪರಿವರ್ತಿಸಲು ಪರಿಗಣಿಸಬಹುದು. ಆದರೆ ಅವು ಕನಿಷ್ಠ 10 ವರ್ಷಗಳಿಂದ ವಹಿವಾಟು ನಡೆಸುತ್ತಿರಬೇಕು ಎಂದಿದೆ.

ಟ್ವಿಟ್ಟರಲ್ಲಿ ವಿಶ್ವದಾಖಲೆ ಬರೆದ ಆರ್‌ಬಿಐನಿಂದ ಹೊಸ ವಿಕ್ರಮ

ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿದ ನಂತರ ದೊಡ್ಡ ಕಾರ್ಪೊರೇಟ್ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಬ್ಯಾಂಕಿಂಗ್ ಪರವಾನಗಿ ನೀಡಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಭಾರತೀಯ ಖಾಸಗಿ ಬ್ಯಾಂಕುಗಳಲ್ಲಿನ ಮಾಲೀಕತ್ವದ ಕಾರ್ಪೊರೇಟ್ ರಚನೆ ಮಾರ್ಗಸೂಚಿಗಳನ್ನು ಪರಿಶೀಲಿಸಲು ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕ ಪಿ.ಕೆ.ಮಹಂತಿ ನೇತೃತ್ವದ ಸಮಿತಿಯನ್ನು ಜೂನ್‌ನಲ್ಲಿ ರಚಿಸಲಾಯಿತು.

ಈ ಸಮಿತಿಯು ಈಗಿರುವ ದೇಶದ ಖಾಸಗಿ ಬ್ಯಾಂಕ್‌ಗಳಲ್ಲಿ ಪ್ರವರ್ತಕರು(Promoters) ಗರಿಷ್ಠ ಶೇಕಡಾ 26ರವರೆಗೆ ಷೇರುಗಳನ್ನು ಹೊಂದಲು ಅವಕಾಶ ಕೊಡಬಹುದು ಎಂದು ಆರ್‌ಬಿಐಗೆ ಪ್ರಸ್ತಾವ ಸಲ್ಲಿಸಿದೆ.

English summary
Raghuram Rajan on Monday criticised RBI Internal Working Group's recommendation to allow Indian corporate houses to set up banks as part of proposed changes to the banking sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X