ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದ ಯೋಜನೆː 10 ರೂ.ಗೆ ಒಂದು ಎಲ್‌ಇಡಿ ಬಲ್ಬ್

|
Google Oneindia Kannada News

ನವದೆಹಲಿ, ಅ. 8 : ಬಡವರ ಮನೆಯಲ್ಲಿ ಬೆಳಕಿಲ್ಲ, ಅರ್ಧ ದಿನ ಕರೆಂಟ್‌ ಖೋತಾ, ಕತ್ತಲೆ ಕರ್ನಾಟಕ ಎಂಬ ಶಬ್ದಗಳು ದೂರವಾಗುವ ಕಾಲ ಹತ್ತಿರ ಬಂದಿದೆ. ಯಾಕೆಂದರೆ ಇನ್ನು ಮುಂದೆ ಕೇವಲ 10 ರೂಪಾಯಿಗೆ ಎಲ್‌ಇಡಿ ದೀಪಗಳು ದೊರೆಯಲಿವೆ.

ಇಂಧನ ಉಳಿತಾಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ. ಮಾರುಕಟ್ಟೆಯಲ್ಲಿ ಒಂದು ಎಲ್‌ಇಡಿ ದೀಪದ ಬೆಲೆ 400 ರೂ. ಇದೆ. ಆದರೆ ಸರ್ಕಾರ ಗೃಹ ಬಳಕೆಗಾಗಿ 10 ರೂಪಾಯಿಗೆ ಒಂದು ದೀಪ ನೀಡುವುದಾಗಿ ಘೋಷಿಸಿದೆ.[ಸೌರ ವಿದ್ಯುತ್ ತಯಾರಿಸಿ, ಸರ್ಕಾರಕ್ಕೆ ಮಾರಿ!]

led

ಕೇಂದ್ರ ಸರ್ಕಾರದ ಬ್ಯುರೊ ಆಫ್ ಎನರ್ಜಿ ಎಫಿಷಿಯನ್ಸಿ(ಬಿಇಇ) ಮತ್ತು ಎನರ್ಜಿ ಎಫಿಷಿಯನ್ಸಿ ಸರ್ವೀಸ್‌ ಲಿಮಿಟೆಡ್(ಇಇಎಸ್‌ಎಲ್‌) ಒಂದುಗೂಡಿ ಈ ಯೋಜನೆ ಸಾಕಾರಕ್ಕೆ ಮುಂದಾಗಿವೆ. ಇದಕ್ಕೆ ವಿದ್ಯುತ್‌ ಹಂಚಿಕೆ ಮಾಡುವ ಆಯಾ ರಾಜ್ಯಗಳ ಇಲಾಖೆ ನೆರವನ್ನು ಪಡೆಯಲಾಗಿತ್ತದೆ. ಗೃಹ ಉಪಯೋಗಕ್ಕೆ 10 ರೂಪಾಯಿಗೆ ಒಂದರಂತೆ ಎಲ್‌ಇಡಿ ಬಲ್ಬ್ ನೀಡಲಾಗುತ್ತದೆ ಎಂದು ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪದ್ಧತಿ ಅಳವಡಿಕೆ ನಂತರ ಆಯಾ ರಾಜ್ಯದ ವಿದ್ಯುತ್‌ ಪ್ರಸರಣ ನಿಗಮಗಳು ಒಂದು ನಿರ್ದಿಷ್ಟ ಅವಧಿಯ ನಂತರ ಬಂದ ಉಳಿತಾಯದಲ್ಲಿ ಎಲ್‌ಇಡಿ ದೀಪದ ಬಾಕಿ ತೀರಿಸಬೇಕು ಎಂದು ತಿಳಿಸಲಾಗಿದೆ.[ಕರ್ನಾಟಕದಲ್ಲಿ ತಲೆ ಎತ್ತಲಿವೆ 5 ಸೋಲಾರ್ ವಿದ್ಯುತ್ ಘಟಕ]

