• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮತ್ತೆ ಇಂಧನ ದರದಲ್ಲಿ ಏರಿಕೆ; ಮುಂಬೈನಲ್ಲಿ 100ರ ಗಡಿ ದಾಟಿದ ಪೆಟ್ರೋಲ್...

|

ನವದೆಹಲಿ, ಮೇ 29: ದೇಶದಲ್ಲಿ ಶನಿವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಈ ಮೂಲಕ ಮೇ ತಿಂಗಳಿನಲ್ಲಿ ಹದಿನೈದನೇ ಬಾರಿ ಬೆಲೆ ಏರಿಕೆಯಾದಂತಾಗಿದೆ. ಈ ಬೆಲೆ ಏರಿಕೆಯೊಂದಿಗೆ ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ ಶತಕ ದಾಟಿದೆ.

ಸರ್ಕಾರಿ ತೈಲ ಕಂಪನಿಗಳು ಶನಿವಾರ ಇಂಧನ ದರ ಪರಿಷ್ಕರಿಸಿ ಲೀಟರ್ ಪೆಟ್ರೋಲ್‌ಗೆ 26 ಪೈಸೆ ಏರಿಕೆ ಮಾಡಿದ್ದು,, ಡೀಸೆಲ್‌ಗೆ 28 ಪೈಸೆ ಏರಿಕೆ ಮಾಡಿವೆ. ಮೇ 4ರಿಂದ ಆರಂಭವಾಗಿ ಮೇ 27ರಂದು ಕೊನೆಯದಾಗಿ ಬೆಲೆ ಏರಿಕೆಯಾಗಿತ್ತು. ಮೇ 27ರಂದು ಪೆಟ್ರೋಲ್ ಬೆಲೆ 24 ಪೈಸೆ ಹಾಗೂ ಡೀಸೆಲ್ ಬೆಲೆ 29 ಪೈಸೆ ಏರಿಕೆಯಾಗಿತ್ತು. ಇಂದಿನ ಬೆಲೆ ಏರಿಕೆಯಿಂದ ತಿಂಗಳಿನಲ್ಲಿ ಲೀಟರ್ ಪೆಟ್ರೋಲ್ ಬೆಲೆ 3.44 ರೂ ಹಾಗೂ ಲೀಟರ್ ಡೀಸೆಲ್‌ಗೆ 4.16 ರೂ ಏರಿಕೆ ಕಂಡಂತಾಗಿದೆ.

ಮೇ ತಿಂಗಳಲ್ಲಿ 14ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆಮೇ ತಿಂಗಳಲ್ಲಿ 14ನೇ ಬಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ

ಇದೀಗ ಶನಿವಾರ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಯಾಗಿ ಗರಿಷ್ಠಮಟ್ಟ ತಲುಪಿವೆ. ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಮುಂದೆ ಓದಿ...

 ನಗರ-ಇಂಧನ ದರ ಪ್ರತಿ ಲೀಟರ್ ರೂಗಳಲ್ಲಿ

ನಗರ-ಇಂಧನ ದರ ಪ್ರತಿ ಲೀಟರ್ ರೂಗಳಲ್ಲಿ

ನವದೆಹಲಿ: ಪೆಟ್ರೋಲ್ 93.94 ರೂ- ಡೀಸೆಲ್ 84.89 ರೂ
ಕೋಲ್ಕತಾ: ಪೆಟ್ರೋಲ್ 93.97 ರೂ- ಡೀಸೆಲ್ 87.74 ರೂ
ಮುಂಬೈ: ಪೆಟ್ರೋಲ್ 100.19 ರೂ- ಡೀಸೆಲ್ 92.17ರೂ
ಚೆನ್ನೈ: ಪೆಟ್ರೋಲ್ 95.51 ರೂ- ಡೀಸೆಲ್ 89.65 ರೂ
ಬೆಂಗಳೂರು: ಪೆಟ್ರೋಲ್ 97.07ರೂ - ಡೀಸೆಲ್ 89.99 ರೂ
ಪಾಟ್ನಾ: ಪೆಟ್ರೋಲ್ 96.44 ರೂ- ಡೀಸೆಲ್ 90.47 ರೂ
ಹೈದರಾಬಾದ್: ಪೆಟ್ರೋಲ್ 97.63 ರೂ- ಡೀಸೆಲ್ 92.54 ರೂ

 ಮುಂಬೈನಲ್ಲಿ ದಾಖಲೆ ಬರೆದ ಪೆಟ್ರೋಲ್ ಬೆಲೆ

ಮುಂಬೈನಲ್ಲಿ ದಾಖಲೆ ಬರೆದ ಪೆಟ್ರೋಲ್ ಬೆಲೆ

ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಈಗಾಗಲೇ ಪೆಟ್ರೋಲ್ ಬೆಲೆ ನೂರು ರೂಪಾಯಿ ದಾಟಿತ್ತು. ಮುಂಬೈನಲ್ಲಿ ಕೂಡ ನೂರರ ಅಂಚಿಗೆ ಇದ್ದು, ಶನಿವಾರ ನೂರರ ಗಡಿಯನ್ನು ದಾಟಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 100.19 ರೂ ಇದ್ದರೆ, ಡೀಸೆಲ್ ಬೆಲೆ 92.17 ರೂ ಇದೆ. ಈ ಮೂಲಕ ದಾಖಲೆಯ ಏರಿಕೆ ಇದಾಗಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚಿನ ಬೆಲೆಯಲ್ಲಿ ಪೆಟ್ರೋಲ್ ಮಾರಾಟವಾಗುತ್ತಿದೆ. ಅಲ್ಲಿ ಲೀಟರ್ ಪೆಟ್ರೋಲ್‌ಗೆ 104.94ರೂ ಇದ್ದರೆ, ಲೀಟರ್ ಡೀಸೆಲ್‌ಗೆ 97.79% ರೂಗೆ ಮಾರಾಟವಾಗುತ್ತಿದೆ.

ಮೇ 26ರಂದು ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಇಲ್ಲಮೇ 26ರಂದು ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಇಲ್ಲ

 ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಶುಕ್ರವಾರ ಏರಿಕೆ ಕಂಡಿತ್ತು. 68.36 ಯುಎಸ್ ಡಾಲರ್(1 USD=72.74 ರೂ) ಪ್ರತಿ ಬ್ಯಾರೆಲ್‌ನಷ್ಟಿದೆ. ಕಚ್ಚಾ ತೈಲ ಬೆಲೆ ಫೆಬ್ರವರಿಯಲ್ಲಿ 61.22 ಡಾಲರ್, ಮಾರ್ಚ್ ತಿಂಗಳಲ್ಲಿ 64.73 ಡಾಲರ್ ಹಾಗೂ ಏಪ್ರಿಲ್ ತಿಂಗಳಲ್ಲಿ 66 ಡಾಲರ್ ನಷ್ಟಿತ್ತು. ಭಾರತ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ ಪೆಟ್ರೋಲ್ ಮೇಲೆ 32. 98ರು ಹಾಗೂ ಡೀಸೆಲ್ ಮೇಲೆ 31.80 ರು ನಷ್ಟಿದೆ.

 ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ

ಕಚ್ಚಾ ತೈಲ ಬೆಲೆ ನೋಡಿಕೊಂಡು ಬೆಲೆ ನಿರ್ಧಾರ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary
Petrol Diesel Price Rates increased on saturday (May 29) across India. Check out prices in major cities in india...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X