ಪಿಎನ್ ಬಿ ಹಗರಣ: ಗೀತಾಂಜಲಿಯ ಮೆಹುಲ್ ವಿರುದ್ಧ ಕಂಗನಾ ಆರೋಪ
ಬೆಂಗಳೂರು, ಫೆಬ್ರವರಿ 21: ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣ ಪ್ರಮುಖ ಆರೋಪಿ ಗೀತಾಂಜಲಿ ಸಂಸ್ಥೆಯ ಒಡೆಯ ಮೆಹುಲ್ ಚೊಕ್ಸಿ ವಿರುದ್ಧ ಬಾಲಿವುಡ್ ನ ತಾರೆಯರು ತಿರುಗಿ ಬಿದ್ದಿದ್ದಾರೆ.
ಗೀತಾಂಜಲಿ ಸಂಸ್ಥೆಯ ಆಭರಣಗಳ ಜಾಹೀರಾತುಗಳಲ್ಲಿ ನಟಿಸಿದ್ದಕ್ಕೆ ಸಂಭಾವನೆ ಸಿಕ್ಕಿಲ್ಲ ಎಂದು ನಟಿ ಕಂಗನಾ ರನೌತ್ ಆರೋಪಿಸಿದ್ದಾರೆ.
ಗೀತಾಂಜಲಿ ಸಂಸ್ಥೆಯ ನಕ್ಷತ್ರ ಬ್ರಾಂಡ್ ಆಭರಣಗಳ ಜಾಹೀರಾತಿನಲ್ಲಿ ಕಂಗನಾ ನಟಿಸಿದ್ದರು. 2016ರಲ್ಲಿ ಇದೇ ಬ್ರಾಂಡ್ ನ ರಾಯಭಾರಿಯಾಗಿದ್ದರು.

ಮತ್ತೊಬ್ಬ ಪ್ರಮುಖ ಆರೋಪಿ ಆಭರಣ ವಿನ್ಯಾಸಗಾರ ನೀರವ್ ಮೋದಿ ಅವರ ವಿರುದ್ಧ ಜನಪ್ರಿಯ ನಟಿ ಪ್ರಿಯಾಂಕಾ ಛೋಪ್ರಾ ಅವರು ತಮಗೆ ಮೋದಿಯಿಂದ ಇನ್ನೂ ಬಾಕಿ ಮೊತ್ತ ಸಿಕ್ಕಲ್ಲವೆಂದು ಹೇಳಿ, ಕೇಸು ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ನೀರವ್ ಮೋದಿ ಒಡೆತನದ ಜ್ಯುವೆಲರಿ ಬ್ರಾಂಡ್ ಒಂದರ ಜಾಹೀರಾತಿನಲ್ಲಿ ಪ್ರಿಯಾಂಕಾ ನಟಿಸಿದ್ದರು. ಆದರೆ, ಈವರೆಗೂ ಬಾಕಿ ಮೊತ್ತ ಪಾವತಿಸಿಲ್ಲ. ಒಪ್ಪಂದದ ಪ್ರಕಾರ ಹಣ ಪಾವತಿಸದ ನೀರವ್ ಮೋದಿ ವಿರುದ್ಧ ಪ್ರಿಯಾಂಕಾ ವಂಚನೆ ಕೇಸ್ ದಾಖಲಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್ ಕೂಡಾ ಆರೋಪಿ.












Click it and Unblock the Notifications