ಈಗಾಗಲೇ ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬಂದಿರುವ ಇಇಎಸ್‌ಎಲ್‌ ಎರಡು ಮಿಲಿಯನ್ ಎಲ್‌ಇಡಿ ದೀಪ ಒದಗಿಸಲು ಮುಂದಾಗಿದೆ. ಅನೇಕ ಕಂಪನಿಗಳು ಈ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದವು. ಆದರೆ ಕೊನೆಗೆ ಬಲ್ಬ್‌ವೊಂದಕ್ಕೆ 204 ರೂಪಾಯಿ ಬಿಡ್‌ ಮಾಡಿದ ಕಂಪನಿ ಗುತ್ತಿಗೆ ಪಡೆದುಕೊಂಡಿತು ಎಂದು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ರಾಜ್ಯದಲ್ಲಿ ಯೋಜನೆಗೆ ಚಾಲನೆ ನೀಡಿದ್ದಾರೆ. 10 ರೂಪಾಯಿಗೆ ರಾಜ್ಯದ ಜನರಿಗೆ ಬಲ್ಬ್‌ ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುಂಟೂರಿನಲ್ಲಿ ಕಾರ್ಯಕ್ರಮ ಆರಂಭಗೊಂಡಿದ್ದು ಅನಂತಪುರ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಸದ್ಯವೆ ಅನುಷ್ಠಾನಗೊಳ್ಳಲಿದೆ.

ರಾಜೀವ್‌ ಗಾಂಧಿ ವಿದ್ಯುದ್ದೀಕರಣ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾಥಮಿಕವಾಗಿ ಅಳವಡಿಸಲು ನಿರ್ಧರಿಸಿದೆ.

ಎಲ್‌ಇಡಿ ಬಲ್ಬ್ ಪಡೆದುಕೊಳ್ಳುವ ಶಕ್ತಿ ಎಷ್ಟು?: ಸಾಮಾನ್ಯ ವಿದ್ಯುದ್ದೀಪ ಪಡೆಯುವ ವಿದ್ಯುತ್‌ನ ಹತ್ತರಲ್ಲಿ ಒಂದು ಭಾಗ ಎಲ್‌ಇಡಿಗೆ ಸಾಕು. ಅದಕ್ಕಿಂತಲೂ ಹೆಚ್ಚಿನ ಬೆಳಕು ದೊರೆಯುವುದು ನಿಶ್ಚಿತ. ಇನ್ನು ಸಿಎಫ್ಎಲ್ ದೀಪಗಳು ಬಳಸುವ ಅರ್ಧ ವಿದ್ಯುತ್‌ ಎಲ್‌ಇಡಿಗೆ ಸಾಕು. 2010ರಲ್ಲಿ ದೇಶದಲ್ಲಿ ತಯಾರಾದ ಮೊದಲ ಎಲ್‌ಇಡಿ ದೀಪಕ್ಕೆ 1,200 ರೂ. ತಗುಲಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ.

ಪಾಂಡೀಚೇರಿಯಲ್ಲಿಯೂ ಯೋಜನೆ ಅನುಷ್ಠಾನಕ್ಕೆ ಕ್ರಮ ತೆಗೆದುಕೊಳ್ಳಲಾಗಿದೆ. ಶೀಘ್ರವೇ ದೇಶಾದ್ಯಂತ ಯೋಜನೆ ವಿಸ್ತರಿಸಲಾಗುವುದು ಎಂದು ಇಲಾಖೆ ತಿಳಿಸಿದೆ.

English summary
The power ministry launched a business model enabling the sale of LEDs to households at Rs.10 against the market price of Rs.400. The Bureau of Energy Efficiency (BEE) together with the Energy Efficiency Services Limited (EESL), which is a joint venture of four central public sector undertakings in the power sector, have worked with electricity distribution companies (discoms) to develop a business model.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X