• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿಎಂ ಆವಾಸ್ ಯೋಜನೆ: ಮನೆ ಪಡೆಯಲು ಅರ್ಹತೆ, ಪ್ರಮುಖ ವಿವರಗಳು

|

ನವದೆಹಲಿ, ನವೆಂಬರ್ 28: 2022 ರ ವೇಳೆಗೆ ಗ್ರಾಮೀಣ ಮತ್ತು ನಗರದ ಬಡವರಿಗೆ ಮನೆ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. 2015 ರಲ್ಲಿ ಪ್ರಾರಂಭಿಸಲಾದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮವಾದ ಪ್ರಧಾನ್ ಮಂತ್ರಿ ಆವಾಸ್ ಯೋಜನೆ, ಗ್ರಾಮೀಣ , ನಗರದ ಬಡವರಿಗೆ ಕೈಗೆಟುಕುವ ವಸತಿ ನೀಡುವುದಾಗಿದೆ.

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ, ಫಲಾನುಭವಿಗಳು 20 ವರ್ಷಗಳ ಕಾಲ ಗೃಹ ಸಾಲದ ಮೇಲೆ ಶೇ. 6.5ರಷ್ಟು ಮುಂಗಡ ಬಡ್ಡಿ ಸಹಾಯಧನವನ್ನು ವಿವಿಧ ಸೌಲಭ್ಯಗಳೊಂದಿಗೆ ಪಡೆಯುತ್ತಾರೆ. ಪ್ರಸ್ತುತ, ಇಂದಿರಾ ಆವಾಸ್ ಯೋಜನೆಯನ್ನು ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಎಂದು ಕರೆಯಲಾಗುತ್ತದೆ.

PM SVANidhi: 27.34 ಲಕ್ಷ ಬೀದಿ ಬದಿ ವ್ಯಾಪಾರಿಗಳಿಂದ ಸಾಲಕ್ಕಾಗಿ ಅರ್ಜಿ

ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ

ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದೆ

ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವ ಜನರು, ಪ್ರಧಾನ್ ಮಂತ್ರಿ ಆವಾಸ್ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಯೋಜನೆಯ ಲಾಭ ಪಡೆಯಲು ಇನ್ನೂ ಸಮಯವಿದೆ. ಇಡಬ್ಲ್ಯೂಎಸ್ / ಎಲ್ಐಜಿ ಆದಾಯ ಗುಂಪಿನ ಅಡಿಯಲ್ಲಿ ಬರುವ ಕುಟುಂಬಗಳಿಗೆ ಪಿಎಂಎವೈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಮಾರ್ಚ್ 2022. ಆದಾಗ್ಯೂ, ಮಧ್ಯಮ ಆದಾಯ ಗುಂಪು I ಮತ್ತು II ರ ಅಡಿಯಲ್ಲಿ ಬರುವ ಕುಟುಂಬಗಳಿಗೆ, ಪಿಎಂಎವೈ ಸಿಎಲ್ಎಸ್ಎಸ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಮಾರ್ಚ್ 2021.

ಪಿಎಂಎವೈ ಅರ್ಜಿ ಸಲ್ಲಿಸುವುದು ಹೇಗೆ?

ಪಿಎಂಎವೈ ಅರ್ಜಿ ಸಲ್ಲಿಸುವುದು ಹೇಗೆ?

ಮೊದಲು ಪಿಎಂಎವೈ ಅಧಿಕೃತ ವೆಬ್‌ಸೈಟ್‌ಗೆ https://pmaymis.gov.in/ ಗೆ ಭೇಟಿ ನೀಡಿ. 'ಸಿಟಿಜನ್ ಅಸೆಸ್ಮೆಂಟ್' ಡ್ರಾಪ್-ಡೌನ್ ಮೆನು ಅಡಿಯಲ್ಲಿ, ಇತರ 3 ಕಾಂಪೋನೆಂಟ್ಸ್‌ ಅಡಿಯಲ್ಲಿ 'ಬೆನಿಫಿಟ್' ಆಯ್ಕೆಯನ್ನು ಆರಿಸಿ. ಆಧಾರ್ ಪ್ರಕಾರ ನಿಮ್ಮ ಆಧಾರ್ ಅಥವಾ ವರ್ಚುವಲ್ ಐಡಿ ಮತ್ತು ಹೆಸರನ್ನು ನಮೂದಿಸಿ. ನಂತರ ನಿಮಗೆ ಹೊಸ ಪೇಜ್ ತೆರಯಲಿದ್ದು, ಅಲ್ಲಿ ನೀವು PMAY ಅರ್ಜಿ ನಮೂನೆಯನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಬೇಕಾಗುತ್ತದೆ. ಡಿಸ್‌ಕ್ಲೈಮರ್ ಚೆಕ್‌ಬಾಕ್ಸ್ ಕ್ಲಿಕ್ ಮಾಡಿ, ಕ್ಯಾಪ್ಚಾ ನಮೂದಿಸಿ ಮತ್ತು 'ಸೇವ್' ಬಟನ್ ಕ್ಲಿಕ್ ಮಾಡಿ.

