ಮತ್ತೊಂದು ದಾಖಲೆಯ ಮಟ್ಟವನ್ನ ತಲುಪಿದ ಪೆಟ್ರೋಲ್, ಡೀಸೆಲ್ ದರ
ನವದೆಹಲಿ, ಜನವರಿ 27: ವಾಹನ ಸವಾರರು ಮತ್ತಷ್ಟು ಕಂಗಾಲಾಗುವ ಸುದ್ದಿ ಇಲ್ಲಿದೆ. ಏಕೆಂದರೆ ಪೆಟ್ರೋಲ್, ಡೀಸೆಲ್ ದರ ಇದೀಗ ಮತ್ತಷ್ಟು ಏರಿಕೆಗೊಂಡಿದೆ. ಬುಧವಾರ ಸರ್ಕಾರಿ ತೈಲ ಸಂಸ್ಥೆಗಳು ತೈಲ ಬೆಲೆಯನ್ನು ಏರಿಕೆ ಮಾಡಿದ್ದು, ಮತ್ತಷ್ಟು ಹೊಸ ದಾಖಲೆಯ ಮಟ್ಟವನ್ನು ತಲುಪಿದೆ.
ನವದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 25 ಪೈಸೆ ಹೆಚ್ಚಳಗೊಂಡು 86.30 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಲೀಟರ್‌ಗೆ 25 ಪೈಸೆ ಏರಿಕೆಗೊಂಡು 76.48 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 27: 89.21 (26 ಪೈಸೆ ಏರಿಕೆ)
ಜನವರಿ 26: 88.95
ಜನವರಿ 25: 88.59
ಜನವರಿ 24: 88.59
ಡೀಸೆಲ್ (ಪ್ರತಿ ಲೀಟರ್)
ಜನವರಿ 27: 81.10 (26 ಪೈಸೆ ಏರಿಕೆ)
ಜನವರಿ 26: 80.84
ಜನವರಿ 25: 80.47
ಜನವರಿ 24: 80.47

ನವದೆಹಲಿಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 27: 86.30 (25 ಪೈಸೆ ಏರಿಕೆ)
ಜನವರಿ 26: 86.05
ಜನವರಿ 25: 85.70
ಜನವರಿ 24: 85.70
ಡೀಸೆಲ್ (ಪ್ರತಿ ಲೀಟರ್)
ಜನವರಿ 27: 86.30 (25 ಪೈಸೆ ಏರಿಕೆ)
ಜನವರಿ 26: 86.05
ಜನವರಿ 25: 85.70
ಜನವರಿ 24: 85.70

ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 27: 92.86 (24 ಪೈಸೆ ಏರಿಕೆ)
ಜನವರಿ 26: 92.62
ಜನವರಿ 25: 92.28
ಜನವರಿ 24: 92.28
ಡೀಸೆಲ್ (ಪ್ರತಿ ಲೀಟರ್)
ಜನವರಿ 27: 83.30 (27 ಪೈಸೆ ಏರಿಕೆ)
ಜನವರಿ 26: 83.03
ಜನವರಿ 25: 82.66
ಜನವರಿ 24: 82.66

ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 27: 88.82 (22 ಪೈಸೆ ಏರಿಕೆ)
ಜನವರಿ 26: 88.60
ಜನವರಿ 25: 88.29
ಜನವರಿ 24: 88.29
ಡೀಸೆಲ್ (ಪ್ರತಿ ಲೀಟರ್)
ಜನವರಿ 27: 81.71 (24 ಪೈಸೆ ಏರಿಕೆ)
ಜನವರಿ 26: 81.47
ಜನವರಿ 25: 81.14
ಜನವರಿ 24: 81.14

ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜನವರಿ 27: 89.77 (26 ಪೈಸೆ ಏರಿಕೆ)
ಜನವರಿ 26: 89.51
ಜನವರಿ 25: 89.15
ಜನವರಿ 24: 89.15
ಡೀಸೆಲ್ (ಪ್ರತಿ ಲೀಟರ್)
ಜನವರಿ 27: 83.46 (27 ಪೈಸೆ ಏರಿಕೆ)
ಜನವರಿ 26: 83.19
ಜನವರಿ 25: 82.80
ಜನವರಿ 24: 82.80

ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.












Click it and Unblock the Notifications