ಜೂನ್ 26ರಂದು ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ; ಯಾವ ನಗರದಲ್ಲಿ ಎಷ್ಟಿದೆ?
ನವದೆಹಲಿ, ಜೂನ್ 26: ದೇಶದಲ್ಲಿ ಶನಿವಾರ ಇಂಧನ ದರ ಮತ್ತೊಮ್ಮೆ ಏರಿಕೆಯಾಗಿದೆ. ದೇಶದ ಪ್ರಮುಖ ಮೂರು ತೈಲ ಕಂಪನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಶನಿವಾರ (ಜೂನ್ 26) ಪರಿಷ್ಕರಣೆ ಮಾಡಿ, ಲೀಟರಿಗೆ 35 ಪೈಸೆಯಷ್ಟು ಬೆಲೆ ಏರಿಸಿವೆ.
ಈ ಮೂಲಕ ಜೂನ್ ತಿಂಗಳಿನಲ್ಲಿ ಇಂಧನ ಬೆಲೆ ಒಟ್ಟಾರೆ 14ನೇ ಬಾರಿ ಏರಿಕೆಯಾದಂತಾಗಿದೆ. ಶನಿವಾರದ ಬೆಲೆ ಏರಿಕೆಯಿಂದ ಲೀಟರ್ ಪೆಟ್ರೋಲ್‌ಗೆ 100 ರೂ ಗಡಿ ದಾಟಿದ ರಾಜ್ಯಗಳ ಪಟ್ಟಿಗೆ ಮತ್ತೆರಡು ರಾಜ್ಯಗಳು ಸೇರ್ಪಡೆಯಾಗಿವೆ. ಪಾಟ್ನಾ ಹಾಗೂ ತಿರುವನಂತಪುರಂನಲ್ಲಿ ಶನಿವಾರ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ.
ದೆಹಲಿಯಲ್ಲಿ ದರ ಶನಿವಾರ ಪೆಟ್ರೋಲ್ ಪ್ರತಿ ಲೀಟರ್‌ಗೆ 98.11 ರೂ ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 88.65 ರೂಗೆ ತಲುಪಿದೆ. ಮೆಟ್ರೋ ನಗರಗಳಲ್ಲಿ ಶನಿವಾರದಂದು ಇಂಧನ ಬೆಲೆ ಎಷ್ಟಿದೆ? ಮುಂದಿದೆ ವಿವರ...

ನಗರ-ಇಂಧನ ದರ ಪ್ರತಿ ಲೀಟರ್ ರೂಗಳಲ್ಲಿ
ನವದೆಹಲಿ: ಪೆಟ್ರೋಲ್ 98.11 ರೂ- ಡೀಸೆಲ್ 88.65 ರೂ
ಕೋಲ್ಕತಾ: ಪೆಟ್ರೋಲ್ 97.97 ರೂ- ಡೀಸೆಲ್ 91.50 ರೂ
ಮುಂಬೈ: ಪೆಟ್ರೋಲ್ 104.22 ರೂ- ಡೀಸೆಲ್ 96.16 ರೂ
ಚೆನ್ನೈ: ಪೆಟ್ರೋಲ್ 99.19 ರೂ- ಡೀಸೆಲ್ 93.23 ರೂ
ಬೆಂಗಳೂರು: ಪೆಟ್ರೋಲ್ 101.39 ರೂ- ಡೀಸೆಲ್ 93.99 ರೂ
ತಿರುವನಂತಪುರಂ: ಪೆಟ್ರೋಲ್ 100.09 ರೂ- ಡೀಸೆಲ್ 95.19 ರೂ
ಪಾಟ್ನ: ಪೆಟ್ರೋಲ್ 100.14 ರೂ- ಡೀಸೆಲ್ 93.63 ರೂ
ಹೈದರಾಬಾದ್: ಪೆಟ್ರೋಲ್ 101.96 ರೂ- ಡೀಸೆಲ್ 96.63 ರೂ

ಮುಂಬೈ ನಗರದಲ್ಲಿ ದಾಖಲೆಯ ಏರಿಕೆ
ಮೆಟ್ರೋ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ ಪೆಟ್ರೋಲ್ ದರ ಆಗಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ 104.22 ರೂ ಇದ್ದು, ಡೀಸೆಲ್ ಬೆಲೆ 96.16 ರೂ ಆಗಿದೆ. ಮೇ 29ರಂದು ಮೊದಲ ಬಾರಿಗೆ ಮುಂಬೈನಲ್ಲಿ ಪೆಟ್ರೋಲ್ ದರ 100 ರೂ ಗಡಿ ದಾಟಿತ್ತು. ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಲಡಾಕ್ ಅಲ್ಲದೇ ಮಹಾರಾಷ್ಟ್ರದ ಕೆಲ ಪಟ್ಟಣಗಳಲ್ಲೂ ಪೆಟ್ರೋಲ್ ಬೆಲೆ 100 ರೂ ಗಡಿ ದಾಟಿದೆ.

ತಿರುವನಂತಪುರಂ, ಪಾಟ್ನಾದಲ್ಲಿ ನೂರರ ಗಡಿ ದಾಟಿದ ಇಂಧನ ಬೆಲೆ
ಶನಿವಾರದ ಬೆಲೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲಿಗೆ ನೂರು ರೂ ದಾಟಿದ ರಾಜ್ಯಗಳ ಪಟ್ಟಿಗೆ ಇನ್ನೆರಡು ರಾಜ್ಯಗಳು ಸೇರ್ಪಡೆಯಾಗಿವೆ. ಕೇರಳದ ತಿರುವವನಂತಪುರಂ ಹಾಗೂ ಬಿಹಾರದ ಪಾಟ್ನಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ ನೂರಕ್ಕಿಂತ ಹೆಚ್ಚು ದಾಖಲಾಗಿದೆ.

ಕಚ್ಚಾ ತೈಲ ಬೆಲೆ ಮೇಲೆ ಇಂಧನ ಬೆಲೆ ಅವಲಂಬಿತ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.












Click it and Unblock the Notifications