ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಮತ್ತೊಮ್ಮೆ ಏರಿಕೆ
ನವದೆಹಲಿ, ಫೆಬ್ರವರಿ 16: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಮಂಗಳವಾರ(ಫೆ.16) ಮತ್ತೊಮ್ಮೆ ತೈಲ ದರ ಏರಿಕೆ ಮಾಡಿದ್ದು, ಸತತವಾಗಿ ಎಂಟನೇ ದಿನದಂದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 30 ಪೈಸೆ ಏರಿಕೆಗೊಂಡು 89.29 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 32 ಪೈಸೆ ಹೆಚ್ಚಾಗಿ 79.70 ರೂಪಾಯಿಗೆ ಮುಟ್ಟಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ವಾಹನ ಸವಾರರಿಗೆ ಕಹಿ ಸುದ್ದಿ, ಪೆಟ್ರೋಲ್, ಡೀಸೆಲ್ ಬೆಲೆ ತಗ್ಗಲ್ಲ!
ದಾಖಲೆ ಪ್ರಮಾಣದಲ್ಲಿ ಇಂಧನ ದರ ಏರಿಕೆಗೆ ಅನೇಕ ಕಾರಣಗಳಿದ್ದರೂ ಸದ್ಯಕ್ಕೆ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಕಾರಣ ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 60 ಯುಎಸ್ ಡಾಲರ್ ನಷ್ಟಾಗಿದೆ. ಇಂಧನ ಬೇಡಿಕೆ ಸುಧಾರಣೆಯ ನಿರೀಕ್ಷೆಯಲ್ಲಿ ತೈಲ ಸಂಸ್ಥೆಗಳು ಪೂರೈಕೆ ತಡೆ ಹಿಡಿದಿರುವುದು ಜಾಗತಿಕವಾಗಿ ತೈಲ ಬೆಲೆಯಲ್ಲಿ ಭಾರಿ ವ್ಯತ್ಯಾಸಕ್ಕೆ ಕಾರಣವಾಗಿದೆ.
ಈ ನಡುವೆ ಇಂಧನ ಮೇಲಿನ ಅಬಕಾರಿ ಸುಂಕ ಇಳಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿವೆ. ಕೆಲ ರಾಜ್ಯಗಳು ಮಾತ್ರ ತಮ್ಮ ಪಾಲಿನ ವ್ಯಾಟ್, ಸೆಸ್ ಕಡಿಮೆ ಮಾಡಿ ಜನತೆಗೆ ನೆಮ್ಮದಿ ಸುದ್ದಿ ನೀಡಿವೆ. ರಾಜ್ಯಗಳು ಹಾಕುವ ಸೆಸ್ ಕಡಿಮೆ ಮಾಡುವುದರಿಂದ ಕನಿಷ್ಠ 2 ರಿಂದ 5 ರು ತನಕವಾದರೂ ಪ್ರತಿ ಲೀಟರ್ ಮೇಲಿನ ಬೆಲೆ ಹೊರೆಯನ್ನು ತಗ್ಗಿಸಬಹುದಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಾಹಿತಿ ಈ ಕೆಳಗಿದೆ.
ನಗರ-ಪೆಟ್ರೋಲ್- ಡೀಸೆಲ್ ರು/ಲೀಟರ್
ದೆಹಲಿ: ಪೆಟ್ರೋಲ್ 89.29 ; ಡೀಸೆಲ್ 79.70
ಮುಂಬೈ: ಪೆಟ್ರೋಲ್ 95.75 ; ಡೀಸೆಲ್ 86.72
ಚೆನ್ನೈ: ಪೆಟ್ರೋಲ್ 91.45 ; ಡೀಸೆಲ್ 84.77
ಹೈದರಾಬಾದ್: ಪೆಟ್ರೋಲ್ 92.84 ; ಡೀಸೆಲ್ 86.93
ಬೆಂಗಳೂರು:ಪೆಟ್ರೋಲ್ 92.28 ; ಡೀಸೆಲ್ 84.49