ಭಾರೀ ಪ್ರಮಾಣದಲ್ಲಿ ಇಳಿಕೆಗೊಂಡಿದೆ ಗೃಹ ಸಾಲ ಬಡ್ಡಿ ದರ: ದಶಕದಲ್ಲಿ ಕನಿಷ್ಠ ಮಟ್ಟ

ಪಿಎಂಎವೈ ಆನ್‌ಲೈನ್ ಅರ್ಜಿ ನಮೂನೆ

ಪಿಎಂಎವೈ ಆನ್‌ಲೈನ್ ಅರ್ಜಿ ನಮೂನೆ

ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಆನ್‌ಲೈನ್ ಅಪ್ಲಿಕೇಶನ್ ಫಾರ್ಮ್ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಫಾರ್ಮ್ ಅನ್ನು ಭರ್ತಿ ಮಾಡುವಾಗ, ಅರ್ಜಿದಾರರು ಈ ಕೆಳಗಿನ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.

ರಾಜ್ಯದ ಹೆಸರು, ಜಿಲ್ಲೆಯ ಹೆಸರು, ನಗರದ ಹೆಸರು, ನಿಮ್ಮ ವೈಯಕ್ತಿಕ ಮಾಹಿತಿ, ಶಾಶ್ವತ ವಿಳಾಸ, ಮೊಬೈಲ್ ನಂಬರ್, ಆಧಾರ್ / ವರ್ಚುವಲ್ ಐಡಿ ನಂ. ಮತ್ತು ಬಿಪಿಎಲ್ ಕಾರ್ಡ್ ಸಂಖ್ಯೆ (ಅನ್ವಯಿಸಿದರೆ)

ಅರ್ಜಿ ಭರ್ತಿ ಮಾಡಲು ಪ್ರಮುಖ ಮಾರ್ಗಸೂಚಿಗಳು

ಅರ್ಜಿ ಭರ್ತಿ ಮಾಡಲು ಪ್ರಮುಖ ಮಾರ್ಗಸೂಚಿಗಳು

ಆನ್‌ಲೈನ್ ಅರ್ಜಿ ಭರ್ತಿ ಮಾಡುವ ಪ್ರಮುಖ ಮಾರ್ಗಸೂಚಿಗಳು ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಅಥವಾ ನೋಂದಾಯಿತ ಸಾಮಾನ್ಯ ಸೇವಾ ಕೇಂದ್ರದಲ್ಲಿ (ಸಿಎಸ್‌ಸಿ) ಲಭ್ಯವಿದೆ. ಈ ಎರಡನ್ನು ಹೊರತುಪಡಿಸಿ ಇತರ ಪ್ಲ್ಯಾಟ್‌ಫಾರ್ಮ್‌ಗಳು ಪಿಎಂಎವೈ ನೋಂದಣಿಗಳನ್ನು ಸ್ವೀಕರಿಸಲು ಅಧಿಕಾರ ಹೊಂದಿಲ್ಲ. ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡುವ ಮೊದಲು, ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂ ಆವಾಸ್ ಯೋಜನೆ) ಗೆ ಅರ್ಜಿ ಸಲ್ಲಿಸಲು ಬೇಕಾದ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿಡಿ.

ಪಿಎಂಎವೈ ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆ ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದ ವ್ಯಕ್ತಿಗಳು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರದಿಂದ (ಸಿಎಸ್‌ಸಿ) ಅರ್ಜಿ ಸಲ್ಲಿಸಬಹುದು.

English summary
In this article explained Eligibility, Important Details of Pradhan mantri awas yojana and also how to apply only for PMAY.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X